ಮದ್ಯಕ್ಕೆ ಮುಗಿಬಿದ್ದ ಪಾನಪ್ರಿಯರು: 3ನೇ ದಿನ ಭರ್ಜರಿ ಮಾರಾಟ, ಗಳಿಕೆ ಎಷ್ಟು ಗೊತ್ತಾ?

ಕೊರೋನಾ ವೈರಸ್ ಲಾಕ್ ​ಡೌನ್ ಬಳಿಕ ಮೂರು ದಿನಗಳ ಹಿಂದೆ ತೆರೆಯಲಾಗಿದ್ದ ಮದ್ಯದಂಗಡಿಗಳಲ್ಲಿ ಭರ್ಜರಿ ವ್ಯಾಪಾರವಾಗುತ್ತಿದ್ದು, 43 ದಿನಗಳ ಅಜ್ಞಾತವಾಸ ಅನುಭವಿಸಿದ್ದ ಪಾನಪ್ರಿಯರು ಇದೀಗ ಏಕಾಏಕಿ ಮದ್ಯದಂಗಡಿಗಳ ಮೇಲೆ ಮುಗಿ ಬಿದ್ದಿದ್ದಾರೆ.
ಮದ್ಯದಂಗಡಿ ಮುಂದೆ ಪಾನಪ್ರಿಯರು
ಮದ್ಯದಂಗಡಿ ಮುಂದೆ ಪಾನಪ್ರಿಯರು

ಬೆಂಗಳೂರು: ಕೊರೋನಾ ವೈರಸ್ ಲಾಕ್ ​ಡೌನ್ ಬಳಿಕ ಮೂರು ದಿನಗಳ ಹಿಂದೆ ತೆರೆಯಲಾಗಿದ್ದ ಮದ್ಯದಂಗಡಿಗಳಲ್ಲಿ ಭರ್ಜರಿ ವ್ಯಾಪಾರವಾಗುತ್ತಿದ್ದು, 43 ದಿನಗಳ ಅಜ್ಞಾತವಾಸ ಅನುಭವಿಸಿದ್ದ ಪಾನಪ್ರಿಯರು ಇದೀಗ ಏಕಾಏಕಿ ಮದ್ಯದಂಗಡಿಗಳ ಮೇಲೆ ಮುಗಿ ಬಿದ್ದಿದ್ದಾರೆ.

ಹೌದು ಲಾಕ್ ಡೌನ್ ಅವಧಿಯಲ್ಲೂ ಕರ್ನಾಟಕ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮದ್ಯ ಮಾರಾಟದ, ಮೂರನೇ ದಿನ ಭರ್ಜರಿ ವ್ಯಾಪಾರ ನಡೆದಿದ್ದು, ಒಂದೇ ದಿನ ಬರೊಬ್ಬರಿ 216 ಕೋಟಿ ರೂಪಾಯಿ ಆದಾಯ ಬಂದಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ 3ನೇ ದಿನ 30 ಲಕ್ಷ ಐಎಂಎಲ್ ಲೀಟರ್ ಮದ್ಯ ಸೇಲ್ ಆಗಿದ್ದು, 7 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಒಟ್ಟಾರೆಯಾಗಿ ಒಂದೇ ದಿನ ಅಬಕಾರಿ ಇಲಾಖೆಗೆ 216 ಕೋಟಿ ರೂಪಾಯಿ ಆದಾಯ ಬಂದಿದೆ. ಮೇ 04 ರಂದು ಅಂದರೆ ಮೊದಲ ದಿನ 45 ಕೋಟಿ ರೂಪಾಯಿ  ಲಾಭ ಬಂದಿತ್ತು. ಮೇ 5ರಂದು 197 ಕೋಟಿ ರೂ. ಆದಾಯ ಬಂದಿತ್ತು.  ಮೇ6ರಂದು ಅಂದರೆ ನಿನ್ನೆ 216 ಕೋಟಿ ರೂಪಾಯಿ ಆದಾಯ ಬಂದಿದೆ.

ದಾಖಲೆ ಮಾರಾಟಕ್ಕೆ ಬೆಲೆ ಏರಿಕೆ ಕಾರಣ!
ಇನ್ನು ಇಂದಿನಿಂದ ಅಬಕಾರಿ ಸುಂಕ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಪಾನ ಪ್ರಿಯರು ನಿನ್ನೆಯ ತಮಗೆ ಬೇಕಾದಷ್ಟು ಮದ್ಯ ಸಂಗ್ರಹಿಸಿದ್ದಾರೆ. ಅಂತೆಯೇ ಇಂದೂ ಕೂಡ ಭರ್ಜರಿ ವ್ಯಾಪಾರಜ ನಿರೀಕ್ಷೆ ಇದ್ದು, ಅಬಕಾರಿ ಸುಂಕ ಹೆಚ್ಚಾಗುವ ಹಿನ್ನಲೆಯಲ್ಲಿ ಇಂದಿನಿಂದ 300 ಕೋಟಿ ಆದಾಯ  ನಿರೀಕ್ಷೆಯನ್ನು ಅಬಕಾರಿ ಇಲಾಖೆ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com