ಮಾಡಲಿಂಗ್ ಕೆಲಸ ಕೊಡಿಸುವುದಾಗಿ ಹೇಳಿ ರೂಪದರ್ಶಿಯಿಂದ ಲಕ್ಷ ಲಕ್ಷ ಕಸಿದು ಮಹಿಳೆ ಪರಾರಿ!

ನಗರದಲ್ಲಿ ಕೆಲಸ ಕೊಡಿಸುವುದಾಗಿ ಮಾಡೆಲ್‌ಗೆ ವಂಚನೆ ಮಾಡಿರುವ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, ಮಾಡಲಿಂಗ್ ಕೆಲಸ ಕೊಡಿಸುವುದಾಗಿ ಹೇಳಿ ರೂಪದರ್ಶಿಯಿಂದ ಲಕ್ಷ ಲಕ್ಷ ಕಸಿದು ಮಹಿಳೆ ಪರಾರಿಯಾಗಿದ್ದಾಳೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಕೆಲಸ ಕೊಡಿಸುವುದಾಗಿ ಮಾಡೆಲ್‌ಗೆ ವಂಚನೆ ಮಾಡಿರುವ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, ಮಾಡಲಿಂಗ್ ಕೆಲಸ ಕೊಡಿಸುವುದಾಗಿ ಹೇಳಿ ರೂಪದರ್ಶಿಯಿಂದ ಲಕ್ಷ ಲಕ್ಷ ಕಸಿದು ಮಹಿಳೆ ಪರಾರಿಯಾಗಿದ್ದಾಳೆ.

ಪುಣೆ ಮೂಲದ ರೂಪದರ್ಶಿ ರೂಪಾ ರಿಝಾವ್ಲ್ ಶೇಖ್‌ ಎಂಬಾಕೆಗೆ ಆಕೆಯ ಸ್ನೇಹಿತೆ ಸೂಫಿಯಾ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ಹೇಳಲಾಗಿದೆ. ರೂಪಾಗೆ ಮಾಡೆಲಿಂಗ್‌ನಲ್ಲಿ ಕೆಲಸ ಕೊಡಿಸುವುದಾಗಿ ಸೂಫಿಯಾ ನಂಬಿಸಿದ್ದಳಂತೆ. ರೂಪಾ ಬಳಿಯಿದ್ದ ಹಣವನ್ನು ಠೇವಣಿ ಮಾಡಲು ಹೋಗಿದ್ದ ವೇಳೆ  ಸೂಫಿಯಾ ರೂಪದರ್ಶಿಯ 3 ಲಕ್ಷ ರೂಪಾಯಿ ಮತ್ತು 2 ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ಸದ್ಯ, ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ರೂಪ ಕಳೆದ 20 ದಿನಗಳ ಹಿಂದೆ ಮುಂಬೈನಿಂದ ಬೆಂಗಳೂರಿಗೆ ಕೆಲಸವನ್ನರಸಿ ಬಂದಿದ್ದರು. ನಗರದ ಸಂಪಂಗಿ ರಾಮನಗರದಲ್ಲಿ ಹೊಟೆಲ್ ನಲ್ಲಿ ತಂಗಿದ್ದ ರೂಪಾಗೆ ಆಕೆಯ ಸ್ನೇಹಿತರ ಮೂಲದಿಂದ ಸೂಫಿಯಾ ಎಂಬಾಕೆ ಪರಿಚಿತಳಾಗಿದ್ದಾಳೆ. ಈ ವೇಳೆ ತಾನೂ ಕೂಡ ಮಾಡಲಿಂಗ್  ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, 70 ಸಾವಿರೂ ರೂಗಳ ವರೆಗೆ ವೇತನ ದೊರೆಯುವ ಕೆಲಸ ರೂಪದರ್ಶಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ರೂಪಾಳನ್ನು ನಂಬಿಸಿದ್ದಾಳೆ. ಆಕೆಯ ಮಾತನ್ನು ನಂಬಿದ ರೂಪಾ ನವೆಂಬರ್ 1ರಂದು ಸಂಪಂಗಿ ರಾಮನಗರದಿಂದ ಸುದ್ದಗುಂಟೆ ಪಾಳ್ಯಕ್ಕೆ ನಿವಾಸ ಬದಲಿಸಿದ್ದಾರೆ. 

ಅದೇ ದಿನ ಸಂಜೆ ನನ್ನ ಬಳಿ ಮೂರು ಲಕ್ಷ ರೂಗಳಿದ್ದು ಅದನ್ನು ನನ್ನ ತಾಯಿ ಖಾತೆಗೆ ಠೇವಣಿ ಮಾಡಬೇಕು ಎಂದು ಹೇಳಿದಾಗ ಅದನ್ನು ರಾತ್ರಿ ಮಾಡಬಹುದು ಎಂದು ಹೇಳಿ ಕಾರಿನಲ್ಲಿ ಸುಮಾರು 2 ಗಂಟೆ ತಿರುಗಿಸಿದಳು. ಬಳಿಕ ಮೈಸೂರು ರಸ್ತೆಯ ಸ್ಯಾಟೆಲೈಟ್ ಬಸ್ ನಿಲ್ದಾಣದ ಬಳಿಯ ಪೆಟ್ರೋಲ್ ಬಂಕ್  ವೊಂದರ ಬಳಿ ಕಾರು ನಿಲ್ಲಿಸಿ ಬ್ಲಾಂಕೆಟ್ ತರುವಂತೆ ಹೇಳಿದರು. ನಾನು ನನ್ನ ಹಣ ಮತ್ತು ಮೊಬೈಲ್ ಅನ್ನು ಕಾರಿನಲ್ಲೇ ಬಿಟ್ಟು ಕಾರಿನಿಂದ ಇಳಿದಾಗ ಸೂಫಿಯಾ ಪರಾರಿಯಾದಳು ಎಂದು ರೂಪಾ ಹೇಳಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com