ಪೊಲೀಸರ ಸೋಗಿನಲ್ಲಿ ಚಿನ್ನ ಕಳ್ಳತನ: ನಾಲ್ವರು ಆರೋಪಿಗಳ ಬಂಧನ

ಪೊಲೀಸರ ಸೋಗಿನಲ್ಲಿ 800 ಗ್ರಾಂ ಚಿನ್ನ, ಹಾಗೂ ಇತರೆ ದಾಖಲೆ ಕಳವು ಮಾಡಿದ್ದ  ಮಂಡ್ಯ ಜಿಲ್ಲೆಯ ನಾಗಮಂಗಲ ಮೂಲದ ನಾಲ್ವರು ಆರೋಪಿಗಳನ್ನು ಹಲಸೂರು ಗೇಟ್ ಪೊಲೀಸರು  ಬಂಧಿಸಿದ್ದಾರೆ.

Published: 15th November 2020 02:14 PM  |   Last Updated: 15th November 2020 02:18 PM   |  A+A-


Casual_Images1

ಸಾಂದರ್ಭಿಕ ಚಿತ್ರ

Posted By : Nagaraja AB
Source : UNI

ಬೆಂಗಳೂರು: ಪೊಲೀಸರ ಸೋಗಿನಲ್ಲಿ 800 ಗ್ರಾಂ ಚಿನ್ನ, ಹಾಗೂ ಇತರೆ ದಾಖಲೆ ಕಳವು ಮಾಡಿದ್ದ  ಮಂಡ್ಯ ಜಿಲ್ಲೆಯ ನಾಗಮಂಗಲ ಮೂಲದ ನಾಲ್ವರು ಆರೋಪಿಗಳನ್ನು ಹಲಸೂರು ಗೇಟ್ ಪೊಲೀಸರು  ಬಂಧಿಸಿದ್ದಾರೆ.

ಪೊಲೀಸರ ವೇಷದಲ್ಲಿ ಆರು ಜನರ ತಂಡ ಚಿನ್ನಾಭರಣ ಪಾಲಿಶ್ ಮಾಡುವ ಗೀತಾ ಜುವೆಲ್ಲರ್ಸ್ ಅಂಗಡಿಯೊಳಗೆ ನುಗ್ಗಿ, ನಕಲಿ ಚಿನ್ನ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಆದ್ದರಿಂದ ಅಂಗಡಿ ಮೇಲೆ ದಾಳಿ  ಮಾಡುತ್ತಿದ್ದೇವೆ ಎಂದು ಹೇಳಿ 800 ಗ್ರಾಂ  ಚಿನ್ನಭಾರಣ ಹಾಗೂ ದಾಖಲೆಗಳನ್ನು ಕಳವು  ಮಾಡಿದ್ದಾರೆ. 

ಅಲ್ಲದೇ,ಕೋಲ್ಕತ್ತಾದಲ್ಲಿದ್ದ ಅಂಗಡಿ ಮಾಲೀಕನಿಗೆ ಕರೆ ಮಾಡಿ ನಿಮ್ಮ ಅಂಗಡಿ ಮೇಲೆ ದಾಳಿ ಮಾಡಲಾಗಿದೆ. ಆದ್ದರಿಂದ ನೀವು ಪೊಲೀಸ್ ಠಾಣೆಗೆ ಬನ್ನಿ ಎಂದು ನಕಲಿ ಪೊಲೀಸರು ಬೆದರಿಸಿದ್ದಾರೆ.

ನಂತರ ಕೋಲ್ಕತ್ತಾದಿಂದ  ಗೀತಾ ಜುವೈಲರ್ಸ್ ಮಾಲೀಕ ಕಾರ್ತಿಕ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಬಂದಿದ್ದು, ಬಳಿಕ  ಪೊಲೀಸರ ಸೋಗಿನಲ್ಲಿ ಕಳ್ಳತನ ಮಾಡಿರುವುದು ಬಯಲಾಗಿದೆ.

Stay up to date on all the latest ರಾಜ್ಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp