ಹಬ್ಬದ ವಿಶೇಷ ರೈಲು ಸೇವೆ ಡಿಸೆಂಬರ್ ಅಂತ್ಯದವರೆಗೂ ವಿಸ್ತರಣೆ: ನೈಋತ್ಯ ರೈಲ್ವೆ

ನೈಋತ್ಯ ರೈಲ್ವೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾರಿ ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ನಗರಗಳಿಗೆ ಕಾರ್ಯಾಚರಿಸಿದ್ದ ವಿಶೇಷ ರೈಲುಗಳ ಸಂಚಾರವನ್ನು ಡಿಸೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನೈಋತ್ಯ ರೈಲ್ವೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾರಿ ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ನಗರಗಳಿಗೆ ಕಾರ್ಯಾಚರಿಸಿದ್ದ ವಿಶೇಷ ರೈಲುಗಳ ಸಂಚಾರವನ್ನು ಡಿಸೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗಿದೆ. 

ಕೆಎಸ್ಆರ್ ಬೆಂಗಳೂರು ಬೋಧಪರ ನಡುವೆ ವಾರಕ್ಕೆ 2 ಬಾರಿ ಸಂಚಾರ ನಡೆಸುವ ರೈಲನ್ನು ಡಿಸೆಂಬರ್ 30ರವರೆಗೂ ವಿಸ್ತರಣೆ ಮಾಡಲಾಗಿದೆ. ಜೋಧಪುರ ಕೆಎಸ್ಆರ್ ಬೆಂಗಳೂರು ರೈಲನ್ನು 2021ರ ಜನವರಿ 2ರ ವರೆಗೂ ವಿಸ್ತರಿಸಲಾಗಿದೆ. 

ಮೈಸೂರು ಅಜ್ಮೀರ್ ನಡುವೆ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ಹಬ್ಬದ ವಿಶೇಷ ರೈಲನ್ನು ಡಿ.31ರ ವರೆಗೂ ವಿಸ್ತರಣೆ ಮಾಡಲಾಗಿದೆ. ಅಜ್ಮೀರ್ ಮೈಸೂರು ನಡುವಿನ ರೈಲನ್ನು ಜ.3ರವರೆಗೂ ವಿಸ್ತರಣೆ ಮಾಡಲಾಗಿದೆ. 

ಮೈಸೂರು ಟ್ಯುಟಿಕಾರಿನ್ ಪ್ರತಿದಿನದ ರೈಲು, ಕೆಎಸ್ಆರ್ ಬೆಂಗಳೂರು ಕನ್ಯಾಕುಮಾರಿ ಪ್ರತಿದಿನದ ರೈಲು, ಕನ್ಯಾಕುಮಾರಿ ಕೆಎಸ್ಆರ್ ಬೆಂಗಳೂರು ಪ್ರತಿದಿನದ ರೈಲು, ಬೆಂಗಳೂರು ಕಂಟೋನ್ಮೆಂಟ್ ಭುವನೇಶ್ವರ ಮಂಗಳವಾರದ ರೈಲು, ಭುವನೇಶ್ವರ ಬೆಂಗಳೂರು ಕಂಟೋನ್ಮೆಂಟ್ ಭಾನುವಾರದ ರೈಲನ್ನು ಸಹ ವಿಸ್ತರಣೆ ಮಾಡಲಾಗಿದೆ. 

ವಿಶೇಷ ರೈಲುಗಳಲ್ಲಿ ಪ್ರಯಾಣಿಸಲು ಹಿಂದಿನಂತೆ 10 ದಿನಕ್ಕೂ ಮುಂಚಿತವಾಗಿ ಮುಂಗಡ ಟಿಕೆಟ್ ಕಾಯ್ದಿರಿಸಬೇಕು. ವಿಶೇಷ ಪ್ರಯಾಣ ದರವೇ ಈ ರೈಲುಗಳಿಗೆ ಅನ್ವಯವಾಗಲಿದೆ. ಪ್ರಯಾಣಿಕರು ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ನೈಋತ್ಯ ರೈಲ್ವೇ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com