ಸಿಕ್ಕಿಂ ಮಹಿಳೆಯರು ಮತ್ತು ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತನೆ: ಬೆಂಗಳೂರು ರೈಲ್ವೆ ಟಿಟಿಇ ಅಮಾನತು

ಸಿಕ್ಕಿಂ ಮೂಲದ ವಿದ್ಯಾರ್ಥಿನಿ ಮತ್ತು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಬೆಂಗಳೂರು ವಿಭಾಗದ ರೈಲು ಟಿಕೆಟ್ ಪರೀಕ್ಷಕನನ್ನು ಅಮಾನತು ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿಕ್ಕಿಂ ಮೂಲದ ವಿದ್ಯಾರ್ಥಿನಿ ಮತ್ತು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಬೆಂಗಳೂರು ವಿಭಾಗದ ರೈಲು ಟಿಕೆಟ್ ಪರೀಕ್ಷಕನನ್ನು ಅಮಾನತು ಮಾಡಲಾಗಿದೆ.

ಮೇ 19 ರಂದು ಶ್ರಮಿಕ್ ವಿಶೇಷ ರೈಲು, ಪಶ್ಚಿಮ ಬಂಗಾಳಕ್ಕೆ ತೆರಳುತ್ತಿತ್ತು,  ಈ ರೈಲಿನಲ್ಲಿ ಹೆಚ್ಚಿನ ಪ್ರಮಾಣದ ಈಶಾನ್ಯ ವಲಯದ ವಿದ್ಯಾರ್ಥಿಗಳಿದ್ದರು. ತಡರಾತ್ರಿ ರೈಲು ಕಂಟೋನ್ಮೆಂಟ್ ನಿಲ್ದಾಣದಿಂದ ಹೊರಡಲು ತುಂಬಾ ವಿಳಂಬವಾಯಿತು.

ರೈಲ್ವೆ ಸಿಬ್ಬಂದಿ ಅನುಚಿತ ವರ್ತನೆಯನ್ನು ವಿದ್ಯಾರ್ಥಿಗಳು ರಹಸ್ಯವಾಗಿ ರೆಕಾರ್ಡ್ ಮಾಡಿದ್ದರು. ಈ ವಿಡಿಯೋವನ್ನು ವಿದ್ಯಾರ್ಥಿಗಳು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ, ಒಬ್ಬ ವಿದ್ಯಾರ್ಥಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಮತ್ತು ಮಿತ್ರಲಾಲ್ ದುಗೆಲ್ ಅವರಿಗೆ ಪ್ರತ್ಯೇಕವಾಗಿ ಟ್ಯಾಗ್ ಮಾಡಲಾಗಿತ್ತು.

ಮೂರು ನಿಮಿಷಗಳ ವಿಡಿಯೋದಲ್ಲಿ ಟಿಟಿಇ ಬೋಗಿಗೆ ಬಂದು  ಮಹಿಳೆಯರನ್ನು ಆತ ಹೇಳಿದ ಸ್ಥಳದಲ್ಲಿ ಕೂರುವಂತೆ ಹಾಗೂ ಲಗ್ಗೇಜನ್ನು ಬೇರೆಡೆ ಸ್ಥಳಾಂತರಿಸುವಂತೆ ಆರ್ಡರ್ ಮಾಡಿದ್ದಾನೆ.

ಅವರನ್ನು ಏಕವಚನದಲ್ಲಿ ನಿಂದಿಸಿ ತೀರಾ ಅತಿರೇಕವಾಗಿ ವರ್ತಿಸಿದ್ದಾನೆ. ಈ ವೇಳೆ ವಿದ್ಯಾರ್ಥಿಯೊಬ್ಬ ಲಗೇಜನ್ನು ಟಾಪ್ ಬರ್ತ್ ನಲ್ಲಿಲರಿಸಲು ಯತ್ನಿಸಿದ. ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ದೂರ ದೂರ ಕುಳಿತು ಕೊಂಡ ಹಿನ್ನೆಲೆಯಲ್ಲಿ  ಮತ್ತೆ ಅವರನ್ನು ನಿಂದಿಸಿದ ಟಿಟಿಇ ಸಾಮಾಜಿಕ ಅಂತರ ಬೇಕೆಂದರೇ ವಿಮಾನದಲ್ಲಿ ಪ್ರಯಾಣಿಸಿ ಎಂದು ಬೈಯ್ದಿದ್ದಾನೆ.

ಈ ಸಂಬಂಧ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ ಕೆ ವರ್ಮಾ ಟ್ವಿಟ್ಟರ್ ನಲ್ಲಿ ಕ್ಷಮೆ ಕೋರಿದ್ದಾರೆ. ವಿಡಿಯೋ ನೋಡಿದ ಕೂಡಲೇ ಟಿಟಿಇ ಯನ್ನು ಕಚೇರಿಗೆ ಕರೆಸಿ ಅಮಾನತು ಆದೇಶ ಹೊರಡಿಸಿರುವುದಾಗಿ ವರ್ಮಾ ಹೇಳಿದ್ದಾರೆ.

ನಮ್ಮ ರೈಲ್ವೆ ಸಿಬ್ಬಂದಿ ಪ್ರಯಾಣಿಕರ ಜೊತೆ ಉತ್ತಮವಾಗಿ ವರ್ತಿಸುತ್ತಾರೆ, ಯಾರೋ ಒಬ್ಬರು ಈ ರೀತಿ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ, ಇಂತಹ ವರ್ತನೆ ಖಂಡನೀಯಯ ಎಂದು ಮತ್ತೊಬ್ಬ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com