ಕೊರೋನಾ ಎಫೆಕ್ಟ್: ಮಸೀದಿಗಳಲ್ಲಿ ಪ್ರಾರ್ಥನೆ ಅವಧಿ ಕಡಿತಕ್ಕೆ ಸೂಚನೆ

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ಶುಕ್ರವಾರದ ಪ್ರಾರ್ಥೆಯನ್ನು 15 ನಿಮಿಷಕ್ಕೆ ಕಡಿತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸೂಚನೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ಶುಕ್ರವಾರದ ಪ್ರಾರ್ಥೆಯನ್ನು 15 ನಿಮಿಷಕ್ಕೆ ಕಡಿತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸೂಚನೆ ನೀಡಿದೆ. 

ಮಸೀದಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು. ಪ್ರಾರ್ಥನೆಗೆ ಆಗಮಿಸುವವರು ಸ್ಯಾನಿಟೈಜರ್ ಬಳಕೆ ಮಾಡಬೇಕು. ಮಸೀದಿಯಲ್ಲಿಡಲಾಗಿರುವ ಟವಲ್ ಮತ್ತು ಟೋಪಿಗಳನ್ನು ತೆಗೆದು ಹಾಕಬೇಕು ಎಂದು ನಿರ್ದೇಶನ ನೀಡಿದೆ. ಪ್ರಾರ್ಥನೆ ಸುಮಾರು ಒಂದೂವರೆ ತಾಸು ನಡೆಯಲಿದ್ದು, ಅದನ್ನು 20 ನಿಮಿಷಕ್ಕೆ ಸೀಮಿತ ಎಂದು ತಿಳಿಸಿದೆ. 

ಕೊರೋನಾ ವೈರಸ್ ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿದ್ದು, ಈ ವರೆಗೂ ದೇಶದಲ್ಲಿ ಮೂವರನ್ನು ಬಲಿ ಪಡೆದುಕೊಂಡಿದೆ. ಅಲ್ಲದೆ, ರಾಜ್ಯದಲ್ಲಿ 14 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com