ಕೊರೋನಾ ಎಫೆಕ್ಟ್: ಮೇ 4 ರವರೆಗೆ ಶಾಲೆಗಳು ಬಂದ್

ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇ.4ರವರೆಗೆ ಶಾಲೆಗಳನ್ನು ಬಂದ್ ಮಾಡಲು ಶಿಕ್ಷಣ ಇಲಾಖೆ ಆದೇಶ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇ.4ರವರೆಗೆ ಶಾಲೆಗಳನ್ನು ಬಂದ್ ಮಾಡಲು ಶಿಕ್ಷಣ ಇಲಾಖೆ ಆದೇಶ ನೀಡಿದೆ. 

ಕೋವಿಡ್ ತಡೆಗೆ ಸರ್ಕಾರದಿಂದ ಕಠಿಣ ಕ್ರಮ ಕೈಗೊಂಡ ಕಾರಣ ಶಾಲೆಗಳನ್ನು ಬಂದ್ ಮಾಡುವಂತೆ ಸರ್ಕಾರ ಸೂಚನೆ ನೀಡಿತ್ತು. ಹೀಗಾಗಿ, 10ನೇ ತರಗತಿಗಳು ಸೇರಿದಂತೆ ಎಲ್ಲಾ ತರಗತಿಗಳು ಮೇ 4ರವರೆಗೆ ಸ್ಥಗಿತಗೊಳ್ಳಲಿದ್ದು,  ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸುವಂತೆ ಶಿಕ್ಷಣ ಇಲಾಖೆ ಆದೇಶ ನೀಡಿದೆ.

ಏಪ್ರಿಲ್ 30ರವರೆಗೆ 1 ರಿಂದ 9ನೇ ತರಗತಿಗೆ ಮೌಲ್ಯಾಂಕನ ಮೂಲಕ ಫಲಿತಾಂಶ ಸೂಚನೆ ನೀಡಲಾಗಿತ್ತು. ಈಗ ಏಪ್ರಿಲ್ 26ರ ಒಳಗೆ ಮೌಲ್ಯಾಂಕನ ಫಲಿತಾಂಶ ನೀಡಲು‌ ಸೂಚನೆ ನೀಡಲಾಗಿದೆ. ಆಯಾ ಶಾಲೆಗಳ ಮೌಲ್ಯಾಂಕನ ನಡೆಸಿ, ಫಲಿತಾಂಶ ನೀಡಲು ಸೂಚಿಸಲಾಗಿದೆ.

ಏಪ್ರಿಲ್ 27 ರಿಂದ ಮೇ 4ರವರೆಗೆ ಶಿಕ್ಷಕರಿಗೆ ಶಾಲೆಯ ಹಾಜರಾತಿಗೆ ವಿನಾಯ್ತಿ ನೀಡಲಾಗಿದೆ. ಈ ವೇಳೆ ಎಸ್ಎಸ್ಎಲ್'ಸಿ ವಿದ್ಯಾರ್ಥಿಗಳಲ್ಲಿ ಉಂಟಾಗುವ ಎಲ್ಲಾ ಗೊಂದಲಗಳನ್ನು ನಿವಾರಿಸುವಂತೆ ಸೂಚಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com