ಬೆಂಗಳೂರು: ಸೆಕ್ಸ್, ಮಜಾ ಮಾಡೋಕೆ ಸೈ, ಮದುವೆಗೆ ಮಾತ್ರ ಒಲ್ಲೆ ಎಂದ ಪ್ರಿಯಕರ, ದೂರು ದಾಖಲು!

ಆರು ವರ್ಷಗಳ ಕಾಲ ಪ್ರೀತಿಯ ಹೆಸರಲ್ಲಿ ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದಲ್ಲದೆ ಗರ್ಭಪಾತ ಸಹ ಮಾಡಿಸಿದ್ದ ಪ್ರಿಯಕರ ಇದೀಗ ಮದುವೆ ಮಾಡಿಕೊಳ್ಳಲು ಒಲ್ಲೆ ಎನ್ನುತ್ತಿದ್ದಾನೆ. ಇದರ ಜೊತೆಗೆ ಖಾಸಗಿ ಫೋಟೋಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಯುವತಿಯೋರ್ವಳು ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

Published: 18th March 2020 08:29 PM  |   Last Updated: 18th March 2020 08:29 PM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : Online Desk

ಬೆಂಗಳೂರು: ಆರು ವರ್ಷಗಳ ಕಾಲ ಪ್ರೀತಿಯ ಹೆಸರಲ್ಲಿ ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದಲ್ಲದೆ ಗರ್ಭಪಾತ ಸಹ ಮಾಡಿಸಿದ್ದ ಪ್ರಿಯಕರ ಇದೀಗ ಮದುವೆ ಮಾಡಿಕೊಳ್ಳಲು ಒಲ್ಲೆ ಎನ್ನುತ್ತಿದ್ದಾನೆ. ಇದರ ಜೊತೆಗೆ ಖಾಸಗಿ ಫೋಟೋಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಯುವತಿಯೋರ್ವಳು ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

30 ವರ್ಷದ ಯುವತಿ ಚಂದ್ರಲೇಔಟ್ ನಿವಾಸಿ ರವಿಚಂದ್ರ ವಿರುದ್ಧ ದೂರು ನೀಡಿದ್ದಾಳೆ. ಮದುವೆಯಾಗು ಎಂದು ಕೇಳಿದ್ದಕ್ಕೆ ಜೀವಬೆದರಿಕೆ ಹಾಕಿದ್ದಾನೆ. ಇದರ ಜೊತೆಗೆ ತಾವು ಏಕಾಂತದಲ್ಲಿದ್ದ ಫೋಟೋಗಳನ್ನು ಇದೀಗ ವೈರಲ್ ಮಾಡುವ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿದ್ದಾಳೆ. 

ಕಳೆದ ಆರು ವರ್ಷಗಳಿಂದ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿದ್ದ. ಮೊದಲ ಬಾರಿ ನನ್ನ ತಾಯಿ ಊರಿಗೆ ಹೋಗಿದ್ದಾಗ ಬಲವಂತವಾಗಿ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದ. ನಿನ್ನನ್ನು ಬಿಟ್ಟು ಯಾರನ್ನು ಮದುವೆಯಾಗುವುದಿಲ್ಲ ಎಂದು ಹೇಳುತ್ತಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಒಂದು ಸಾರಿ ನನಗೆ ಗರ್ಭಪಾತ ಸಹ ಮಾಡಿಸಿದ್ದ. ಮದುವೆಯಾಗು ಎಂದಾಗ ಇನ್ನು ನಾನು ಸೆಟಲ್ ಆಗಿಲ್ಲ. ಮನೆ ಕಟ್ಟಿಸಿ ನಂತರ ಮದುವೆಯಾಗೋಣ ಎಂದು ಹೇಳಿದ್ದ. ಆದರೆ ಫೆಬ್ರವರಿ 20ರಂದು ನನ್ನ ಮನೆಗೆ ಬಂದು ಮದುವೆಯಾಗುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಸಹ ಹಾಕಿದ್ದ ಎಂದು ದೂರಿದ್ದಳು. 

ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ. 

Stay up to date on all the latest ರಾಜ್ಯ news with The Kannadaprabha App. Download now
Poll
coronadead

ಕೊರೋನಾ ವೈದ್ಯಕೀಯ ಸಲಕರಣೆ ಖರೀದಿ ಹೆಸರಿನಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪಗಳು ಕೇಳಿಬಂದಿವೆ. ನೀವು ಏನಂತೀರಿ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp