ರೈಲ್ವೇ ಇಲಾಖೆಯಲ್ಲಿ 192 ಹುದ್ದೆಗಳು ಖಾಲಿ, ಆಸಕ್ತರು ಅರ್ಜಿ ಸಲ್ಲಿಸಬಹುದು

ಭಾರತೀಯ ರೈಲ್ವೇ ಇಲಾಖೆಯ ಬೆಂಗಳೂರು ಘಟಕದಲ್ಲಿ ವಿವಿಧ ಹುದ್ದೆಗಳಿಗಾಗಿ ನೇಮಕ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಭಾರತೀಯ ರೈಲ್ವೇ ಇಲಾಖೆಯ ಬೆಂಗಳೂರು ಘಟಕದಲ್ಲಿ ವಿವಿಧ ಹುದ್ದೆಗಳಿಗಾಗಿ ನೇಮಕ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಹುದ್ದೆಗಳ ಹೆಸರು: ಫಿಟ್ಟರ್ (85 ಹುದ್ದೆ), ಮೆಕಾನಿಸ್ಟ್ (31 ಹುದ್ದೆ), ಮೆಕಾನಿಕ್ (ವಾಹನಗಳು)(8 ಹುದ್ದೆ), ಟರ್ನರ್ (5 ಹುದ್ದೆ), ಸಿಎನ್ ಸಿ ಪ್ರೊಗ್ರಾಮಿಂಗ್ ಕಮ್ ಆಪರೇಟರ್ (23 ಹುದ್ದೆ), ಎಲೆಕ್ಟ್ರಿಷಿಯನ್ (18 ಹುದ್ದೆ), ಎಲೆಕ್ಟ್ರಾನಿಕ್ ಮೆಕಾನಿಕ್ (22 ಹುದ್ದೆ)

ಒಟ್ಟು ಹುದ್ದೆಗಳ ಸಂಖ್ಯೆ: 192

ಕರ್ತವ್ಯ ಸ್ಥಳ: ಬೆಂಗಳೂರು, ಯಲಹಂಕ

ವೇತನ: ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 10, 899ರಿಂದ ರೂ.12, 261 ರೂ ಗೌರವ ಧನ ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ: 10ನೇ ತರಗತಿ ಅದಕ್ಕೆ ಸರಿಸಮಾನವಾದ ಶೈಕ್ಷಣಿಕೆ ಅರ್ಹತೆ, (ಕನಿಷ್ಛ ಶೇ.50ರಷ್ಟು ಅಂಕಗಳು), ಐಟಿಐ (ಮೆರಿಟ್ ಆಧಾರದ ಮೇಲೆ ನೇಮಕಾತಿ)

ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ ಗರಿಷ್ಠ 24 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.
ಎಸ್ ಸಿಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ಕಡಿತ
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಕಡಿತ 

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-09-2021

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿ ತುಂಬಿ ಅಗತ್ಯ ದಾಖಲೆಗಳೊಂದಿಗೆ ಅಂಚೆ ಮೂಲಕ ಕಚೇರಿಗೆ ಕಳುಹಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ: 
The Senior Personnel Officer,
Personnel Department,
Rail Wheel Factory, Yelahanka,
Bangaluru

www.rwf.indianrailways.gov.in

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
https://drive.google.com/file/d/1Fv2oqBP-F-9AsEX2d-I6yCsdVP6nIFlb/view

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com