ಕರಾವಳಿಯಲ್ಲಿ ಅಶಾಂತಿ: ಸಚಿವ ಅಂಗಾರ ನೇತೃತ್ವದ ನಿಯೋಗದಿಂದ ಗೃಹ ಸಚಿವರ ಭೇಟಿ

ಕರಾವಳಿಯಲ್ಲಿ ಉಂಟಾಗಿರುವ ಅಶಾಂತಿ ಮತ್ತು ಶಾಂತಿ ಸುವ್ಯವಸ್ಥೆ ನಿರ್ವಹಣಾ ವಿಚಾರಕ್ಕೆ ಸಂಬಂಧಿಸಿದಂತೆ ಮೀನುಗಾರಿಕಾ ಸಚಿವ ಎಸ್.ಅಂಗಾರ ನೇತೃತ್ವದ ಜಿಲ್ಲೆಯ ಶಾಸಕರ ನಿಯೋಗವು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದೆ.
ಸಚಿವ ಅಂಗಾರ ನೇತೃತ್ವದ ನಿಯೋಗದಿಂದ ಗೃಹ ಸಚಿವರ ಭೇಟಿ
ಸಚಿವ ಅಂಗಾರ ನೇತೃತ್ವದ ನಿಯೋಗದಿಂದ ಗೃಹ ಸಚಿವರ ಭೇಟಿ
Updated on

ಬೆಳಗಾವಿ: ಕರಾವಳಿಯಲ್ಲಿ ಉಂಟಾಗಿರುವ ಅಶಾಂತಿ ಮತ್ತು ಶಾಂತಿ ಸುವ್ಯವಸ್ಥೆ ನಿರ್ವಹಣಾ ವಿಚಾರಕ್ಕೆ ಸಂಬಂಧಿಸಿದಂತೆ ಮೀನುಗಾರಿಕಾ ಸಚಿವ ಎಸ್.ಅಂಗಾರ ನೇತೃತ್ವದ ಜಿಲ್ಲೆಯ ಶಾಸಕರ ನಿಯೋಗವು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದೆ.

ಬೆಳಗಾವಿಯಲ್ಲಿ ಮೀನುಗಾರಿಕಾ ಸಚಿವ ಎಸ್.ಅಂಗಾರ ನೇತೃತ್ವದ ಜಿಲ್ಲೆಯ ಶಾಸಕರ ನಿಯೋಗವು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ಉಪ್ಪಿನಂಗಡಿ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿತು. ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಘಟನೆಯ ಹಿನ್ನೆಲೆಯಲ್ಲಿ ಪಿಎಫ್‌ಐ ಅನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು. 

ಕೋಮು ಸಾಮರಸ್ಯ ಕೆಡಿಸುತ್ತಿರುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ: ಆರಗ ಜ್ಞಾನೇಂದ್ರ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, 'ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಮಂಡಲದ ಸದಸ್ಯರು ಇಂದು ನನ್ನನ್ನು ಭೇಟಿಯಾಗಿ, ಜಿಲ್ಲೆಯಲ್ಲಿ ಕೆಲವು ಕೋಮು ಸಂಘಟನೆಗಳು ನಡೆಸುತ್ತಿರುವ ಚಟುವಟಿಕೆಗಳಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುತ್ತಿರುವ ಕುರಿತು ವರದಿ ನೀಡಿದರು. ಕೋಮು ಸಾಮರಸ್ಯ ಕೆಡಿಸುತ್ತಿರುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ. ಸಮಾಜ ಘಾತುಕ ಚಟುವಟಿಕೆಗಳನ್ನು ನಮ್ಮ ಸರ್ಕಾರ ಎಂದಿಗೂ ಸಹಿಸುವುದಿಲ್ಲ. ಇಂತಹ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು. ನಿಯೋಗದಲ್ಲಿ, ಸಚಿವ ಅಂಗಾರ, ಶಾಸಕರಾದ ಹರೀಶ್ ಪೂಂಜಾ, ಸಂಜೀವ್ ಮತಂದುರ್,  ರಾಜೇಶ್ ನಾಯಕ್, Dr ಭರತ್ ಶೆಟ್ಟಿ, ಶ್ರೀ ಉಮಾನಾಥ ಕೋಟ್ಯಾನ್, ಶ್ರೀ ಪ್ರತಾಪಸಿಂಹ ನಾಯಕ್ ಇದ್ದರು ಎಂದು ಟ್ವೀಟ್ ಮಾಡಿದ್ದಾರೆ.

ವಿಧಾನಸಭೆಯಲ್ಲೂ ಚರ್ಚೆ
ಅಂತೆಯೇ ವಿಧಾನಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿದ್ದು, ತಾವು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದೇನೆ ಎಂದು ಗೃಹ ಸಚಿವರು ಟ್ವೀಟ್ ಮಾಡಿದ್ದಾರೆ. 'ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಶ್ರೀ ಯು.ಟಿ.ಖಾದರ್ ಅವರ ಪ್ರಶ್ನೆಗೆ ಇಂದು ಉತ್ತರ ನೀಡಲಾಯಿತು. ಕರಾವಳಿ ಭಾಗದಲ್ಲಿ ಕೋಮು ಸೌಹಾರ್ದವನ್ನು ಕಲುಷಿತಗೊಳಿಸುವ ಸಮಾಜ ವಿರೋಧಿ ಶಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಬಗ್ಗು ಬಡಿಯಲಾಗುವುದು ಎಂದು ಸದನಕ್ಕೆ ತಿಳಿಸಲಾಯಿತು. ಕರಾವಳಿಯ ಕೆಲವೆಡೆ ಕೋಮು ಸಾಮರಸ್ಯ ಕೆಡಿಸುವ ವರದಿಗಳನ್ನು ಗಮನಿಸಿದ್ದೇನೆ. ಅವುಗಳಿಗೆ ನಿಯಂತ್ರಣ ಹೇರುವ ಬಗ್ಗೆ ಗಂಭೀರ ಪ್ರಯತ್ನ ನಡೆದಿದೆ. ಸಾಮಾಜಿಕ ಜಾಲತಾಣ ದುರುಪಯೋಗಪಡಿಸಿಕೊಂಡು, ದೇಶವಿರೋಧಿ ಸಂದೇಶ ಹರಿಬಿಡಲಾಗುತ್ತಿದೆ. ಸ್ಥಳೀಯ ಪೊಲೀಸರು ಈ ಬಗ್ಗೆ ಕ್ರಮ ವಹಿಸಿದ್ದು, ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಲಾಯಿತು ಎಂದು ಟ್ವೀಟ್ ಮಾಡಿದ್ದಾರೆ.

ರಾತ್ರೋರಾತ್ರಿ ಪೊಲೀಸರ ಕಾರ್ಯಾಚರಣೆ: ಪಿಎಫ್ಐ ಆರೋಪ
ರಾತ್ರೋರಾತ್ರಿ ಕಾರ್ಯಚರಣೆ ನಡೆಸಿದ್ದ ಪೊಲೀಸರು ಮೂರು ಮಂದಿಯನ್ನು ಬಂಧಿಸಿದ್ದರು. ಆದರೆ ಬಂಧನದ ವೇಳೆ ಯಾವುದೇ ಸೂಚನೆ ನೀಡಿರಲಿಲ್ಲ ಹಾಗೂ ಯಾವ ಕಾರಣಕ್ಕಾಗಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿರಲಿಲ್ಲ. ಅಕ್ರಮ ಬಂಧನ ಖಂಡಿಸಿ ಪಾಪ್ಯೂಲರ್ ಫ್ರಂಟ್ ನಾಯಕರನ್ನು ಬಿಡುಗಡೆಗೊಳಿಸಬೇಕು ಎಂದು ಪಟ್ಟು ಹಿಡಿದು ಠಾಣೆಯ ಮುಂದೆ ಪ್ರತಿಭಟನೆ ಮಾಡಿದಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಯದ್ವಾತದ್ವಾ ಲಾಠಿ ಚಾರ್ಜ್ ಮಾಡದ್ದಾರೆ ಇದರಿಂದ ಅನೇಕರು ಗಂಭೀರ ಗಾಯಗೊಂಡಿದ್ದಾರೆ ಎಂದು ದೂರಿದರು. ಸುಳ‌್ಳು ಪ್ರಕರಣದಲ್ಲಿ ಅಮಾಯಕರನ್ನು ಸಿಲುಕಿಸುವ ಪೊಲಿಸರ ಕ್ರಮ ಖಂಡನೀಯ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ಲಾಠಿ ಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕೂಡಲೇ ಅಮಾನತ್ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಲೀಮ್, ಸರಫರಾಜ್, ಇಸ್ಮಾಯಿಲ್, ದಾವುದ್, ಅಸೀಮ್, ಗೌಸ್ ಪಾಶ, ರಫಿಯುದ್ದೀನ್ ಇದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com