ಮಂಗಳೂರು: ಚಿರತೆಗೆ ಪ್ರಸವ ವೇದನೆ, ಶಸ್ತ್ರ ಚಿಕಿತ್ಸೆ, ಹೊಟ್ಟೆಯಲ್ಲೆ ಮೃತಪಟ್ಟ ಮರಿಗಳು!

ಪಿಲಿಕುಳ ನಿಸರ್ಗ ಧಾಮದ ಮೃಗಾಲಯದಲ್ಲಿರುವ ಎಂಟು ವರ್ಷ ಪ್ರಾಯದ ಹೆಣ್ಣು ಚಿರತೆ ಚಿಂಟುವಿಗೆ ಪ್ರಸವ ಸಮಸ್ಯೆಯಿಂದ ಸ್ಥಿತಿ ಗಂಭೀರವಾಗಿತ್ತು.
ಚಿಕಿತ್ಸೆಯ ಫೋಟೋ
ಚಿಕಿತ್ಸೆಯ ಫೋಟೋ

ಮಂಗಳೂರು: ಪಿಲಿಕುಳ ನಿಸರ್ಗ ಧಾಮದ ಮೃಗಾಲಯದಲ್ಲಿರುವ ಎಂಟು ವರ್ಷ ಪ್ರಾಯದ ಹೆಣ್ಣು ಚಿರತೆ ಚಿಂಟುವಿಗೆ ಪ್ರಸವ ಸಮಸ್ಯೆಯಿಂದ ಸ್ಥಿತಿ ಗಂಭೀರವಾಗಿತ್ತು. 

ಬಳಿಕ  ತುರ್ತಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಗರ್ಭದಲ್ಲಿದ್ದ ಎರಡು ಮೃತಪಟ್ಟ ಮರಿಗಳನ್ನು ಹೊರತೆಗೆಯಲಾಯಿತು. ಶಸ್ತ್ರ ಚಿಕಿತ್ಸೆಯ ನಂತರ ಚಿರತೆ ಚೇತರಿಸುತ್ತಿದ್ದು, ಮೃಗಾಲಯದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಚಿರತೆಯ ಆರೋಗ್ಯದ ಬಗ್ಗೆ ನಿಗಾವಹಿಸಿದ್ದಾರೆ.

ಶಸ್ತ್ರಚಿಕಿತ್ಸೆನ್ನು ಮೃಗಾಲಯದ ವೈದ್ಯಾಧಿಕಾರಿ ಡಾ. ವಿಷ್ಣುದತ್ ಮತ್ತು ಡಾ. ಯಶಸ್ವಿ ನಡೆಸಿದರು.  

ಎಂಟು ವರ್ಷಗಳ ಹಿಂದೆ ತಾಯಿಯಿಂದ ಪರಿತಕ್ತವಾದ ಐದು ದಿನಗಳ ಮರಿಯನ್ನು ಮೂಡುಬಿದರೆ ಸಮೀಪದಿದಂದ ರಕ್ಷಿಸಿ ಪಿಲಿಕುಳ ಮೃಗಾಲಯದಲ್ಲಿ ಚಿಂಟು ಎಂದು ಹೆಸರಿಟ್ಟು ಪೋಷಿಸಿ ಬೆಳೆಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com