70ಕ್ಕೂ ಹೆಚ್ಚು ದಿನ ರೋಮ್'ನ ಕ್ರ್ಯೂಸ್'ನಲ್ಲಿ ಬಂಧಿಯಾಗಿದ್ದ 124 ಭಾರತೀಯರು ಕೊನೆಗೂ ತವರಿಗೆ

ಕೊರೋನಾ ಪರಿಣಾಮದಿಂದಾಗಿ ಬರೋಬ್ಬರಿ 70ಕ್ಕೂ ಹೆಚ್ಚಿ ದಿನಗಳ ಕಾಲ ಐರೋಪ್ಯ ಒಕ್ಕೂಟದ ಐಷಾರಾಮಿ ವಿಲಾಸಿ ಹಡಗಿನಲ್ಲಿ ಬಂಧಿಯಾಗಿದ್ದ 124 ಭಾರತೀಯರು ಕೊನೆಗೂ ತವರಿಗೆ ಆಗಮಿಸಿದ್ದಾರೆ. 
ಭಾರತೀಯರು ಸಿಲುಕಿರುವ ಹಡಗು
ಭಾರತೀಯರು ಸಿಲುಕಿರುವ ಹಡಗು

ಬೆಂಗಳೂರು: ಕೊರೋನಾ ಪರಿಣಾಮದಿಂದಾಗಿ ಬರೋಬ್ಬರಿ 70ಕ್ಕೂ ಹೆಚ್ಚಿ ದಿನಗಳ ಕಾಲ ಐರೋಪ್ಯ ಒಕ್ಕೂಟದ ಐಷಾರಾಮಿ ವಿಲಾಸಿ ಹಡಗಿನಲ್ಲಿ ಬಂಧಿಯಾಗಿದ್ದ 124 ಭಾರತೀಯರು ಕೊನೆಗೂ ತವರಿಗೆ ಆಗಮಿಸಿದ್ದಾರೆ. 

ಐಷಾರಾಮಿ ವಿಲಾಸಿ ಹಗಡಿನಲ್ಲಿ 7 ದಿನಗಳ ಕಾಲ ಯುರೋಪ್ ಪ್ರವಾಸ ಕೈಗೊಳ್ಳಲಾಗಿತ್ತು. ಬಾರ್ಸಿಲೋನಾದಿಂದ ಹೊರಟ ಹಡಗು, ಫ್ರಾನ್ಸ್'ನ ತೀರ ಸುತ್ತಾಡಿ, ರೋಮ್'ನ ಸಿವಿಟಾವಾಚಿಯಾ ಬಂದರು ಪ್ರದೇಶ ತಲುಪಿತ್ತು. ಈ ವೇಳೆ ಹಡಗಿಗೆ ಲಾಕ್'ಡೌನ್ ಬಿಸಿ ತಟ್ಟಿತ್ತು. ಮಾರ್ಚ್ 15 ವೇಳೆಗೆ ಇಟಲಿಯಲ್ಲಿ ಕೊರೋನಾ ವೈರಸ್ ತೀವ್ರವಾಗಿ ಹಬ್ಬಿದ್ದ ಪರಿಣಾಮ ಹಡಗು ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. 

ಹಡಗಿನಲ್ಲಿ ಮಣಿಪುರ, ಮಹಾರಾಷ್ಟ್ರ, ಉತ್ತರಖಂಡ ಮೂಲದ 200 ಮಂದಿ ಭಾರತೀಯರೂ ಸಿಲುಕಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಎಲ್ಲರನ್ನೂ ಬರೋಬ್ಬರಿ 74 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಿಸಲಾಗಿತ್ತು. 200 ಮಂದಿಯಲ್ಲಿ 124 ಮಂದಿ ಹಡಗಿನಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಈ 124 ಮಂದಿ ಭಾರತೀಯರು ಕ್ವಾರಂಟೈನ್ ನಿಂದ ಮುಕ್ತಗೊಂಡಿದ್ದು, ರೋಮಾ ಫಿಯಾಮಿಸಿನೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯರಾತ್ರಿ 1.35ಕ್ಕೆ ಹೊರಟ ವಿಮಾನದಿಂದ ಭಾರತಕ್ಕೆ ಬಂದಿಳಿದಿದ್ದಾರೆ. 

ಹಡಗಿನಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ರಾಹುಲ್ ಶಾನ್ಭಾಗ್ ಎಂಬುವವರು ಮಾತನಾಡಿ, ಭಾರತಕ್ಕೆ ಬಂದಿಳಿದಿದ್ದು ಬಹಳ ಸಂತೋಷ ಹಾಗೂ ಭಾವುಕನಾಗಿದ್ದೇನೆ. ವಿಮಾನ ನಿಲ್ದಾಣದಲ್ಲಿದ್ದಾಗಲೇ ಕುಟುಂಬದೊಂದಿಗೆ ಮಾತನಾಡಿದ್ದೆ. ನನ್ನ ತಾಯಿ ಭಾವುಕರಾಗಿದ್ದರು ಎಂದು ಹೇಳಿದ್ದಾರೆ. 

ಹೌಸ್ ಕೀಪಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮಾತನಾಡಿ, 70 ದಿನಗಳ ಬಳಿಕ ಮರಳಿ ಭಾರತಕ್ಕೆ ಹೋಗುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಹಡಗು ಕಂಪನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಹಡಗಿನಲ್ಲಿದ್ದ ಎಲ್ಲಾ ಭಾರತೀಯರು ಆರೋಗ್ಯವಾಗಿದ್ದು, ಹೋಟೆಲ್ ತಲುಪುತ್ತಿದ್ದಂತೆಯೇ 7 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಲಿದ್ದೇವೆ. ನಮ್ಮೆಲ್ಲರ ಸಾರಿಗೆ ಹಾಗೂ ವಸತಿ ವೆಚ್ಚವನ್ನು ಹಡಗು ಕಂಪನಿಯೇ ಭರಿಸುತ್ತಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com