ಪಿಳಿಕುಳ ಜೈವಿಕ ಉದ್ಯಾನವನ
ಪಿಳಿಕುಳ ಜೈವಿಕ ಉದ್ಯಾನವನ

ಪಿಳಿಕುಳ ಮೃಗಾಲಯದಲ್ಲಿ ಸಂತಸ; 3 ಮರಿಗಳಿಗೆ ಜನ್ಮ ನೀಡಿದ ಬಿಳಿ ಹುಲಿ 'ರಾಣಿ', 7 ಮರಿಗಳಿಗೆ ಜನ್ಮ ನೀಡಿದ 'ದೋಳ್'

ಮಂಗಳೂರಿನ ಪಿಳಿಕುಳ ಜೈವಿಕ ಉದ್ಯಾನದ ಮೃಗಾಲಯದಲ್ಲಿ ವನ್ಯಜೀವಿಗಳ ಸಂತಾನ ಅಭಿವೃದ್ಧಿಯಾಗಿದ್ದು, ಹುಲಿ ‘ರಾಣಿ’ 3 ಮರಿಗಳಿಗೆ ಜನ್ಮ ನೀಡಿದರೆ ಕಾಡುಶ್ವಾನ ‘ದೋಳ್’ಗೆ 7 ಮರಿಗಳು ಜನನ ತಾಳಿವೆ.
Published on

ಮಂಗಳೂರು: ಮಂಗಳೂರಿನ ಪಿಳಿಕುಳ ಜೈವಿಕ ಉದ್ಯಾನದ ಮೃಗಾಲಯದಲ್ಲಿ ವನ್ಯಜೀವಿಗಳ ಸಂತಾನ ಅಭಿವೃದ್ಧಿಯಾಗಿದ್ದು, ಹುಲಿ ‘ರಾಣಿ’ 3 ಮರಿಗಳಿಗೆ ಜನ್ಮ ನೀಡಿದರೆ ಕಾಡುಶ್ವಾನ ‘ದೋಳ್’ಗೆ 7 ಮರಿಗಳು ಜನನ ತಾಳಿವೆ.

ಹೌದು.. ಮಂಗಳೂರಿನ ಪಿಳಿಕುಳ ಜೈವಿಕ ಉದ್ಯಾನದ ಮೃಗಾಲಯದಲ್ಲಿ 10 ವರ್ಷದ ಹುಲಿ ‘ರಾಣಿ’ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳು ಆರೋಗ್ಯವಾಗಿದ್ದು, 16 ದಿನಗಳಲ್ಲಿ ಕಣ್ಣು ತೆರೆಯಲಿವೆ. ಈ ಹಿಂದೆ ‘ರಾಣಿ’ 2019 ರಲ್ಲಿ ರೇವಾ, ಸುಧಾ, ಜಯರಾಮ, ಸಂಜಯ ಮತ್ತು ವಿಜಯ ಎಂಬ 5 ಮರಿಗಳಿಗೆ  ಜನ್ಮ ನೀಡಿತ್ತು. ಈಗ ಈ ಮರಿಗಳು ಬೆಳೆದು ದೊಡ್ಡದಾಗಿವೆ. 5 ಹುಲಿಗಳಿಗೆ ಪ್ರತ್ಯೇಕವಾದ ವಾಸದ ಮನೆಯನ್ನು ದಾನಿಗಳ ಪ್ರೋತ್ಸಾಹದಿಂದ ನಿರ್ಮಿಸಲಾಗಿದೆ. ರಾಣಿಯನ್ನು ಪ್ರಾಣಿ ವಿನಿಮಯ ಕಾರ್ಯಕ್ರಯಮದಡಿ ಬನೇರುಘಟ್ಟ ಮೃಗಾಲಯದಿಂದ ತರಲಾಗಿತ್ತು. ಇದರ ಬದಲಾಗಿದೆ ಪಿಲಿಕುಲದ ಗಂಡು ಹುಲಿಯನ್ನು  ಬನ್ನೇರುಘಟ್ಟ ಮೃಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಪಿಲಿಕುಳದಲ್ಲಿ ಹುಲಿಗಳ ಸಂಖ್ಯೆ 13 ಕ್ಕೆ ಏರಿದೆ.

7 ಮರಿಗಳಿಗೆ ಜನ್ಮ ನೀಡಿದ ಕಾಡುಶ್ವಾನ ‘ದೋಳ್’ 
ಆಂಧ್ರಪ್ರದೇಶದ ವಿಶಾಖಪಟ್ಟಣ ಮೃಗಾಲಯದಿಂದ ತರಿಸಲಾಗಿದ್ದ ಅಳಿವಿನಂಚಿನಲ್ಲಿರುವ ಕಾಡು ಶ್ವಾನಗಳ ವರ್ಗಕ್ಕೆ ಸೇರಿದ ‘ದೋಳ್’ ಇತ್ತೀಚಿಗೆ ಏಳು ಮರಿಗಳಿಗೆ ಜನ್ಮ ನೀಡಿತ್ತು. ಇದೇ ‘ದೋಳ್’ ಈ ಹಿಂದೆ 5 ಮರಿಗಳಿಗೆ ಜನ್ಮ ನೀಡಿತ್ತು. ಇನ್ನೊಂದು ‘ದೋಳ್’ ಹತ್ತು ಮರಿಗಳಿಗೆ ಜನ್ಮ ನೀಡಿತ್ತು. ಆ ಮೂಲಕ  ಪಿಲಿಕುಳದಲ್ಲಿ ‘ದೋಳ್’ ಕಾಡು ಶ್ವಾನಗಳ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ರಿಯಾ’ ಪಕ್ಷಿಯ ಜನನ
ಉಷ್ಟ್ರಪಕ್ಷೀಯ ವರ್ಗಕ್ಕೆ ಸೇರಿದ ಬಿಳಿ ರಿಯಾ ಪಕ್ಷಿಯು ಈ ಹಿಂದೆ ಮೊಟ್ಟೆಗಳನಿಟ್ಟಿತ್ತು. ಈ ಮೊಟ್ಟೆಗಳಿಗೆ ಪ್ರಯೋಗಾಲಯದಲ್ಲಿ ಕೃತಕ ಕಾವು ಕೊಡಲಾಗುತ್ತಿದೆ. ಅದರಲ್ಲಿ ಈಗಾಗಲೇ ಒಂದು ಬಿಳಿ ರಿಯಾ ಮರಿಯು ಜನ್ಮ ತಾಳಿದೆ. 

20 ಮೊಟ್ಟೆಗಳನ್ನಿಟ್ಟ ‘ರೆಟಿಕ್ಯುಲೇಟೆಡ್’ ಹೆಬ್ಬಾವು
ಅಪರೂಪದ ಅಳಿವಿನಂಚಿನಲಿರುವ ‘ರೆಟಿಕ್ಯುಲೇಟೆಡ್’ ಹೆಬ್ಬಾವು ಸುಮಾರು 20 ಮೊಟ್ಟೆಗಳನ್ನಿಟ್ಟು ಕಾವು ನೀಡುತ್ತಿದೆ. ಇದೇ ಹೆಬ್ಬಾವು ಕಳೆದ ವರ್ಷ 17 ಮರಿಗಳಿಗೆ ಜನ್ಮ ನೀಡಿತ್ತು. ರೆಟಿಕ್ಯುಲೇಟೆಡ್ ಹೆಬ್ಬಾವು ತಳಿ ಹೆಚ್ಚಾಗಿ ನಿಕೋಬಾರ್‌ನಲ್ಲಿ ಕಾಣಸಿಗುತ್ತವೆ. ಅಂತೆಯೇ ಕೆಲವು ವರ್ಷಗಳ ಹಿಂದೆ ದೇಶದಲ್ಲೇ  ಪ್ರಥಮ ಬಾರಿ ವೈಜ್ಞಾನಿಕವಾಗಿ ಕಾಳಿಂಗಗಳ ಸಂತಾನಾಭಿವೃದ್ಧಿ ಪಡಿಸಿದ ಕೀರ್ತಿ ಪಿಲಿಕುಳ ಮೃಗಾಲಯಕ್ಕೆ ಸಲ್ಲುತ್ತದೆ. ಈಗ ಕಾಳಿಂಗ ‘ನಾಗಮಣಿ’ಯು ಆರು ಮೊಟ್ಟೆಗಳನ್ನಿಟ್ಟು. ಅವುಗಳಿಗೆ ಕೃತಕ ಕಾವು ಕೊಡಲಾಗುತ್ತಿದೆ. ಪಿಲಿಕುಳದಲ್ಲಿ ಈಗ 19 ಕಾಳಿಂಗ ಸರ್ಪಗಳಿವೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com