10,000 ಉಚಿತ ಕೊರೋನಾ ಪರೀಕ್ಷೆ ನಡೆಸಿದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ

ಭಾರತದ ಅತೀ ದೊಡ್ಡ ಜೈಲಿಕ ತಂತ್ರಜ್ಞಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಮೂಲಕ ಬಯೋಕಾನ್ ಸಂಸ್ಥೆ ಈ ವರೆಗೂ 10,000 ಉಚಿತ ಕೊರೋನಾ ಪರೀಕ್ಷೆಗಳನ್ನು ನಡೆಸಿದೆ. 
ಕಿರಣ್ ಮಜುಂದಾರ್ ಶಾ
ಕಿರಣ್ ಮಜುಂದಾರ್ ಶಾ

ಬೆಂಗಳೂರು: ಭಾರತದ ಅತೀ ದೊಡ್ಡ ಜೈಲಿಕ ತಂತ್ರಜ್ಞಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಮೂಲಕ ಬಯೋಕಾನ್ ಸಂಸ್ಥೆ ಈ ವರೆಗೂ 10,000 ಉಚಿತ ಕೊರೋನಾ ಪರೀಕ್ಷೆಗಳನ್ನು ನಡೆಸಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಯೋಕಾನ್ ಮುಖ್ಯಸ್ಥ ಕಿರಣ್ ಮಜುಂದಾರ್ ಶಾ ಅವರು, ಸರ್ಕಾರದ ಪ್ರಯೋಗಾಲಯಗಳೂ ಸೇರಿದಂತೆ ನಮ್ಮಲ್ಲಿ ಒಟ್ಟು  25 ಖಾಸಗಿ ಪ್ರಯೋಗಾಲಯಗಳ ಪರೀಕ್ಷಾ ಸೌಲಭ್ಯಗಳಿವೆ. ಅಲ್ಲದೆ, 62 ಪರೀಕ್ಷಾ ಕೇಂದ್ರಗಳಿದ್ದು, ಈ ವರೆಗೂ 13,000-15,000 ಪರೀಕ್ಷೆಗಳನ್ನು ನಡೆಸಿದ್ದೇವೆ. ಆದರೂ, ರಾಜ್ಯದಜಲ್ಲಿ ಪಾಸಿಟಿವ್ ಕೇಸ್ ಗಳಿರುವುದು ಅತ್ಯಂತ ಕಡಿಮೆ ಎಂದು ಹೇಳಿದ್ದಾರೆ. 

ಪರೀಕ್ಷೆ ಮೌಲ್ಯ ಈಗಾಗಲೇ ರೂ.2.5 ಲಕ್ಷ ದಾಟಿಡೆ. ಖಾಸಗಿ ಕೇಂದ್ರಗಳಲ್ಲಿ ಪ್ರತೀ ಪರೀಕ್ಷೆಗೆ ರೂ.2,200 ಪಡೆಯುತ್ತಿವೆ. ಆದರೆ ನಾವು ಪರೀಕ್ಷೆಗಳನ್ನು ಉಚಿತವಾಗಿ ಮಾಡುತ್ತಿದ್ದೇವೆ. ಸರ್ಕಾರದ ನಿಗದಿ ಮಾಡಿರುವ ದರಕ್ಕೆ ಬಂದರೂ ನಾವು ಈಗಾಗಲೇ ಪರೀಕ್ಷೆಗಳಿಗೆ ರೂ.2 ಕೋಟಿ ಖರ್ಚು ಮಾಡಿದ್ದೇವೆ. ಈ ಹಿಂದೆ ಕಡಿಮೆ ಮಟ್ಟದಲ್ಲಿ ಸ್ಯಾಂಪಲ್ಸ್ ಗಳು ಬರುತ್ತಿದ್ದವು. ಇದೀಗ ದಿನಕ್ಕೆ 1,000-1,500 ಸ್ಯಾಂಪಲ್ಸ್ ಗಳು ಬರುತ್ತಿವೆ. ಪರೀಕ್ಷಾ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದೇವೆಂದು ತಿಳಿಸಿದ್ದಾರೆ. 

ಕೊರೋನಾ ಪರಿಸ್ಥಿತಿಯನ್ನು ಕರ್ನಾಟಕ ಉತ್ತಮವಾಗಿ ನಿಭಾಯಿಸುತ್ತಿದೆ. ಸೋಂಕನ್ನು ಪರಿಣಾಮಕಾರಿ ನಿಭಾಯಿಸಲು ಟ್ರೇಸಿಂಗ್, ಟೆಸ್ಟಿಂಗ್ ಹಾಗೂ ಟ್ರೀಟಿಂಗ್ ಗಳನ್ನು ಹೆಚ್ಚಾಗಿಸಬೇಕು. ಎಷ್ಟು ಬೇಗ ಸೋಂಕಿತರನ್ನು ಹುಡುಕುತ್ತೀವೋ ಅಷ್ಟು ಬೇಗ ರೋಗಿ ಗುಣಮುಖರಾಗುವಂತೆ ಮಾಡಬಹುದು. ಸೋಂಕಿಗೆ ಆದಷ್ಟು ಬೇಗ ಚಿಕಿತ್ಸೆ ನೀಡುವುದರಿಂದ ಸೋಂಕು ಹರಡುವುದನ್ನು ತಡೆಯಬಹುದು. ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ತಮ್ಮ ರಾಜ್ಯಗಳ ಸ್ಯಾಂಪಲ್ಸ್ ಪರೀಕ್ಷೆ ಮಾಡುವಂತೆ ಬಯೋಕಾನ್ ಬಳಿ ಮನವಿ ಮಾಡಿಕೊಳ್ಳುತ್ತಿದೆ. ಲಾಜಿಸ್ಟಿಕ್ ಸಮಸ್ಯೆಯಿರುವುದಿಂದ ಅದು ಸಾಧ್ಯವಿಲ್ಲ. ಇತರೆ ರಾಜ್ಯಗಳಲ್ಲಿ ಕರ್ನಾಟಕ ಪರೀಕ್ಷಾ ಸೌಲಭ್ಯವನ್ನು ಹೊಂದಿಲ್ಲ. ಸ್ಯಾಂಪಲ್ಸ್ ಸಂಗ್ರಹಿಸಿ ನಮ್ಮ ಸಂಸ್ಥೆಗೆ ರವಾನಿಸುತ್ತಿದೆ. ಕೊರೋನಾ ಬಗ್ಗೆ ಜನರಲ್ಲಿ ಭೀತಿ ಹೆಚ್ಚಾಗಿದ್ದು, ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಬೇಕಿದೆ ಎಂದು ತಿಳಿಸಿದ್ದಾರೆ. 

ಕೊರೋನಾ ಪರೀಕ್ಷೆ ನಡೆಸಲು ಮತ್ತಷ್ಟು ಪ್ರಯೋಗಾಲಯಗಳು ಸರ್ಕಾರದೊಂದಿಗೆ ಕೈಜೋಡಿಸುತ್ತಿವೆ. ಪ್ರಯೋಗಾಲಯಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ವಿಶ್ವಾಸವಿದೆ ಎಂದು ಸಚಿವ ಡಾ.ಸುಧಾಕರ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com