ಕೊರೋನಾ ಪರಿಣಾಮಕಾರಿ ನಿರ್ವಹಣೆ: ಮೈಸೂರು ಮಾದರಿ ಅನುಸರಿಸಲು 25 ಜಿಲ್ಲೆಗಳ ಅಧಿಕಾರಿಗಳಿಗೆ ತರಬೇತಿ

ಕೊರೋನಾ ವೈರಸ್ ಸೋಂಕನ್ನು ಮೈಸೂರು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸಲಾಗಿದ್ದು, ಮೈಸೂರಿನ ಮಾದರಿಯನ್ನು ಅನುಸರಿಸುವ ಕುರಿತು ಇದೀಗ 25 ಜಿಲ್ಲೆಗಳ 85 ಮಂದಿ ಜನಪ್ರತಿನಿಧಿಗಳಿಗೆ ತರಬೇತಿ ನೀಡಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಕೊರೋನಾ ವೈರಸ್ ಸೋಂಕನ್ನು ಮೈಸೂರು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸಲಾಗಿದ್ದು, ಮೈಸೂರಿನ ಮಾದರಿಯನ್ನು ಅನುಸರಿಸುವ ಕುರಿತು ಇದೀಗ 25 ಜಿಲ್ಲೆಗಳ 85 ಮಂದಿ ಜನಪ್ರತಿನಿಧಿಗಳಿಗೆ ತರಬೇತಿ ನೀಡಲಾಗಿದೆ. 

ಕಳೆದ ನಾಲ್ಕು ದಿನಗಳಿಂಗ ಮೈಸೂರು ಜಿಲ್ಲೆಯಲ್ಲಿ ಕೊರೋನಾ ನಿರ್ವಹಣೆ ಕುರಿತು ಕ್ಯಾಪ್ಸುಲ್ ಕೋರ್ಸ್ ನಡೆಸಲಾಗುತ್ತಿದೆ. ದೀಪಾವಳಿ ಬಳಿಕ ಕೊರೋನಾ ಎರಡನೇ ಅಲೆ ಆರಂಭವಾಗಲಿದೆ ಎಂಬ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ  ಈ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾಧಿಕಾರಿಗಳು ಕೊರೋನಾ ನಿರ್ವಹಿಸಲು ತೆಗೆದುಕೊಂಡ ದಿಟ್ಟ ನಿರ್ಧಾರಗಳನ್ನು ವಿವರಿಸಲಾಗುತ್ತಿದೆ. 

ಜಿಲ್ಲೆಯ ಕೋವಿಡ್-19 ವಾರ್ ರೂಮ್ ನಲ್ಲಿ ಈ ತರಬೇತಿ ಕಾರ್ಯಕ್ರಮನ್ನು ನಡೆಸಲಾಗುತ್ತಿದೆ. 25 ಜಿಲ್ಲೆಗಳ ಅಧಿಕಾರಿಗಳಿಗೆ ಕಾರ್ಯಕ್ರಮದಲ್ಲಿ ಕೊರೋನಾ ನಿರ್ವಹಣೆ, ಹಾಸಿಗೆ ನಿರ್ವಹಣೆ ಕುರಿತು ಮಾಹಿತಿ ನೀಡಲಾಗುತ್ತಿದೆ. 

25 ಜಿಲ್ಲೆಗಳ ಜನಪ್ರತಿನಿಧಿಗಳು ತರಬೇತಿ ಕಾರ್ಯಕ್ರಮದ ಬಳಿಕ ತಮ್ಮ ತಮ್ಮ ಜಿಲ್ಲೆಗಳಲ್ಲಿ ಕೊರೋನಾವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. 

ಕಾರ್ಯಕ್ರಮದಲ್ಲಿ ಅಧಿಕಾರಿಗಳು ವಾರ್ ರೂಮ್ ಸ್ಥಾಪನೆ, ನಿರ್ವಹಣೆ, ಮಾನವ ಶಕ್ತಿಯನ್ನು ಬಳಕೆ ಮಾಡಿಕೊಳ್ಳುವುದು ಹೇಗೆ, ಪ್ರಯೋಗಗಳು ಹಾಗೂ ಇತರೆ ಹಲವಾರು ಪ್ರಕ್ರಿಯೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com