40 ಲಕ್ಷ ರು. ಮೌಲ್ಯದ ಡ್ರಗ್ಸ್ ವಶ: ಎನ್ ಸಿಬಿ ತಂಡದಿಂದ ಬೆಂಗಳೂರಿನಲ್ಲಿ ಯುವತಿ ಬಂಧನ

40 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿರುವ ಬೆಂಗಳೂರು ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು 9185ರ ಕಾಯ್ದೆ ಅಡಿಯಲ್ಲಿ ಮಹಿಳೆಯನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 40 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿರುವ ಬೆಂಗಳೂರು ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು 9185ರ ಕಾಯ್ದೆ ಅಡಿಯಲ್ಲಿ ಮಹಿಳೆಯನ್ನು ಬಂಧಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಯೋಗಿತಾ ಬಂಧಿತ ಮಹಿಳೆ. ಆಕೆಯಿದ 40 ಲಕ್ಷ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಲಾಗಿದೆ.

ಜರ್ಮನಿಯಿಂದ ಅಂತಾರಾಷ್ಟ್ರೀಯ ಅಂಚೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ಅಂಚೆ ಕಚೇರಿಗೆ ಪಾರ್ಸೆಲ್ ಬಂದಿತ್ತು.  ಸೌಂದರ್ಯ ವರ್ಧಕಗಳು ಎಂದು ಪಾರ್ಸೆಲ್ ನಲ್ಲಿ ಉಲ್ಲೇಖಿಸಲಾಗಿತ್ತು. 

ಆದರೆ ಪಾರ್ಸೆಲ್ ನಲ್ಲಿ ಮಾದಕ ವಸ್ತುಗಳು ಎಂಡಿಎಂಎ ಬಂದಿರುವ ಬಗ್ಗೆ ಮೊದಲೇ ಮಾಹಿತಿ ಸಂಗ್ರಹಿಸಿದ್ದ ಎನ್ ಸಿಬಿ ಅಧಿಕಾರಿಗಳು ಯುವತಿ ಎಲೆಕ್ಟ್ರಾನಿಕ್ ಸಿಟಿ ಅಂಚೆ ಕಚೇರಿಗೆ ಪಾರ್ಸೆಲ್ ತೆಗೆದುಕೊಂಡು ಹೋಗಲು ಬರುತ್ತಿದ್ದಂತೆ ಆಕೆಯನ್ನು ವಶಕ್ಕೆ ಪಡೆದು ಸೌಂದರ್ಯ ವರ್ಧಕಗಳಿದ್ದ ಬಾಕ್ಸ್ ಗಳನ್ನು ತೆರೆದು ಪರಿಶೀಲನೆ ನಡೆಸಿತು.

ವಶಪಡಿಸಿಕೊಂಡ ನಂತರ, ಎನ್‌ಸಿಬಿ ಕಣ್ಗಾವಲು ಹಾಕಿತು ಮತ್ತು ಪಾರ್ಸೆಲ್ ಸ್ವೀಕರಿಸಲು ಬಂದ ಯೋಗಿತಾಳನ್ನು ಬಂಧಿಸಿತು ಯೋಗಿತಾ ಕಳೆದ ಮೂರು ವರ್ಷಗಳಿಂದ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಬೆಂಗಳೂರಿನ ಹೊರತಾಗಿ, ಆಕೆ ದಕ್ಷಿಣ ಭಾರತದ ಇತರ ನಗರಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದಳು ಎಂದು ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com