ಠೇವಣಿದಾರರ ಖಾತೆಗೆ ಬ್ಯಾಂಕ್​​ ಉದ್ಯೋಗಿಯಿಂದಲೇ ಕನ್ನ; 13.39 ಲಕ್ಷ ರೂ. ದೋಖಾ

ಸಂಜಯನಗರದ ಗೆದ್ದಲಹಳ್ಳಿಯ ದಿ ಬೆಂಗಳೂರು ಸಿಟಿ ಕೋ- ಅಪರೇಟಿವ್ ಬ್ಯಾಂಕ್​​ನಲ್ಲಿ ಉದ್ಯೋಗಿಯೇ ಠೇವಣಿದಾರರ ಖಾತೆಗೆ ಕನ್ನ ಹಾಕಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಂಜಯನಗರದ ಗೆದ್ದಲಹಳ್ಳಿಯ ದಿ ಬೆಂಗಳೂರು ಸಿಟಿ ಕೋ- ಅಪರೇಟಿವ್ ಬ್ಯಾಂಕ್​​ನಲ್ಲಿ ಉದ್ಯೋಗಿಯೇ ಠೇವಣಿದಾರರ ಖಾತೆಗೆ ಕನ್ನ ಹಾಕಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. 

ಪಾಸಿಂಗ್ ಪಾಸ್​​ವರ್ಡ್ ನಂಬರ್ ಬಳಸಿ ಠೇವಣಿದಾರರ ಖಾತೆಯಿಂದ 13.39 ಲಕ್ಷ ರೂಗಳನ್ನು ಬ್ಯಾಂಕ್ ಉದ್ಯೋಗಿಯಾಗಿದ್ದ ಹೇಮಂತ್ ಕುಮಾರ್ ಎಂಬಾತ ವರ್ಗಾವಣೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪಾಸ್ ವರ್ಡ್ ಬಳಸಿ ಪ್ರತಿದಿನ‌ 2.5 ಲಕ್ಷ ರೂಗಳನ್ನು ಪ್ರಧಾನ ಶಾಖೆಯಲ್ಲಿ ಖಾತೆ ಹೊಂದಿದ್ದ ನಾಗೇಶ್ ಕುಮಾರ್ ಎಂಬಾತನ ಅಕೌಂಟ್​​ಗೆ ವರ್ಗಾವಣೆ ಮಾಡಿದ್ದಾನೆ. ಸುಮಾರು 12 ಜನ ಠೇವಣಿಗಾರರ ಖಾತೆಯಿಂದ ಇದೇ ರೀತಿ ಹಣ ವರ್ಗಾಯಿಸಿದ್ದಾನೆ. ಹೇಮಂತ್ ಕೃತ್ಯಕ್ಕೆ ನಾಗೇಶ್  ಕುಮಾರ್ ಸಹಕಾರ ನೀಡುತ್ತಿದ್ದ ಎಂದು ಹೇಳಲಾಗಿದೆ.

ಇಬ್ಬರು ಆರೋಪಿಗಳ ವಿರುದ್ಧ ಬ್ಯಾಂಕ್ ಮ್ಯಾನೇಜರ್ ಚಂದ್ರ ಕಲಾನಾಯಕ್, ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್​ಐಆರ್​ ದಾಖಲಾಗಿದೆ. ಈಗಾಗಲೇ ಪೊಲೀಸರು ಹೇಮಂತ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ನಾಗೇಶ್  ಪರಾರಿಯಾಗಿದ್ದು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com