ಕೆಆರ್ ಮಾರುಕಟ್ಟೆ ಪೊಲೀಸ್ ಠಾಣೆ
ಕೆಆರ್ ಮಾರುಕಟ್ಟೆ ಪೊಲೀಸ್ ಠಾಣೆ

ಬೆಂಗಳೂರು: ದಾಖಲೆ ರಹಿತ 65 ಲಕ್ಷ ರೂ ಹಣ ಸಾಗಾಟ, ಮೂವರು ಪೊಲೀಸ್ ವಶಕ್ಕೆ!

ದಾಖಲೆ ಇಲ್ಲದ ಸುಮಾರು 65 ಲಕ್ಷ ರೂ ಹಣವನ್ನು ಸಾಗಿಸುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನ ಕೆಆರ್ ಮಾರುಕಟ್ಟೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು: ದಾಖಲೆ ಇಲ್ಲದ ಸುಮಾರು 65 ಲಕ್ಷ ರೂ ಹಣವನ್ನು ಸಾಗಿಸುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನ ಕೆಆರ್ ಮಾರುಕಟ್ಟೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ 65 ಲಕ್ಷ ಹಣವನ್ನು ಸಿಟಿ ಮಾರ್ಕೆಟ್​ ಠಾಣೆ ಪೊಲೀಸರು ಜಪ್ತಿ ಮಾಡಿದ್ದು, ಈ ಸಂಬಂಧ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ದಸ್ತಗಿರ್, ಕಿರಣ್‌ಕುಮಾರ್ ಮತ್ತು ಮಸ್ತಾನ್ ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ ಆಂಧ್ರ ಪ್ರದೇಶ ರಾಜ್ಯದ ನೋಂದಣಿಯುಳ್ಳ ಎರ್ಟಿಗಾ ಕಾರಿನಲ್ಲಿ ಆರ್.ಟಿ. ಸ್ಟ್ರೀಟ್​ನ ರಂಗಸ್ವಾಮಿ ದೇವಸ್ಥಾನದ ಬಳಿ ಬಂದಿದ್ದ ಮೂವರು ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಬೀಟ್​ನಲ್ಲಿದ್ದ ಸಿಟಿ ಮಾರ್ಕೆಟ್ ಪೊಲೀಸರು ಇದನ್ನು ಗಮನಿಸಿ ಅವರನ್ನು ವಿಚಾರಿಸಿದ್ದಾರೆ.   ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಬ್ಬಿಬ್ಬಾಗಿದ್ದು, ಕಾರಿನಲ್ಲಿ 20 ಲಕ್ಷ ರೂ ಹಣವಿದೆ ಎಂದು ಹೇಳಿದ್ದಾರೆ. ಅನುಮಾನದ ಮೇಲೆ ಪೊಲೀಸರು ಕಾರಿನ ಢಿಕ್ಕಿ ತೆಗೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬ್ಯಾಗ್ ಪತ್ತೆಯಾಗಿದ್ದು, ಬ್ಯಾಗ್ ನಲ್ಲಿ 65 ಲಕ್ಷ ರೂ ಹಣವಿರುವುದು ಪತ್ತೆಯಾಗಿದೆ. 

ಕೂಡಲೇ ಬೀಟ್ ಪೊಲೀಸರು ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಕುಮಾರಸ್ವಾಮಿ ಅವರು, ಬ್ಯಾಗ್ ಅನ್ನು ಜಪ್ತಿ ಮಾಡಿ ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಕೆಆರ್ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com