ಸಾಂಕ್ರಾಮಿಕ ರೋಗ ಸಂಕಷ್ಟ ಬದಿಗೊತ್ತಿ, ಜೀವನೋಪಾಯಕ್ಕೆ ಬ್ಯೂಟಿಪಾರ್ಲರ್ ತೆರೆದ ತೃತೀಯ ಲಿಂಗಿಗಳು!

ಸಾಮಾಜಿಕ ತಿರಸ್ಕಾರ, ನಿಂದನೆ, ಕಿರುಕುಳ ನಡುವೆಯೂ ಎದೆಗುಂದದೆ ಉತ್ತಮ ಬದುಕು ಕಟ್ಟಿಕೊಳ್ಳುವ ಸಲುವಾಗಿ ಸಮಾನ ವಯಸ್ಕರಾದ ತೃತೀಯ ಲಿಂಗಿಗಳೇ ಸೇರಿ ನಗರದಲ್ಲಿ ಬ್ಯೂಟಿಪಾರ್ಲರ್ ತೆರೆಯುತ್ತಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾಮಾಜಿಕ ತಿರಸ್ಕಾರ, ನಿಂದನೆ, ಕಿರುಕುಳ ನಡುವೆಯೂ ಎದೆಗುಂದದೆ ಉತ್ತಮ ಬದುಕು ಕಟ್ಟಿಕೊಳ್ಳುವ ಸಲುವಾಗಿ ಸಮಾನ ವಯಸ್ಕರಾದ ತೃತೀಯ ಲಿಂಗಿಗಳೇ ಸೇರಿ ನಗರದಲ್ಲಿ ಬ್ಯೂಟಿಪಾರ್ಲರ್ ತೆರೆಯುತ್ತಿದ್ದಾರೆ. 

ನಗರದಲ್ಲಿ ತೃತೀಯಿ ಲಿಂಗಿಗಳು ಆರಂಭಿಸಿರುವ ಮೊಟ್ಟ ಮೊದಲ ಬ್ಯೂಟಿ ಪಾರ್ಲರ್ ಇದಾಗಿದ್ದು, ಮಹಿಳೆಯರು ಹಾಗೂ ಮಕ್ಕಳಿಗೆ ಮೀಸಲಾಗಿದೆ. 

ತೃತೀಯ ಲಿಂಗಿಗಳಾದ ನಕ್ಷತ್ರ, ಮಿಲನ, ಮಾನಸ, ಅಂಜಲಿ ಈ ನಾಲ್ವರು ಸೇರಿ ಟ್ರಾನ್ಸ್ ಟ್ರೆಂಡ್ಜ್ ಹೆಸರಿನಲ್ಲಿ ಈ ಬ್ಯೂಟಿಪಾರ್ಲರ್'ನ್ನು ಪ್ರಾರಂಭಿಸುತ್ತಿದ್ದಾರೆ. ಅಕ್ಟೋಬರ್ 1 ರಿಂದ ಬ್ಯೂಟಿ ಪಾರ್ಲರ್ ಪ್ರಾರಂಭಗೊಳ್ಳಳಿದೆ. 

ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾದ ಬಳಿಕ ನಾವು ಪಾರ್ಲರ್ ತರಬೇತಿ ಪಡೆದುಕೊಂಡಿದ್ದೆವು, ಇದರಿಂದ ನಮ್ಮ ಜೀವನಕ್ಕೆ ಏನಾದರೂ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದೆವು. ಆದರೆ, ಲಾಕ್ಡೌನ್ ನಿಂದಾಗಿ ನಮ್ಮ ಬಳಿಯಿದ್ದ ಹಣವೆಲ್ಲಾ ಖರ್ಚಾಗಿ ಹೋಗಿತ್ತು. ಕಳೆದ 6 ತಿಂಗಳಿಂದ ನಾವು ಪರಿಚಯಗೊಂಡಿದ್ದೆವು. ಪಾರ್ಲರ್ ತೆರೆಯಲು ನಮ್ಮ ಬಳಿಯಿದ್ದ ಎಲ್ಲಾ ಹಣವನ್ನೂ ಹಾಕಿದ್ದೆವು. ಆದರೆ, ಆ ಹಣ ಸಾಕಾಗಲಿಲ್ಲ. ಪಾರ್ಲರ್ ಸಂಪೂರ್ಣವಾಗಿ ಆರಂಭವಾಗಲು ನಮಗೆ ಮತ್ತಷ್ಟು ಹಣದ ಅಗತ್ಯವಿದೆ. ಪೀಣ್ಯದಲ್ಲಿ ಪಾರ್ಲರ್ ತೆಗೆಯುತ್ತಿದ್ದೇವೆ. ನಾವು ಪೀಣ್ಯದ ಬಳಿಯೇ ಇರುವುದರಿಂದ ನಮಗೆ ಹತ್ತಿರವಾಗುವಂತೆಯೇ ಪಾರ್ಲರ್'ನ್ನು ಅಲ್ಲಿಯೇ ತೆರೆಯುತ್ತಿದ್ದೇವೆ. ಸಂಪೂರ್ಣವಾಗಿ ಪಾರ್ಲರ್ ಆರಂಭಕ್ಕೆ ಮತ್ತಷ್ಟು ಹಣದ ಅಗತ್ಯವಿರುವುದರಿಂದ ದಾನಿಗಳಿಗಾಗಿ ಹುಡುಕಾಡುತ್ತಿದ್ದೇವೆಂದು ನಕ್ಷತ್ರಾ ಅವರು ಹೇಳಿದ್ದಾರೆ. 

ಸಾಂಕ್ರಾಮಿಕ ರೋಗ ಆರಂಭವಾಗುವುದಕ್ಕೂ ಹಿಂದೆ ಕರ್ನಾಟಕ ಜನಸೇನಾ ಟ್ರಸ್ಟ್ ಎಂಬ ಲಾಭರಹಿತ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದೆವು. ಇದರಿಂದ ತಿಂಗಳಿಗೆ ರೂ.10,000 ಬರುತ್ತಿತ್ತು. ಆದರೆ, ಲಾಕ್ಡೌನ್ ಬಳಿಕ ಕೆಲಸ ಕಳೆದುಕೊಂಡೆವು. ಜನರು ನಮಗೆ ದಿನಸಿ ಸಾಮಾನುಗಳನ್ನು ಕೊಡುತ್ತಿದ್ದರು. ಆದರೆ, ನಮಗದು ಸಾಲುತ್ತಿಲ್ಲ. ಉದ್ಯೋಗ ಮಾಡದಿದ್ದರೆ, ನಾವು ಭಿಕ್ಷೆ ಬೇಡಬೇಕಾಗುತ್ತದೆ. ನಮ್ಮ ಕೌಶಲ್ಯದಿಂದ ಸಂಪಾದನೆ ಮಾಡುವುದು ನಮಗೆ ಬೇಕು ಎಂದು ತಿಳಿಸಿದ್ದಾರೆ. 

ಬಾಡಿಗೆಗೆ ಜಾಗ ಪಡೆದುಕೊಳ್ಳುವುದು ಸುಲಭದ ಕೆಲಸವಲ್ಲ. ನಮಗೆ ಇನ್ನೂ ಹೆಚ್ಚು ಬಾಡಿಗೆ ಹೇಳುತ್ತಾರೆ. ದೀರ್ಘಾವಧಿಯಲ್ಲಿ ನಾವು ಹೇಗೆ ಬದುಕಬಹುದು. ಇದರಿಂದ ಎಷ್ಟು ಲಾಭ ಬರುತ್ತದೆ ಎಂಬುದನ್ನು ನಾವು ನೋಡಬೇಕಿದೆ. ಸ್ಥಳವನ್ನು ಬಾಡಿಗೆಗೆ ಪಡೆಯಲು ಬಹಳ ಕಷ್ಟಪಟ್ಟಿದ್ದೇವೆ. ಶೀಘ್ರದಲ್ಲಿಯೇ ಪಾರ್ಲರ್ ಆರಂಭಿಸುವ ಆಸೆಯಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com