ಹಿನ್ನೋಟ 2020: ಕೊರೋನಾ ವಾರಿಯರ್ಸ್ ಪೊಲೀಸರಿಗೆ ಇದು ಅತ್ಯಂತ ಕಠಿಣ ವರ್ಷ!

2020 ಕೊರೋನಾ ವಾರಿಯರ್ಸ್ ಪೊಲೀಸರ ಪಾಲಿಗೆ  ಅತ್ಯಂತ ಕಠಿಣ ವರ್ಷವಾಗಿತ್ತು. ಮಾರ್ಚ್ ತಿಂಗಳು ಬರುತ್ತಿದ್ದಂತೆ ಇದಕ್ಕಿದ್ದಂತೆ ಅವರ ಪಾತ್ರದಲ್ಲಿ ಬದಲಾವಣೆಯಾಯಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: 2020  ಕೊರೋನಾ ವಾರಿಯರ್ಸ್ ಪೊಲೀಸರ ಪಾಲಿಗೆ ಅತ್ಯಂತ ಕಠಿಣ ವರ್ಷವಾಗಿತ್ತು. 2019 ರ ಡಿಸೆಂಬರ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ತೀವ್ರಗೊಳ್ಳುತ್ತಿದ್ದ ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳ ನಿರ್ವಹಣೆಯಲ್ಲಿ ಅವರು ನಿರತರಾಗಿದ್ದರು. ಭಿನ್ನಮತೀಯ ಧ್ವನಿಯನ್ನು ಮೌನಗೊಳಿಸುವಲ್ಲಿ ಭಾರೀ ಕೈವಾಡದ ಬಗ್ಗೆ ತೀವ್ರ ರೀತಿಯ ಟೀಕೆಗಳಿಗೆ ಗುರಿಯಾಗಿದ್ದರು.

ನಂತರ ಮಾರ್ಚ್ ತಿಂಗಳು ಬರುತ್ತಿದ್ದಂತೆ ಇದಕ್ಕಿದ್ದಂತೆ  ಅವರ ಪಾತ್ರದಲ್ಲಿ ಬದಲಾವಣೆಯಾಯಿತು.ಲಾಠಿ ಬೀಸುತ್ತಿದ್ದ ಪೊಲೀಸರು ಲಾಕ್ ಡೌನ್ ಅನುಷ್ಠಾನದಿಂದ ಹಿಡಿದು, ಸಾಂಕ್ರಾಮಿಕದಿಂದ ಹಸಿವಿನಿಂದ ಬಳಲುತ್ತಿದ್ದ ಜನರಿಗೆ ಆಹಾರ, ಅವಶ್ಯಕ ವಸ್ತುಗಳನ್ನು ಪೂರೈಸುವುದು, ಕೋವಿಡ್-19 ಹರಡದಂತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವುದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯಲ್ಲಿ ನಿರತರಾದರು.

ಮೇ ತಿಂಗಳಲ್ಲಿ ವಲಸೆ ಕಾರ್ಮಿಕರ ನಿರ್ವಹಣೆ ಜವಾಬ್ದಾರಿ ಹೊರಬೇಕಾಗಿತ್ತು.ತಮ್ಮ ಊರಿಗೆ ಹೋಗಲು ಬಸ್, ರೈಲು ಅಥವಾ ನಡಿಗೆಯಲ್ಲಿ ತೆರಳಿದ್ದ ವಲಸೆ ಕಾರ್ಮಿಕರ ದಟ್ಟಣೆ ನಿಯಂತ್ರಣ, ಅವರಲ್ಲಿನ ಭಯ ಹೋಗಲಾಡಿಸಿ, ಸುರಕ್ಷಿತವಾಗಿ ಮನೆಗೆ ಕಳುಹಿಸುವ ಕೆಲಸದಲ್ಲಿ ನಿರತರಾಗಿದ್ದರು. ಇದು ಪೊಲೀಸರಿಗೆ ಅತ್ಯಂತ ಕಷ್ಟದ ಸಂದರ್ಭವಾಗಿತ್ತು. ಏಕೆಂದರೆ ಮನೆಗೆ ಬಂದ ಪೊಲೀಸರಿಗೆ ಎಲ್ಲಿ ಕೊರೋನಾ ಸೋಂಕು ಹರಡಿದೆಯೋ ಎಂಬ ಭೀತಿ ಕುಟುಂಬದಲ್ಲಿ ಮನೆ ಮಾಡಿತ್ತು. ಮನೆಯಲ್ಲಿನ ಹಿರಿಯರು, ಮಕ್ಕಳು ಎಲ್ಲರೂ ಕೂಡಾ ಆದಾಯಕ್ಕಾಗಿ ಅವರನ್ನೇ ಅವಲಂಬಿಸಿದ್ದರು. 

ಅದರಲ್ಲೂ ಮಹಿಳಾ ಪೊಲೀಸರ ಪಾಡು ಹೇಳತೀರದಂತಾಗಿತ್ತು. ಸಾಂಕ್ರಾಮಿಕ ಸಂದರ್ಭದಲ್ಲಿ ಕೋವಿಡ್  ಡ್ಯೂಟಿ ಮುಗಿಸಿದ ಕೂಡಲೇ ಮನೆಗೆ ತೆರಳುವಂತಿರಲಿಲ್ಲ.ಕ್ವಾರಂಟೈನ್ ಗೆ ಒಳಪಡಬೇಕಾಗಿತ್ತು. ಪೊಲೀಸ್ ಸಿಬ್ಬಂದಿಗಾಗಿಯೇ ವಿಶೇಷ ಪರೀಕ್ಷೆ ಮತ್ತು ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿತ್ತು. ಹಿರಿಯ ಅಧಿಕಾರಿಗಳು ಪೊಲೀಸ್ ಕಾಲೋನಿಗಳಿಗೆ ತೆರಳಿ, ಕುಟುಂಬ ಸದಸ್ಯರಲ್ಲಿ ಆತ್ಮಸ್ಥೈರ್ಯ ಮೂಡಿಸುತ್ತಿದ್ದರು.

 ಕೋವಿಡ್ ಡ್ಯೂಟಿಯೊಂದಿಗೆ ನೂರಾರು ಕೆಲಸಗಳನ್ನು ಅವರು ಮಾಡಬೇಕಿತ್ತು. ಪೊಲೀಸ್ ಠಾಣೆಯಲ್ಲಿ ಸಂದರ್ಶನಕಾರರಿಗೆ ಟೆಂಟ್ ಮಾಡಬೇಕಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ ದೂರು ದಾಖಲಿಸಬೇಕಿತ್ತು. ವೈರಸ್ ಭಯದಿಂದ ಬಂಧನ ಮಾಡುವಂತಹ ಕೆಲಸ ಕೂಡಾ ಕಷ್ಟಕರವಾಗಿತ್ತು. ಆರೋಪಿಯನ್ನು ಬಂಧಿಸಿದ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಬೇಕಿತ್ತು. ಹೊಸ ಖೈದಿಗಳಿಗೆ ನೆಗೆಟಿವ್ ಬಂದ ನಂತರವೇ ಕಾರಾಗೃಹದ ಒಳಗಡೆ ಹೋಗಲು ಅವಕಾಶ ಮಾಡಿಕೊಡಲಾಗುತಿತ್ತು.

ನವೆಂಬರ್ ವೇಳೆಗೆ ರಾಜ್ಯದಲ್ಲಿ ಶೇ.11 ರಷ್ಟು ಅಂದರೆ 80 ಸಾವಿರ ಪೊಲೀಸ್ ಸಿಬ್ಬಂದಿಗೆ ಕೋವಿಡ್ -19 ಪಾಸಿಟಿವ್ ವರದಿಯಾಗಿತ್ತು. 87 ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರು. ಸೋಂಕಿನಿಂದ ಮೃತಪಟ್ಟ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರದಿಂದ 30 ಲಕ್ಷ ಪರಿಹಾರವನ್ನು ನೀಡಲಾಯಿತು. ಹೊಸ ವೈರಸ್  ಪೊಲೀಸರನ್ನು ಹೆಚ್ಚು ಒತ್ತಡಕ್ಕೆ ಒಳಪಡಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com