ಕೊರೋನಾ 2ನೇ ಅಲೆ ನಿಯಂತ್ರಿಸಲು ಕಠಿಣ ಕ್ರಮಗಳ ಮುಂದುವರೆಸಿ: ರಾಜ್ಯ ಸರ್ಕಾರಕ್ಕೆ ತಜ್ಞರ ಸಲಹೆ

ಮುಂದಿನ ಎರಡು ತಿಂಗಳುಗಳವರೆಗೆ ಕೋವಿಡ್ -19 ಸೋಂಕುಗಳನ್ನು ಪರೀಕ್ಷಿಸುವ ಮತ್ತು ಪತ್ತೆ ಮಾಡುವ ಕಠಿಣ ನಿರ್ಧಾರಗಳನ್ನು ನಿರ್ವಹಿಸಿದರೆ, ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯನ್ನು ತಪ್ಪಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮುಂದಿನ ಎರಡು ತಿಂಗಳುಗಳವರೆಗೆ ಕೋವಿಡ್ -19 ಸೋಂಕುಗಳನ್ನು ಪರೀಕ್ಷಿಸುವ ಮತ್ತು ಪತ್ತೆ ಮಾಡುವ ಕಠಿಣ ನಿರ್ಧಾರಗಳನ್ನು ನಿರ್ವಹಿಸಿದರೆ, ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯನ್ನು ತಪ್ಪಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಅಕ್ಟೋಬರ್ 9 ರಂದು, ರಾಜ್ಯದಲ್ಲಿ ಒಂದೇ ದಿನ ಅತೀ ಹೆಚ್ಚು ಕೋವಿಡ್ ಪ್ರಕರಣಗಳು 10,913 ಪತ್ತೆಯಾಗಿತ್ತು. ಇದೇ ದಿನ ದೇಶಾದ್ಯಂತ 73,305 ಪ್ರಕರಣಗಳು ದಾಖಲಾಗಿದ್ದವು. ಬಳಿಕ ದಿನದಿಂದ ದಿನಕ್ಕೆ ದೈನಂದಿನ ಪ್ರಕಣಗಳು ಇಳಿಕೆಯಾಗುತ್ತಿದೆ. 

“ನವೆಂಬರ್‌ನಲ್ಲಿ ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸರಾಸರಿ ಸಂಖ್ಯೆ 2,335 ಆಗಿದೆ. ಅಕ್ಟೋಬರ್‌ನಲ್ಲಿ ರಾಜ್ಯದ ಸಾವಿನ ದೈನಂದಿನ ಕೋವಿಡ್ ಸಂಖ್ಯೆ 74 ದಾಖಲಾಗಿದ್ದು, ನವೆಂಬರ್‌ನಲ್ಲಿ ಅದು ಮೂರನೇ ಎರಡರಷ್ಟು 22ಕ್ಕೆ ಕುಸಿತವಾಗಿದೆ. 

ದೇಶದಲ್ಲಿ ಕೊರೋನಾ ಪರಿಸ್ಥಿತಿ ನಿಭಾಯಿಸುವಲ್ಲಿ ಐಎಎಸ್ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವದಾದ್ಯಂತ ವೈದ್ಯರ ಪರಿಶ್ರಮ ಕೂಡ ಶ್ಲಾಘನೀಯವಾದದ್ದು ತಜ್ಞ ಸಂಜೀವ್ ಮೈಸೂರು ಅವರು ಹೇಳಿದ್ದಾರೆ. 

ಕೊರೋನಾ ವಿಶ್ವವನ್ನು ಬದಲಾಗುವಂತೆ ಮಾಡಿದೆ. ಇಡೀ ದೇಶ ಅಥವಾ ಕರ್ನಾಟಕದ ದೃಷ್ಟಿಕೋನದಿಂದ ನೋಡುವುದಾದರೆ, ಮುಂದಿನ 6-8 ವಾರಗಳ ಕಾಲ ಇದೇ ರೀತಿಯ ಕಠಿಣ ಕ್ರಮಗಳನ್ನು ಮುಂದುವರೆಸಿದ್ದೇ ಆದರೆ, ಕೊರೋನಾ ಎರಡನೇ ಅಲೆಯನ್ನು ತಪ್ಪಿಸಬಹುದು. ದೆಹಲಿ ರೀತಿ ನಿರ್ಲಕ್ಷ್ಯ ಮಾಡಿದ್ದೇ ಆದರೆ, ಕೊರೋನಾ ಅಲೆಯಲ್ಲ, ಸುನಾಮಿಯೇ ಏಳಲಿದೆ ಎಂದು ತಿಳಿಸಿದ್ದಾರೆ. 

ರಾಜ್ಯದಲ್ಲಿ 2-3 ಲಕ್ಷ ಪ್ರಕರಣಗಳು ದಾಖಲಾಗಲು ಕೇವಲ 13 ದಿನಗಳು ತೆಗೆದುಕೊಂಡಿದ್ದು, 3 ಲಕ್ಷದಿಂದ 4 ಲಕ್ಷ ಪ್ರಕರಣಗಳಿಗೆ 12 ದಿನಗಳು, 4 ಲಕ್ಷದಿಂದ 5 ಲಕ್ಷ ಪ್ರಕರಣಗಳು 11 ದಿನಗಳು, 5 ಲಕ್ಷದಿಂದ 6 ಲಕ್ಷ ಪ್ರಕರಣಗಳು 13 ದಿನಗಳು, 7 ಲಕ್ಷ ಪ್ರಕರಣಗಳು  ತಲುಪಲು 6-10 ದಿನಗಳು ಮತ್ತು 7 ಲಕ್ಷದಿಂದ 8 ಲಕ್ಷ ಪ್ರಕರಣಗಳು14 ದಿನಗಳು ತೆಗೆದುಕೊಂಡಿದೆ. ಕೇವಲ 28 ದಿನಗಳಲ್ಲಿ ರಾಜ್ಯವು 8 ಲಕ್ಷ ಗಡಿ ದಾಟಿದೆ. ಆದರೆ ಇನ್ನೂ 9 ಲಕ್ಷ ಪ್ರಕರಣಗಳು  ತಲುಪಿಲ್ಲ. ಕಠಿಣ ಕ್ರಮಗಳು ಕೈಗೊಳ್ಳದೇ ಹೋದಲ್ಲಿ ದ್ವಿಗುಣಗೊಳ್ಳುವ ಸಾಧ್ಯತೆಗಳಿ ಹೆಚ್ಚಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com