ಡ್ರಗ್ಸ್ ಕೇಸ್: ಬೆನ್ನು ನೋವಿನ ಕಾರಣ ಬಿನೇಶ್ ಕೊಡಿಯೇರಿ ಆಸ್ಪತ್ರೆಗೆ ಕರೆದೊಯ್ದ ಅಧಿಕಾರಿಗಳು
ಡ್ರಗ್ಸ್ ನೆಟ್ ವರ್ಕ್ ಗೆ ಹಣಕಾಸು ನೆರವು ನೀಡಿರುವ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಕೇರಳದ ಸಿಪಿಐ (ಎಂ) ಮುಖಂಡ ಬಿನೀಶ್ ಕೊಡಿಯೇರಿ ಭಾನುವಾರ ಬೆನ್ನು ನೋವಿನ ಸಮಸ್ಯೆ ಹೇಳಿದ ನಂತರ ಆಸ್ಪತ್ರೆಯೊಂದಕ್ಕೆ ತಪಾಸಣೆಗಾಗಿ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
Published: 01st November 2020 11:49 PM | Last Updated: 01st November 2020 11:53 PM | A+A A-

ಬಿನೀಶ್ ಕೊಡಿಯೇರಿ
ಬೆಂಗಳೂರು: ಡ್ರಗ್ಸ್ ನೆಟ್ ವರ್ಕ್ ಗೆ ಹಣಕಾಸು ನೆರವು ನೀಡಿರುವ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಕೇರಳದ ಸಿಪಿಐ (ಎಂ) ಮುಖಂಡ ಬಿನೀಶ್ ಕೊಡಿಯೇರಿ ಭಾನುವಾರ ಬೆನ್ನು ನೋವಿನ ಸಮಸ್ಯೆ ಹೇಳಿದ ನಂತರ ಆಸ್ಪತ್ರೆಯೊಂದಕ್ಕೆ ತಪಾಸಣೆಗಾಗಿ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಕ್ಟೋಬರ್ 29 ರಂದು ಬಿನೀಶ್ ಕೊಡಿಯೇರಿ ಅವರನ್ನು ಬಂಧಿಸಲಾಗಿತ್ತು. ನಂತರ ನವೆಂಬರ್ 2ರವರೆಗೂ ಜಾರಿ ನಿರ್ದೇಶನಾಲಯದ ವಶಕ್ಕೆ ನಗರದ ಕೋರ್ಟ್ ವೊಂದು ನೀಡಿತ್ತು.
ಭಾನುವಾರ ಸಂಜೆ ಬೆನ್ನು ನೋವಿನ ಸಮಸ್ಯೆ ಹೇಳಿದ ಕಾರಣ ಬಿನೀಶ್ ಆರೋಗ್ಯ ತಪಾಸಣೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಪ್ರಕರಣದಲ್ಲಿ ಡ್ರಗ್ ಪೆಡ್ಲರ್ ಮೊಹಮ್ಮದ್ ಅನೂಪ್, ಬಿನೀಶ್ ಬೆನಾಮಿದಾರ ಎಂದು ಕೇಂದ್ರ ತನಿಖಾ ದಳ ಆರೋಪಿಸಿದೆ.
ಡ್ರಗ್ಸ್ ಪ್ರಕರಣದಲ್ಲಿ ಎನ್ ಸಿಬಿ ಅಧಿಕಾರಿಗಳು ಬಂಧಿಸಿರುವ ಡ್ರಗ್ ಪೆಡ್ಲರ್ ಮೊಹಮ್ಮದ್ ಅನೂಪ್ ನೊಂದಿಗೆ ಬಿನೇಶ್ ನಂಟು ಹೊಂದದ್ದರು. ಬೆಂಗಳೂರಿನಲ್ಲಿ ರೆಸ್ಟೋರೆಂಟ್ ವೊಂದನ್ನು ತೆರೆಯಲು ಅನೂಪ್ ಗೆ ಬಿನೇಶ್ ಹಣಕಾಸಿನ ನೆರವು ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.