ಬೆಂಗಳೂರು: ಪಟಾಕಿ ಸಿಡಿಸಿದ್ದ 10 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು

ನಿನ್ನೆ ದೀಪಾವಳಿ ಪ್ರಯುಕ್ತ ಪಟಾಕಿ ಸಿಡಿಸಲು ಹೋಗಿ ಸುಮಾರು 10 ಮಕ್ಕಳು ಗಾಯಗೊಂಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

Published: 15th November 2020 12:13 PM  |   Last Updated: 15th November 2020 12:15 PM   |  A+A-


Minto_Hospital1

ಮಿಂಟೋ ಆಸ್ಪತ್ರೆ

Posted By : Nagaraja AB
Source : UNI

ಬೆಂಗಳೂರು: ನಿನ್ನೆ ದೀಪಾವಳಿ ಪ್ರಯುಕ್ತ ಪಟಾಕಿ ಸಿಡಿಸಲು ಹೋಗಿ ಸುಮಾರು 10 ಮಕ್ಕಳು ಗಾಯಗೊಂಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ  ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಿದ್ದರೂ, ಹಾನಿ ಸಂಭವಿಸಿದೆ. ನಿನ್ನೆ ಸುಮಾರು 10 ಮಕ್ಕಳು ಗಾಯಗೊಂಡಿದ್ದು, ನಗರದ ಮಿಂಟೋ ಆಸ್ಪತ್ರೆ, ನಾರಾಯಣ ಆಸ್ಪತ್ರೆ, ನೇತ್ರಧಾಮ ಸೇರಿ ಇತರ ಆಸ್ಪತ್ರೆಗಳಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. 

ಈ ಪೈಕಿ ನಾಲ್ವರಿಗೆ ತೀವ್ರ ಗಾಯಗಳಾಗಿವೆ. ಇನ್ನೂ, ವಿಜಯನಂದ ನಗರದ 12 ವರ್ಷದ ಬಾಲಕನಿಗೆ ಫ್ಲವರ್ ಪಾಟ್ ಪಟಾಕಿಯಿಂದ ಕಣ್ಣಿಗೆ ಹಾನಿಯಾಗಿದ್ದು, ಮಿಂಟೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  

Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp