ಸರ್ಕಾರದ ವಿವಾದಿತ ನಿರ್ಣಯದ ವಿರುದ್ಧ ತಿರುಗಿ ಬಿದ್ದ ವೈದ್ಯರು, ಸಚಿವರಿಗೆ ಮನವಿ

ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಆಯುಷ್ ವೈದ್ಯರ ಮೇಲೆ ಎಸೆನ್ಷಿಯಲ್ ಮಾಡರ್ನ್ ಮೆಡಿಸಿನ್ (ಇಂಟಗ್ರೇಟೆಡ್ ಸಿಸ್ಟಮ್) ಅಭ್ಯಾಸ ಮಾಡುವ ಸರ್ಕಾರದ ನಿರ್ಧಾರಕ್ಕೆ ನಿಮಾ (ರಾಷ್ಟ್ರೀಯ ಸಮಗ್ರ ವೈದ್ಯಕೀಯ ಸಂಘ-ನಿಮಾ) ವಿರೋಧ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಆಯುಷ್ ವೈದ್ಯರ ಮೇಲೆ ಎಸೆನ್ಷಿಯಲ್ ಮಾಡರ್ನ್ ಮೆಡಿಸಿನ್ (ಇಂಟಗ್ರೇಟೆಡ್ ಸಿಸ್ಟಮ್) ಅಭ್ಯಾಸ ಮಾಡುವ ಸರ್ಕಾರದ ನಿರ್ಧಾರಕ್ಕೆ ನಿಮಾ (ರಾಷ್ಟ್ರೀಯ ಸಮಗ್ರ ವೈದ್ಯಕೀಯ ಸಂಘ-ನಿಮಾ) ವಿರೋಧ ವ್ಯಕ್ತಪಡಿಸಿದೆ.

ಈ ಕುರಿತಂತೆ ಸಂಘದ ವೈದ್ಯರು ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರನ್ನು ಭೇಟಿ ಮಾಡಿದ್ದು, ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ. ವೈದ್ಯರ ಕುರಿತ ವಿವಾದಿತ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದ್ದಾರೆ.

ಸರ್ಕಾರ ಆದೇಶವು ಸುಪ್ರೀಂ ಕೋರ್ಟ್‌ನ ಇಂಟರ್ಲೋಕ್ಯೂಟರಿ ತೀರ್ಪಿನ ಎಸ್‌ಎಲ್‌ಪಿ (2016 ರ ಸಿವಿಲ್ 26145) ಉಲ್ಲಂಘನೆಯಾಗಿದೆ. ಕೂಡಲೇ ಅದನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವನ್ನು ಕೇಳಲಾಗಿದೆ ಎಂದು ನಿಮಾ ಹೇಳಿದೆ. ಈ ಬಗ್ಗೆ ಮಾತನಾಡಿದ ನಿಮಾ ಉಪಾಧ್ಯಕ್ಷ ಡಾ.ಭೂಸ್ನೂರ್ಮತ್  ಆರ್.ಜಿ ಅವರು ಮಾತನಾಡಿ, 'ಕೋವಿಡ್ -19 ಸಾಂಕ್ರಾಮಿಕ ರೋಗದಲ್ಲಿ ನಿಮಾ ಸದಸ್ಯರು ತಮ್ಮ ವೈದ್ಯಕೀಯ ಅಭ್ಯಾಸವನ್ನು ಮುಂದುವರಿಸಲು ಮತ್ತು ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಯಾವುದೇ ಕಾನೂನು ತಡೆ ಇಲ್ಲ. ಸಮಗ್ರ ಔಷಧಿ ವ್ಯವಸ್ಥೆಯನ್ನು ಅಭ್ಯಾಸ ಮಾಡುವ ಕುರಿತ ನಿಮಾ ಅರ್ಜಿಯ ವಿಚಾರಣೆ  ಸುಪ್ರೀಂ ಕೋರ್ಟ್‌ನಲ್ಲಿದೆ. ಸರ್ಕಾರ ಸುಪ್ರೀಂ ಕೋರ್ಟ್ ನ ಮಧ್ಯಂತರ ತೀರ್ಪನ್ನು ಗೌರವಿಸಬೇಕು. ಹಠದ ಆದೇಶದ ಮಾಡಿ ನ್ಯಾಯಾಂಗ ನಿಂದನೆ ಮಾಡಬಾರದು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com