ಬೆಂಗಳೂರು: ಪೇದೆ ಮುಖಕ್ಕೆ ಉಗಿದು, ಡ್ರ್ಯಾಗರ್ ತೋರಿಸಿದ ರೌಡಿಗೆ ಧರ್ಮದೇಟು

ಸಂಚಾರಿ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಪೇದೆಯೊಬ್ಬರ ಮುಖಕ್ಕೆ ಉಗುಳಿ, ಮಾರಕಾಸ್ತ್ರ ತೋರಿಸಿ ಎಚ್ಚರಿಕೆ ನೀಡಿ ಪರಾರಿಯಾಗುತ್ತಿದ್ದ ರೌಡಿಯೊಬ್ಬನನ್ನು ಸಾರ್ವಜನಿಕರೇ ಹಿಡಿದು ಥಳಿಸಿರುವ ಘಟನೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಪೇದೆಯೊಬ್ಬರ ಮುಖಕ್ಕೆ ಉಗುಳಿ, ಮಾರಕಾಸ್ತ್ರ ತೋರಿಸಿ ಎಚ್ಚರಿಕೆ ನೀಡಿ ಪರಾರಿಯಾಗುತ್ತಿದ್ದ ರೌಡಿಯೊಬ್ಬನನ್ನು ಸಾರ್ವಜನಿಕರೇ ಹಿಡಿದು ಥಳಿಸಿರುವ ಘಟನೆ ನಡೆದಿದೆ.

ಪುಲಿಕೇಶಿನಗರ ನಿವಾರಿ ಅರ್ಬಾಜ್ ಅಹ್ಮದ್ (33) ಆರೋಪಿಯಾಗಿದ್ದಾನೆ. ಮಾ.5ರಂದು ಪುಲಕೇಶಿನಗರ ಸಂಚಾರ ಠಾಣೆಯ ಸಿಬ್ಬಂದಿ ಮಂಜುನಾಥ್ ಮತ್ತು ಚೇತನ್ ಕ್ಲಾರೆನ್ಸ್ ಶಾಲೆ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು.  ಈ ವೇಳೆ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ಅರ್ಬಾಜ್ ನನ್ನು ಪೊಲೀಸರು ತಡೆದಿದ್ದರು.

ಬೈಕ್ ನ ನಂಬರ್ ಪ್ಲೇಟ್ ಕೂಡ ದೋಷಪೂರಿತವಾಗಿತ್ತು. ಪೊಲೀಸರು ತನ್ನನ್ನು ಹಿಡಿಯುತ್ತಾರೆಂದು ಭಾವಿಸಿದ ಅರ್ಬಾಜ್, ವ್ಹೀಲಿಂಗ್ ರೀತಿಯಲ್ಲಿ ಮಾಡಿಕೊಂಡೇ ಬೈಕ್ ತಿರುಗಿಸಿದ್ದ. ಅದನ್ನು ಗಮನಿಸಿದ ಪೇಡೆ ಹಿಡಿಯಲು ುಂದಾಗಿದ್ದರು. ಈ ವೇಳೆ ಆರೋಪಿ ಪೇದೆ ಮುಖಕ್ಕೆ ಉಗುಳಿಸ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಲ್ಲದೆ ಡ್ರ್ಯಾಗರ್ ತೋರಿಸಿ ಎಚ್ಚರಿಸಿ ಪರಾರಿಯಾಗಿದ್ದ. ಕೂಡಲೇ ಸಿಬ್ಬಂದಿ ಆರೋಪಿಯ ಬೈಕ್ ಬೆನ್ನಟ್ಟಿದ್ದರು. ಅದನ್ನು ಗಮನಿಸಿದ ಸಾರ್ವಜನಿಕರು ಸಿಬ್ಬಂದಿಯ ನೆರವಿಗೆ ಧಾವಿಸಿ ಆರೋಪಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com