ಕಬ್ಬನ್ ಪಾರ್ಕ್ ನಲ್ಲಿ ಮತ್ತೆ ವಾಹನ ಸಂಚಾರ ಶೀಘ್ರ ಆರಂಭ?

ಕೊರೋನಾ ವೈರಸ್ ಲಾಕ್ ಡೌನಾ ಬಳಿಕ ಸ್ಥಗಿತವಾಗಿದ್ದ ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ಮತ್ತೆ ಆರಂಭಗೊಳ್ಳುವ ಸಾಧ್ಯತೆ ಇದೆ.
ಕಬ್ಬನ್ ಪಾರ್ಕ್
ಕಬ್ಬನ್ ಪಾರ್ಕ್

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನಾ ಬಳಿಕ ಸ್ಥಗಿತವಾಗಿದ್ದ ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ಮತ್ತೆ ಆರಂಭಗೊಳ್ಳುವ ಸಾಧ್ಯತೆ ಇದೆ.

ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ಮನವಿ ಮಾಡಿದ್ದು, ಈ ಕುರಿತು ಕ್ಲಬ್‍ನ ಗೌರವ ಕಾರ್ಯದರ್ಶಿ ಯು.ಡಿ.ನರಸಿಂಹಯ್ಯ ಅವರು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ಪತ್ರ ಬರೆದಿದ್ದಾರೆ.

'ಕಬ್ಬನ್ ಉದ್ಯಾನದಲ್ಲಿರುವ ಸಚಿವಾಲಯ ಕ್ಲಬ್ ಸೆ.1ರಿಂದ ಚಟುವಟಿಕೆಗಳನ್ನು ಆರಂಭಿಸಿದೆ. ವಿವಿಧ ಉದ್ದೇಶಗಳಿಗಾಗಿ ಹಲವರು ಉದ್ಯಾನದಲ್ಲಿರುವ ವಿವಿಧ ಕಚೇರಿಗಳಿಗೆ ಬರುತ್ತಾರೆ. ಆದರೆ, ಉದ್ಯಾನದ ಪ್ರವೇಶದ್ವಾರಗಳನ್ನು ಮುಚ್ಚಿರುವುದರಿಂದ ಕ್ಲಬ್‍ನ ಕಾರ್ಯಚಟುವಟಿಕೆಗಳಿಗೆ ಬಹಳ ತೊಂದರೆ ಉಂಟಾಗಿದೆ.  ಹಾಗಾಗಿ, ಉದ್ಯಾನದಲ್ಲಿ ಮೊದಲಿನಂತೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು' ಎಂದು ಮನವಿ ಮಾಡಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆಗೆ ಬೆಂಗಳೂರು ಸಂಚಾರ ಪೊಲೀಸರು ಕೂಡ ಪತ್ರ ಬರೆದಿದ್ದು, ಈ ಪತ್ರಕ್ಕೆ ಕಬ್ಬನ್ ಪಾರ್ಕ್ ಟ್ರಾಫಿಕ್ ಇನ್ಸ್ ಪೆಕ್ಟರ್ ಸಹಿ ಹಾಕಿದ್ದಾರೆ. ಇಂದು ಪತ್ರಕ್ಕೆ ತೋಟಗಾರಿಕಾ ಇಲಾಖೆ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ.

ವಾಹನ ಸಂಚಾರಕ್ಕೆ ಅನುಮತಿ ಬೇಡ: ಪರಿಸರವಾದಿಗಳ ಆಗ್ರಹ
ಇನ್ನು ಕಬ್ಬನ್ ಪಾರ್ಕ್ ಆವರಣಗದಲ್ಲಿ ವಾಹನಗಳಿಗೆ ಅನುವು ಮಾಡಿಕೊಡದಂತೆ ಪರಿಸರವಾದಿಗಳು ಆಗ್ರಹಿಸುತ್ತಿದ್ದಾರೆ, ಕಬ್ಬನ್ ಪಾರ್ಕ್ ನಡಿಗೆದಾರರು ವಾಹನ ಸಂಚಾರಕ್ಕೆ ಅನುಮತಿ ನೀಡಬಾರದು ಎಂದು ಇಂದು ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅಧಿಕಾರಿರಗಳು ಕಬ್ಬನ್ ಪಾರ್ಕ್ ನಲ್ಲಿ  ವಾಹನ ಸಂಚಾರಕ್ಕೆ ಅನುಮತಿ ನೀಡುವ ಕುರಿತು ನಮಗೆ ಮಾಹಿತಿ ಬಂದಿದೆ. ಆದರೆ ಪರಿಸರವಾದಿಗಳ ಗಮನಕ್ಕೆ ತರದೇ ಸರ್ಕಾರ ಹೇಗೆ ನಿರ್ಣಯ ಕೈಗೊಳ್ಳಲು ಸಾಧ್ಯ. ಈ ಬಗ್ಗೆ ನಾವು ಸಹಿ ಸಂಗ್ರಹ ಜಾಗೃತಿ ಅಭಿಯಾನ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

'ಅಧಿಕಾರಿಗಳು, ಮಂತ್ರಿಗಳು ಮತ್ತು ನಾಗರಿಕರು ಸೇರಿದಂತೆ ಪ್ರತಿಯೊಬ್ಬರೂ #TrafficFreeCubbonPark ಅನ್ನು ಬೆಂಬಲಿಸುತ್ತಿದ್ದಾರೆ, ನಗರಕ್ಕಾಗಿ, ನಾಗರಿಕರಿಗೆ, ನಮ್ಮ ಮಕ್ಕಳಿಗೆ, ಮತ್ತು ಸುಸ್ಥಿರ ಬೆಂಗಳೂರಿಗೆ ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಹೆರಿಟೇಜ್  ಬೇಕು ಸದಸ್ಯೆ ಪ್ರಿಯಾ ಚೆಟ್ಟಿ ರಾಜಗೋಪಾಲ್ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com