9 ಮ್ಯಾಗ್ನೆಟ್ ತುಂಡುಗಳನ್ನು ನುಂಗಿದ 4 ವರ್ಷದ ಬಾಲಕಿ, ಪ್ರಾಣಾಪಾಯದಿಂದ ಪಾರು!

ಕೊರೋನಾ ಕಾರಣದಿಂದ ಮನೆಯಲ್ಲಿ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದು ಪೋಷಕರಿಗೆ ದೊಡ್ಡ ತಲೆನೋವಾಗಿ ಹೋಗಿದೆ. ಮನೆಯಲ್ಲಿ ಮಕ್ಕಳನ್ನು ಸಮಾಧಾನ ಪಡಿಸಲು ಪೋಷಕರು ಆಟಿಕೆಗಳನ್ನು ಮುಂದಕ್ಕೆ ಹಾಕಿ ಬಿಡುವುಡು ಸಾಮಾನ್ಯ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಕಾರಣದಿಂದ ಮನೆಯಲ್ಲಿ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದು ಪೋಷಕರಿಗೆ ದೊಡ್ಡ ತಲೆನೋವಾಗಿ ಹೋಗಿದೆ. ಮನೆಯಲ್ಲಿ ಮಕ್ಕಳನ್ನು ಸಮಾಧಾನ ಪಡಿಸಲು ಪೋಷಕರು ಆಟಿಕೆಗಳನ್ನು ಮುಂದಕ್ಕೆ ಹಾಕಿ ಬಿಡುವುಡು ಸಾಮಾನ್ಯ. ಆದರೆ, ಇಂತಹದ್ದೇ ಘಟನೆಯೊಂದರಲ್ಲಿ ನಾಲ್ಕು ವರ್ಷದ ಪುಟ್ಟ ಬಾಲಕಿಯೊಬ್ಬಳು ತನಗೆ ಅರಿವಿಲ್ಲದೆಯೇ ಬರೋಬ್ಬರಿ 9 ಮ್ಯಾಗ್ನೆಟ್ ತುಂಡುಗಳನ್ನು ನುಂಗಿಬಿಟ್ಟಿದ್ದಾಳೆ. 

ಬಾಲಕಿ ಮ್ಯಾಗ್ನೆಟ್ ನುಂಗಿರುವುದು ಪೋಷಕರ ಗಮನಕ್ಕೆ ಬಂದಿಲ್ಲ. ಬಾಲಕಿ ಹೊಟ್ಟೆ ನೋವು ಎಂದಾಗ ಹಾಗ ಮಲ ವಿಸರ್ಜನೆ ವೇಳೆ ರಕ್ತ ಕಂಡು ಬಂದಾಗ ಗಾಬರಿಗೊಂಡಿದ್ದಾರೆ. 

ಕೂಡಲೇ ಪೋಷಕರು ಬಾಲಕಿಯನ್ನು ಬೆಂಗಳೂರಿನ ಮಾರತ್ ಹಳ್ಳಿ ರೈನ್ ಬೋ ಮಕ್ಕಳ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರಿಗೂ ಘಟನೆ ಆಘಾತ ಮೂಡಿಸಿದೆ. 

ಎಕ್ಸ್-ರೇಗೆ ಬಾಲಕಿಯನ್ನು ಒಳಪಡಿಸಿದಾಗ ಕರುಳಿನಲ್ಲಿ 9 ಸಣ್ಣ ಮ್ಯಾಗ್ನೆಟ್ ತುಂಡುಗಳು ಹಾಗೂ ಲೀಥಿಯಂ ಅಯಾನ್ ಬ್ಯಾಟರಿ ಇರುವುದು ಕಂಡು ಬಂದಿದೆ. 

ಬಾಲಗಿ ಮ್ಯಾಗ್ನೆಟ್ ನುಂಗಿ 2 ದಿನಗಳಾದ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಬಂದ ಹಿನ್ನೆಲೆಯಲ್ಲಿ ಅದಾಗಲೇ ಹೊಟ್ಟೆಯೊಳಗೆ ಈ ವಸ್ತುಗಳು ಸಾಕಷ್ಟು ಹಾನಿ ಮಾಡಿದೆ. ಬ್ಯಾಟರಿ ಹೊಟ್ಟೆಯ ಒಳಭಾಗವನ್ನು ಸುಟ್ಟ ಕಾರಣ ಕರುಳಿನ ಗೋಡೆಗೆ ಎರಡು ಕಡೆಗಳಲ್ಲಿ ಹಾನಿಯಾಗಿದೆ. ಹಾಗೆಯೇ ಮ್ಯಾಗ್ನೆಟ್ಸ್ ಅಲ್ಲಲ್ಲಿ ರಂಧ್ರಗಳನ್ನು ಕೂಡ ಮಾಡಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 

ಮೊದಲಿಗೆ ವೈದ್ಯರು ಈ ವಸ್ತುಗಳನ್ನು ಎಂಡೋಸ್ಕೊಪಿ ಮತ್ತು ಕೊಲೊನೋಸ್ಕೊಪಿ ಮೂಲಕ ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನಗಳಾಗಿಲ್ಲ. ತದನಂತರ ಸತತ ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆಯನ್ನು ಕೈಗೊಂಡು ಕೊನೆಗೂ ಬ್ಯಾಟರಿ ಹಾಗೂ ಮ್ಯಾಗ್ನೆಟ್ ಗುಂಡುಗಳನ್ನು ಹೊರತೆಗೆದಿದ್ದಾರೆ. 

ಬಾಲಕಿಯ ತಂದೆ ಮಾತನಾಡಿ, ದೊಡ್ಡ ಮಗಳು ಆಟವಾಡುತ್ತಿದ್ದ ಆಟಿಕೆಯಲ್ಲಿ ಬ್ಯಾಟರಿ ಹಾಗೂ ಮ್ಯಾಗ್ನೆಟ್ ತುಂಡುಗಳಿದ್ದವು. ಇದನ್ನು ನನ್ನ ಕೊನೆಯ ಮಗಳು ಆಟವಾಡುತ್ತಿದ್ದಾಗ ನುಂಗಿದ್ದಾಳೆಂದು ಹೇಳಿದ್ದಾರೆ. 

ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಚಾರ್ಲ್ಸ್ ಅವರು ಮಾತನಾಡಿ, ಮಕ್ಕಳು ಆಟಿಕೆಗಳೊಂಡಿಗೆ ಆಟವಾಡುತ್ತಿರುವಾಗ ಪೋಷಕರು ಹೆಚ್ಚು ಜಾಗೃತರಾಗಿರಬೇಕಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com