ಭೂಮಿ ವೆಬ್ ಸೈಟ್ ನಲ್ಲಿ ಗ್ರಾಮಗಳ ನಕ್ಷೆಗಳನ್ನು ಹುಡುಕಿ!

ಕಂದಾಯ ಇಲಾಖೆ ತನ್ನ ದಾಖಲೆಗಳಲ್ಲಿರುವ ರಾಜ್ಯದ ಎಲ್ಲಾ ಗ್ರಾಮಗಳ ಎಲ್ಲ ನಕ್ಷೆಗಳನ್ನು ಡಿಜಿಟಲೀಕರಣ ಹಾಗೂ ನವೀಕರಣಗೊಳಿಸುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಂದಾಯ ಇಲಾಖೆ ತನ್ನ ದಾಖಲೆಗಳಲ್ಲಿರುವ ರಾಜ್ಯದ ಎಲ್ಲಾ ಗ್ರಾಮಗಳ ಎಲ್ಲ ನಕ್ಷೆಗಳನ್ನು ಡಿಜಿಟಲೀಕರಣ ಹಾಗೂ ನವೀಕರಣಗೊಳಿಸುತ್ತಿದೆ. 

ಸರ್ವೇಯಲ್ಲಿ ಸಂಗ್ರಹವಾಗಿರುವ ಅಥವಾ ಬೆಂಗಳೂರಿನ ಕೇಂದ್ರ ಕಚೇರಿಯ ದಾಖಲೆಗಳಲ್ಲಿರುವ ಎಲ್ಲಾ ನಕ್ಷೆಗಳನ್ನು ಲ್ಯಾಮಿನೇಟ್  ಅಥವಾ ಮೈಕ್ರೋ ಫಿಲ್ಮಿಂ ಮಾಡುವುದಕ್ಕೆ ಸಂಬಂಧಿಸಿದಂತೆ ಪರಿಣಿತರು ಹಾಗೂ ಸರ್ಕಾರದ ಅಭಿಪ್ರಾಯವನ್ನು ಇಲಾಖೆ ಕೋರಿದೆ

2015ರಿಂದ ಈವರೆಗೂ 4 ಕೋಟಿಗಳಷ್ಟು ದಾಖಲೆಗಳನ್ನು ಡಿಜಿಟಲ್ ಮಾಡಲಾಗಿದೆ. ಇದೀಗ ಹೆಚ್ಚಿನ ಆಸ್ತಿಗಳ  ಬಗ್ಗೆ ಮಾಹಿತಿಯನ್ನು ಸೇರಿಸಲಾಗುತ್ತಿದೆ. ಇದರಿಂದಾಗಿ ಇಲಾಖೆ ವೆಬ್ ಪೋರ್ಟಲ್ ಮತ್ತು ಭೂಮಿ ಆ್ಯಪ್ ನಲ್ಲಿ ವ್ಯಕ್ತಿಯು ಆಸ್ತಿಯ ಬಗ್ಗೆ ಮಾಹಿತಿಯನ್ನು ನೋಡಬಹುದಾಗಿದೆ ಎಂದು ಸರ್ವೇ ಮತ್ತು ಪರಿಹಾರ ಆಯುಕ್ತ ತ್ರಿಲೋಕ್ ಚಂದ್ರ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

ಡ್ರೋಣ್  ಮೂಲಕ ಮಾಡಲಾದ ಆಸ್ತಿ ಸರ್ವೆ ಮಾಹಿತಿಯನ್ನು ಇಲಾಖೆ ಆಪ್ ಡೇಟ್ ಮಾಡಿದೆ. ರಾಮನಗರ, ತುಮಕೂರು ಮತ್ತು ಜಯನಗರದಲ್ಲಿಈ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಪ್ರಕ್ರಿಯೆಯನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲು ಇಲಾಖೆ ಸರ್ಕಾರವನ್ನು ಒತ್ತಾಯಿಸಿದೆ. 

1863ರಿಂದಲೂ ಮೂಲ ನಕ್ಷೆ ಸೇರಿದಂತೆ 1902 ರಿಂದ 1950 ರವರೆಗಿನ ಪುನರ್ ಸರ್ವೇ ನಕ್ಷೆಗಳನ್ನು ಡಿಜಿಟಲೀಕರಣಗೊಳಿಸಲಾದ ನಕ್ಷೆಗಳು ಒಳಗೊಂಡಿದೆ. 33 , 891 ಶೀಟ್ ಗಳಲ್ಲಿ ಬಿಡಿಸಲಾದ  32, 525 ಗ್ರಾಮಗಳ ನಕ್ಷೆಗಳನ್ನು ಇಲಾಖೆ ತನ್ನ ದಾಖಲೆ ಕೊಠಡಿಯಲ್ಲಿ ಸಂಗ್ರಹಿಸಿದೆ.

ಪ್ರತಿಯೊಂದು ನಕ್ಷೆಯೂ ಇತಿಹಾಸ ಹೊಂದಿದ್ದು,ತುರ್ತಾಗಿ ಲ್ಯಾಮಿನೇಟ್ ಮಾಡಬೇಕಾದ ಕಾರ್ಯವಾಗಬೇಕಿದೆ. ಆದಾಗ್ಯೂ, ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗುತ್ತಿದ್ದು, ಇಲ್ಲಿರುವ ದಾಖಲೆಗಳು ಶಾಶ್ವತವಾಗಿ ಇರಲಿವೆ ಎಂದು ಕಂದಾಯ ಇಲಾಖೆಯ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com