ಕೊರೋನಾ ವೈರಸ್: ಲಾಕ್ ಡೌನ್ ನಿಂದಾಗಿ ನಿತ್ಯ ಜೀವನ ಅಸ್ತವ್ಯವಸ್ಥ ಆಗಿದೆ, ಕ್ಷಮೆ ಇರಲಿ: ಸಚಿವ ಸುಧಾಕರ್

ನಮಸ್ತೇ ಕರ್ನಾಟಕ! ಇಂದು ಎರಡನೇ ದಿವಸದ ಕರ್ಫ್ಯೂ. ಜೀವನ ಬೇಕು ಆದರೆ ಜೀವ ಅದಕ್ಕಿಂತ ಮುಖ್ಯ. ನಿತ್ಯ ಜೀವನ ಅಸ್ತವ್ಯವಸ್ಥೆ ಆಗಿದೆ. ಕ್ಷಮೆ ಇರಲಿ ಇದು ನಿಮ್ಮ ಕ್ಷೇಮಕ್ಕಾಗಿ, ಧನ್ಯವಾದಗಳು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ  ನಾಡಿನ ಜನರ ಕ್ಷಮೆಯಾಚನೆ ಮಾಡಿದ್ದಾರೆ.
ಸಚಿವ ಸುಧಾಕರ್ ಹಾಗೂ ಸಚಿವ ಶ್ರೀರಾಮುಲು
ಸಚಿವ ಸುಧಾಕರ್ ಹಾಗೂ ಸಚಿವ ಶ್ರೀರಾಮುಲು

ಬೆಂಗಳೂರು: ನಮಸ್ತೇ ಕರ್ನಾಟಕ! ಇಂದು ಎರಡನೇ ದಿವಸದ ಕರ್ಫ್ಯೂ. ಜೀವನ ಬೇಕು ಆದರೆ ಜೀವ ಅದಕ್ಕಿಂತ ಮುಖ್ಯ. ನಿತ್ಯ ಜೀವನ ಅಸ್ತವ್ಯವಸ್ಥೆ ಆಗಿದೆ. ಕ್ಷಮೆ ಇರಲಿ ಇದು ನಿಮ್ಮ ಕ್ಷೇಮಕ್ಕಾಗಿ, ಧನ್ಯವಾದಗಳು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ  ನಾಡಿನ ಜನರ ಕ್ಷಮೆಯಾಚನೆ ಮಾಡಿದ್ದಾರೆ.

ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ, ಕೋವಿಡ್‌ 19 ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳ ಪರಿಶೀಲನಾ ಸಭೆಯನ್ನು ಬಳ್ಳಾರಿ ಹಾಗೂ ಚಿತ್ರದುರ್ಗದಲ್ಲಿ ನಡೆಸಲಿದ್ದೇನೆ. ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಿರುವ ಕಾರಣ  ಮುಂಜಾಗೃತ ದೃಷ್ಟಿಯಿಂದ ಅಧಿಕಾರಿಗಳನ್ನು ಹಾಗೂ ಆಸ್ಪತ್ರೆ ಸಿಬ್ಬಂದಿಗಳನ್ನು ಹೊರತುಪಡಿಸಿ, ಬೇರೆ ಯಾರನ್ನೂ ಭೇಟಿ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com