ಕೊರೋನಾ ಎಫೆಕ್ಟ್: ನಮ್ಮ ಮಟ್ರೋ ವಾಣಿಜ್ಯ ಮಳಿಗೆಗಳ ಪುನರಾರಂಭಕ್ಕೆ ಸಹಾಯದ ಮೊರೆ ಇಟ್ಟ ವ್ಯಾಪಾರಸ್ಥರು

ಸಿಲಿಕಾನ್ ಸಿಟಿಯಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭಿಸಿ ಎರಡು ತಿಂಗಳುಗಳಾಗುತ್ತಿದ್ದರೂ, ವಾಣಿಜ್ಯ ಮಳಿಗೆಗಳು ಮಾತ್ರ ಇನ್ನೂ ಬಾಗಿಲುಗಳನ್ನು ತೆರೆದಿಲ್ಲ. ಸಂಕಷ್ಟದಲ್ಲಿರುವ ವ್ಯಾಪಾರಸ್ಥರು ಬಾಡಿಗೆಯಲ್ಲಿ ರಿಯಾಯಿತಿ ನೀಡಿದ್ದೇ ಆದರೆ, ಅಂಗಡಿಗಳನ್ನು ಪುನರಾರಂಭಿಸುತ್ತೇವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭಿಸಿ ಎರಡು ತಿಂಗಳುಗಳಾಗುತ್ತಿದ್ದರೂ, ವಾಣಿಜ್ಯ ಮಳಿಗೆಗಳು ಮಾತ್ರ ಇನ್ನೂ ಬಾಗಿಲುಗಳನ್ನು ತೆರೆದಿಲ್ಲ. ಸಂಕಷ್ಟದಲ್ಲಿರುವ ವ್ಯಾಪಾರಸ್ಥರು ಬಾಡಿಗೆಯಲ್ಲಿ ರಿಯಾಯಿತಿ ನೀಡಿದ್ದೇ ಆದರೆ, ಅಂಗಡಿಗಳನ್ನು ಪುನರಾರಂಭಿಸುತ್ತೇವೆ. ಸಹಾಯ ಮಾಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. 

ಈಗಾಗಲೇ ನಮ್ಮ ಮೆಟ್ರೋದ 10 ಅಂಗಡಿಗಳು ಶಾಶ್ವತವಾಗಿ ಬಂದ್ ಆಗಿವೆ. ಇನ್ನುಳಿದ 23 ಅಂಗಡಿಗಳು ಪುನರಾರಂಭಗೊಂಡಿವೆ ಎಂದು ಹೇಳಲಾಗುತ್ತಿದೆ. 

ಇದೀಗ ಶಾಶ್ವತವಾಗಿ ಬಂದ್ ಆಗಿರುವ 10 ಮಳಿಗೆಗಳಲ್ಲಿ ಮೂರು ಮಳಿಗೆಗಳನ್ನು ವ್ಯಾಪಾಸ್ಥರು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದಾರೆ. ಬಾಡಿಗೆ ಹಣದಲ್ಲಿ ಅಲ್ಪಮಟ್ಟಿನ ರಿಯಾಯಿತಿಗಳನ್ನು ನೀಡಿದ್ದೇ ಆದರೆ, ನಮ್ಮ ಮೆಟ್ರೋ ನಿಲ್ದಾಣದಲ್ಲಿರುವ ಅರ್ಧದಷ್ಟು ಅಂಗಡಿಗಳು ಪುನರಾರಂಭಗೊಳ್ಳಲು ಸಿದ್ಧವಾಗಿ ನಿಂತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಬೈಯಪ್ಪನಹಳ್ಳಿ, ಇಂದಿರಾನಗರ, ಹಲಸೂರು, ಟ್ರಿನಿಟಿ ಸರ್ಕಲ್, ವಿಜಯನಗರ, ಎಂಜಿ ರಸ್ತೆ, ಶ್ರೀರಾಂಪುರ, ಯಶವಂತಪುರ, ರಾಜಾಜಿನಗರ ಹಾಗೂ ಮಹಾಲಕ್ಷ್ಮಿ ಲೇ ಔಟ್ ನಿಲ್ದಾಣದೊಳಗಿನ ಮಳಿಗೆಗಳು ಈಗಾಗಲೇ ಪುನರಾರಂಭಗೊಂಡಿವೆ ಎಂದು ಮತ್ತೊಬ್ಬರ ಅಧಿಕಾರಿ ಹೇಳಿದ್ದಾರೆ. 

ಕೊರೋನಾ ಸಾಂಕ್ರಾಮಿಕ ರೋಗದ ಪರಿಣಾಮ ಕೆಲ ತಿಂಗಳುಗಳ ಕಾಲ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ನಾವು ಯಾವುದೇ ಅಂಗಡಿಯ ಬಾಡಿಗೆಯನ್ನೂ ಪಡೆದಿಲ್ಲ. ಇದೀಗ ಮತ್ತೆ ಅಂಗಡಿಗಳನ್ನು ತೆರೆದರೂ ನಷ್ಟವನ್ನು ಎದುರಿಸುತ್ತೇವೆಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆಂದು ತಿಳಿಸಿದ್ದಾರೆ. 

ನವೆಂಬರ್ 8 ರಂದು ನಮ್ಮ ಮೆಟ್ರೋದಲ್ಲಿ 68,000 ಜನರು ಸಂಚಾರ ಮಾಡಿದ್ದಾರೆ. ನವೆಂಬರ್ 9 ರಂದು ಈ ಸಂಖ್ಯೆ 73,205ಕ್ಕೆ ಏರಿಕೆಯಾಗಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಧಿಕಾರಿ ಬಿ.ಎಲ್.ಯಶವಂತ್ ಚಾವಣ್ ಅವರು ಹೇಳಿದ್ದಾರೆ. 

ನಾವು ಯಾವುದೇ ಮಳಿಗೆಗೂ ಬಾಡಿಗೆಯನ್ನು ನಿಗದಿಪಡಿಸಿಲ್ಲ. ಕನಿಷ್ಟ ಬೆಲೆಯನ್ನಷ್ಟೇ ನಿಗದಿ ಮಾಡಿದ್ದೇವೆ. ವ್ಯಾಪಾರಸ್ಥರೇ ನಿಗದಿಪಡಿಸಿಕೊಂಡಿದ್ದ ಬಾಡಿಗೆಯನ್ನು ನಾವು ನಿಗದಿಪಡಿಸಿದ್ದೇವೆ. ಪ್ರತೀ ಅಂಗಡಿಗೂ ಒಂದೊಂದು ಬಾಡಿಗೆ ಹಣವನ್ನು ನಿಗದಿ ಮಾಡಲಾಗಿದೆ. ಕೊರೋನಾ ಸಾಂಕ್ರಾಮಿಕ ರೋಗದ ಪರಿಣಾಮ ವ್ಯಾಪಾರ ವಹಿವಾಟುಗಳು ನಡೆಯುತ್ತಿಲ್ಲ. ಹೀಗಾಗಿ ಸಾಮಾನ್ಯವೆಂಬಂತೆ ವ್ಯಾಪಾರಸ್ಥರು ನೆರವು ಕೇಳುತ್ತಿದ್ದಾರೆ. ಈ ಬಗ್ಗೆ ನಾವು ಶೀಘ್ರದಲ್ಲಿಯೇ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com