ಕೊರೊನಾ ನೆಗೆಟೀವ್‌ ವರದಿ ನೀಡಲು ಲಂಚ ಪಡೆಯುತ್ತಿದ್ದ ಆರೋಗ್ಯ ಸೇವಾ ಸಿಬ್ಬಂದಿ ವಜಾ

ಕೋವಿಡ್‌ ಸೋಂಕಿನ ನಕರಾತ್ಮಕ ವರದಿ ನೀಡಲು ಲಂಚ ಪಡೆಯುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಬ್ಬತ್ತಿ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆ ಶಾಂತ ಹಾಗೂ ಲ್ಯಾಬ್ ಟೆಕ್ನಿಷಿಯನ್(ಎನ್.ಯು.ಹೆಚ್.ಎಂ ಸಿಬ್ಬಂದಿ) ಮಹಾಲಕ್ಷ್ಮೀ ಅವರನ್ನು ವಜಾಗೊಳಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.
ಕೊರೊನಾ ನೆಗೆಟೀವ್‌ ವರದಿ ನೀಡಲು ಲಂಚ ಪಡೆಯುತ್ತಿದ್ದ ಆರೋಗ್ಯ ಸೇವಾ ಸಿಬ್ಬಂದಿ ವಜಾ

ಬೆಂಗಳೂರು: ಕೋವಿಡ್‌ ಸೋಂಕಿನ ನಕರಾತ್ಮಕ ವರದಿ ನೀಡಲು ಲಂಚ ಪಡೆಯುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಬ್ಬತ್ತಿ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆ ಶಾಂತ ಹಾಗೂ ಲ್ಯಾಬ್ ಟೆಕ್ನಿಷಿಯನ್(ಎನ್.ಯು.ಹೆಚ್.ಎಂ ಸಿಬ್ಬಂದಿ) ಮಹಾಲಕ್ಷ್ಮೀ ಅವರನ್ನು ವಜಾಗೊಳಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

ಆರೋಪಿಗಳು ಕೋವಿಡ್‌ ಪರೀಕ್ಷೆಯ ನೆಗೆಟೀವ್‌ ವರದಿ ನೀಡಲು 2,500 ರೂ. ಲಂಚ ಪಡೆಯುತ್ತಿದ್ದರು ಎಂದು ಮಂಗಳವಾರ ಮಾಧ್ಯಮದಲ್ಲಿ ವರದಿಯಾಗಿತ್ತು.

ಜೊತೆಗೆ, ಆರೋಗ್ಯ ಕೇಂದ್ರದ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ವೈದಾಧಿಕಾರಿಯಾದ ಡಾ. ಶೈಲಜಾ ಅವರನ್ನು ಕರ್ತವ್ಯ ನಿರ್ಲಕ್ಷತನ ಹಿನ್ನಲೆಯಲ್ಲಿ ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ದಕ್ಷಿಣ ವಿಭಾಗದ ಜಂಟಿ ಆಯುಕ್ತರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com