ಇಡಬ್ಲ್ಯೂಐಆರ್ ಎಸ್ ಸಮೀಕ್ಷೆ: ಟಾಪ್ 10 ನಲ್ಲಿ ಬೆಂಗಳೂರಿನ 8 ಶಾಲೆಗಳು 

ಬೆಂಗಳೂರಿನಲ್ಲಿ ಬಿಡುಗಡೆಯಾದ 14 ನೇ ವಾರ್ಷಿಕ ಶಿಕ್ಷಣ ವಿಶ್ವ ಭಾರತ ಶಾಲಾ ಶ್ರೇಯಾಂಕ 2020-21 ನೇ ವರ್ಷದ ಸಮೀಕ್ಷೆಯಲ್ಲಿ ಬೆಂಗಳೂರಿನ ಎಂಟು ಶಾಲೆಗಳು ಸ್ಥಾನ  ಪಡೆದುಕೊಂಡಿವೆ.
ಸೇಂಟ್ ಜಾನ್  ಬಾಯ್ಸ್ ಸ್ಕೂಲ್
ಸೇಂಟ್ ಜಾನ್ ಬಾಯ್ಸ್ ಸ್ಕೂಲ್

ಬೆಂಗಳೂರು: ಬೆಂಗಳೂರಿನಲ್ಲಿ ಬಿಡುಗಡೆಯಾದ 14 ನೇ ವಾರ್ಷಿಕ ಶಿಕ್ಷಣ ವಿಶ್ವ ಭಾರತ ಶಾಲಾ ಶ್ರೇಯಾಂಕ 2020-21 ನೇ ವರ್ಷದ ಸಮೀಕ್ಷೆಯಲ್ಲಿ ಬೆಂಗಳೂರಿನ ಎಂಟು ಶಾಲೆಗಳು ಸ್ಥಾನ  ಪಡೆದುಕೊಂಡಿವೆ.

ದೇಶದ 2 ಸಾವಿರ ಅಗ್ರ ಶಾಲೆಗಳನ್ನು ಆರು ಪ್ರಮುಖ ಮತ್ತು 12 ಉಪ ಕೆಟಗರಿಯಲ್ಲಿ ಆಯ್ಕೆ ಮಾಡಲಾಗಿದೆ.  ದೈನಂದಿನ ಶಾಲೆಗಳ ವರ್ಗದಲ್ಲಿ ಪ್ರತಿ ಕೆಟಗರಿಯಲ್ಲಿ ಬೆಂಗಳೂರಿನ 8 ಶಾಲೆಗಳು ಸ್ಥಾನ ಪಡೆದಿವೆ.

ಕೋ ಎಡ್ ಶಾಲಾ ವಿಭಾಗದಲ್ಲಿ ವಿದ್ಯಾಶಿಲ್ಪ್ ಅಕಾಡೆಮಿ, ದಿ ವ್ಯಾಲಿ ಸ್ಕೂಲ್, ಮಲ್ಯ ಅದಿತಿ ಇಂಟರ್ ನ್ಯಾಷನಲ್ ಶಾಲೆ, ವೈಲ್ ಗ್ರೀನ್ ವುಡ್ ಹೈಸ್ಕೂಲ್ , ಎಬೆನೆಜರ್ ಇಂಟರ್ ನ್ಯಾಷನಲ್ ಸ್ಕೂಲ್, ಸ್ಥಾನ ಪಡೆದಿವೆ.

ಬಾಲಕರ ಶಾಲೆ ವಿಭಾಗದಲ್ಲಿ ಬಿಶಪ್ ಕಾಟನ್ ಬಾಯ್ಸ್ ಶಾಲೆ ಕೂಡ ಸ್ಥಾನ ಪಡೆದಿದೆ. ಸೈಂಟ್ ಜೋಸೆಫ್ ಬಾಯ್ಸ್ ಶಾಲೆ ಸ್ಥಾನ ಪಡೆದುಕೊಂಡಿದೆ.

ಸರ್ಕಾರಿ ಶಾಲೆಗಳ ಅಡಿಯಲ್ಲಿ ಬಾಗಲೂರಿನ ಜೆಎನ್ ವಿ ಶಾಲೆ, ಮೂರನೇ ಕೆಟಗರಿಯಲ್ಲಿ ಸ್ಥಾನ ಪಡೆದಿದೆ. ವಿಶೇಷ ಅಗತ್ಯತೆಗಳ ಅಡಿಯಲ್ಲಿ, ಅಕಾಡೆಮಿ ಫಾರ್ ಸೆವೆರ್ ಹ್ಯಾಂಡಿಕ್ಯಾಪ್ಸ್ ಅಂಡ್ ಆಟಿಸಂ ಮತ್ತು ಆಶಾ ಕಿರಣ್ ಸ್ಪೆಷಲ್ ನೀಡ್ಸ್ ಸ್ಕೂಲ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ದೆಹಲಿ ಮೂಲದ ಮಾರುಕಟ್ಟೆ ಸಂಶೋಧನೆ ಮತ್ತು ಅಭಿಪ್ರಾಯ ಸಂಗ್ರಹ ಕಂಪನಿ ಸೆಂಟರ್ ಫಾರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ ಪ್ರೈ ಲಿಮಿಟೆಡ್ ಸಮೀಕ್ಷೆ ನಡೆಸಿತು.

ಶಾಲಾ-ಪ್ರಾಂಶುಪಾಲರು, ಶಿಕ್ಷಕರು, ಶಿಕ್ಷಣ ತಜ್ಞರು, ಸಾಮಾಜಿಕ-ಆರ್ಥಿಕ ವಿಭಾಗದಲ್ಲಿ ಶುಲ್ಕ ಪಾವತಿಸುವ ಪೋಷಕರು ಸೇರಿದಂತೆ 11,368 ಸದಸ್ಯರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಭಾರತದಾದ್ಯಂತ 28 ಪ್ರಮುಖ ನಗರಗಳು ಮತ್ತು ಶಿಕ್ಷಣ ಕೇಂದ್ರಗಳಲ್ಲಿ ಹಿರಿಯ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com