ಕೋವಿಡ್-19: ಕರ್ನಾಟಕದಲ್ಲಿ ಇಂದು 2,584 ಪ್ರಕರಣ ಪತ್ತೆ, 2,881 ಡಿಸ್ಚಾರ್ಜ್, 23 ಬಲಿ!

ರಾಜ್ಯದಲ್ಲಿ ಇಂದು 2,584 ಕೊರೋನಾ ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 8.53 ಲಕ್ಷಕ್ಕೆ ಏರಿಕೆಯಾಗಿದೆ.
ಕೊರೋನಾ ವೈರಾಣು
ಕೊರೋನಾ ವೈರಾಣು

ಬೆಂಗಳೂರು: ರಾಜ್ಯದಲ್ಲಿ ಇಂದು 2,584 ಕೊರೋನಾ ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 8.53 ಲಕ್ಷಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 23 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 11,453ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು 2,881 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 8,11,581ಕ್ಕೆ ಏರಿಕೆಯಾಗಿದೆ. 30,743 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 1,665 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯ ಸೋಂಕಿತರ ಸಂಖ್ಯೆ 3,53,146ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇಂದು 8 ಮಂದಿ ಸಾವನ್ನಪ್ಪಿದ್ದಾರೆ.

ಬಾಗಲಕೋಟೆಯಲ್ಲಿ 14, ಬಳ್ಳಾರಿಯಲ್ಲಿ 41, ಬೆಳಗಾವಿಯಲ್ಲಿ 28, ಬೆಂಗಳೂರು  ಗ್ರಾಮಾಂತರದಲ್ಲಿ 48, ಬೀದರ್ ನಲ್ಲಿ 6, ಚಾಮರಾಜನಗರದಲ್ಲಿ 13,  ಚಿಕ್ಕಬಳ್ಳಾಪುರದಲ್ಲಿ 15, ಚಿಕ್ಕಮಗಳೂರಿನಲ್ಲಿ 55, ಚಿತ್ರದುರ್ಗದಲ್ಲಿ 55, ದಕ್ಷಿಣ ಕನ್ನಡದಲ್ಲಿ 63, ದಾವಣಗೆರೆಯಲ್ಲಿ 29, ಧಾರವಾಡದಲ್ಲಿ 22, ಗದಗದಲ್ಲಿ 11, ಹಾಸನದಲ್ಲಿ 59, ಹಾವೇರಿಯಲ್ಲಿ 21, ಕಲಬುರಗಿಯಲ್ಲಿ 32, ಕೊಡಗಿನಲ್ಲಿ 20 ಪ್ರಕರಣಗಳು ವರದಿಯಾಗಿವೆ.

ಕೋಲಾರದಲ್ಲಿ 16, ಕೊಪ್ಪಳದಲ್ಲಿ 5, ಮಂಡ್ಯದಲ್ಲಿ 57, ಮೈಸೂರಿನಲ್ಲಿ 112,  ರಾಯಚೂರಿನಲ್ಲಿ 15, ರಾಮನಗರದಲ್ಲಿ 11, ಶಿವಮೊಗ್ಗದಲ್ಲಿ 25, ತುಮಕೂರಿನಲ್ಲಿ 59,  ಉಡುಪಿಯಲ್ಲಿ 19, ಉತ್ತರಕನ್ನಡದಲ್ಲಿ 21, ವಿಜಯಪುರದಲ್ಲಿ 33,  ಯಾದಗಿರಿಯಲ್ಲಿ 14 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com