ಜೆಇಇ ಮುಖ್ಯ ಪರೀಕ್ಷೆ: ಶೇ. 99.99 ಅಂಕಗಳೊಂದಿಗೆ 65ನೇ ರ‍್ಯಾಂಕ್ ಪಡೆದ ಬೆಂಗಳೂರಿನ ವಿದ್ಯಾರ್ಥಿ

 ಜೆಇಇ ಮುಖ್ಯ ಪರೀಕ್ಷೆಯಲ್ಲಿ ರಾಜ್ಯಕ್ಕೆ  ಟಾಪರ್ ಆಗಿರುವ ಬೆಂಗಳೂರಿನ ಸುಭಾಷ್ ಆರ್, ಬಾಂಬೈ ಐಐಟಿಯಲ್ಲಿ ಕೃತಕ ಬುದ್ದಿಮತ್ತೆಯಲ್ಲಿ ( ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ) ಮುಂದಿನ ವ್ಯಾಸಂಗ ಮುಂದುವರೆಸಲು ಎದುರು ನೋಡುತ್ತಿದ್ದಾರೆ.
ಬೆಂಗಳೂರು ವಿದ್ಯಾರ್ಥಿ ಸುಭಾಷ್
ಬೆಂಗಳೂರು ವಿದ್ಯಾರ್ಥಿ ಸುಭಾಷ್

ಬೆಂಗಳೂರು: ಜೆಇಇ ಮುಖ್ಯ ಪರೀಕ್ಷೆಯಲ್ಲಿ ರಾಜ್ಯಕ್ಕೆ  ಟಾಪರ್ ಆಗಿರುವ ಬೆಂಗಳೂರಿನ ಸುಭಾಷ್ ಆರ್, ಬಾಂಬೈ ಐಐಟಿಯಲ್ಲಿ ಕೃತಕ ಬುದ್ದಿಮತ್ತೆಯಲ್ಲಿ ( ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ) ಮುಂದಿನ ವ್ಯಾಸಂಗ ಮುಂದುವರೆಸಲು ಎದುರು ನೋಡುತ್ತಿದ್ದಾರೆ.

ಈ ಕ್ಷೇತ್ರವು ನಮ್ಮ ಸುತ್ತಲಿನ ಪ್ರಪಂಚವನ್ನು ಅಗಾಧ ರೀತಿಯಲ್ಲಿ ಬದಲಿಸಿದೆ, ಜನರ ಜೀವನವನ್ನು ಬದಲಾಯಿಸುವ ಸಾಧ್ಯತೆಗಳನ್ನು ಹೊಂದಿದೆ, ಮತ್ತು ಬಹುಶಃ ಹೊಸ  ಔಷಧ ಸೃಷ್ಟಿ ಸೇರಿದಂತೆ ಜೈವಿಕ ವೈದ್ಯಕೀಯ ಉದ್ದೇಶಗಳಿಗಾಗಿ ಮುಂದಿನ ಮಾರ್ಗವಾಗಿದೆ ಎಂದು ಅವರು ದಿ ನ್ಯೂ ಸಂಡೇ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಜನವರಿಯಲ್ಲಿ ನಡೆದ ಪರೀಕ್ಷೆಯಲ್ಲಿ ಶೇ. 99.99 ಫಲಿತಾಂಶ ಪಡೆದಿದ್ದ ಸುಭಾಷ್ ಜೆಇಇ ಮುಖ್ಯ ಪರೀಕ್ಷೆಯಲ್ಲಿಯೂ ಅದೇ ಫಲಿತಾಂಶ ಪಡೆದಿದ್ದು, ಅಖಿಲ ಭಾರತ ಮಟ್ಟದಲ್ಲಿ 65ನೇ ಸ್ಥಾನ ಪಡೆದುಕೊಂಡಿದ್ದಾರೆ.

ರವಿ ಪ್ರಸಾದ್ ಜೆ ಮತ್ತು ಸುಧಾ ಗೋಪಾಲಕೃಷ್ಣನ್ ದಂಪತಿಯ ಮಗನಾಗಿರುವ ಸುಭಾಷ್, ಜೆಇಇ ಅಡ್ವಾನ್ಸ್ಡ್ ತಮ್ಮ ಮುಖ್ಯ ಗುರಿಯಾಗಿದೆ ಎಂದು ಹೇಳಿದ್ದಾರೆ.

ವಿದ್ಯಾರಣ್ಯಪುರದ ಚೈತನ್ಯ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿರುವ ಸುಭಾಷ್, ಲಾಕ್ ಡೌನ್ ವೇಳೆಯಲ್ಲಿ ಕೋಚಿಂಗ್ ಪಡೆದಿದ್ದು, ತನ್ನ ಶಿಕ್ಷಕರೊಂದಿಗೆ ಆನ್ ಲೈನ್ ನಲ್ಲಿ  ಸಂಪರ್ಕದಲ್ಲಿರುವ ಮೂಲಕ ವಿವಿಧ ಪ್ರವೇಶ ಪರೀಕ್ಷೆ ಎದುರಿಸಿ, ಜನವರಿ ಹಾಗೂ ಸೆಪ್ಟೆಂಬರ್ ನಲ್ಲಿ ಎರಡು ಹಂತಗಳಲ್ಲಿ ನಡೆದ ಪರೀಕ್ಷೆಯನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ.

ಸಿಇಟಿ, ಐಐಐಟಿ ಮತ್ತು ಕಾಮೆಡ್ ಸೇರಿದಂತೆ ಇನ್ನಿತರ ಪ್ರವೇಶ ಪರೀಕ್ಷೆಗಳನ್ನು ಎದುರಿಸಿದ್ದರಿಂದ ಜೆಇಇ ಪರೀಕ್ಷೆ ಬರೆಯಲು ಸಾಧ್ಯವಾಯಿತು ಎಂದು ಪೋಷಕಾರದ ಅನ್ನಿಪ್ರಕಾಶ್ ಹೇಳಿದ್ದಾರೆ. ಅವರ ಮಗನದು ಜೆಇಇ ಪರೀಕ್ಷೆಯಲ್ಲಿ ಶೇ. 99. 73 ರಷ್ಟು ಅಂಕ ಬಂದಿದ್ದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com