
ಬೆಂಗಳೂರು: ದುಬಾರಿ ಬೆಲೆಗೆ ಆಕ್ಸಿಜನ್ ಸಿಲಿಂಡರ್ ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೇಂದ್ರ ಅಪರಾಧ ದಳದ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.
ಕೋಲಾರ ಜಿಲ್ಲೆ ರಾಬರ್ಟ್ ಸನ್ ಪೇಟೆಯ ಅರುಣ್ ಕುಮಾರ್ (34) ಹಾಗೂ ಆಡುಗೋಡಿಯ ಚಿನ್ನಯ್ಯನ ಪಾಳ್ಯದ ಸೈಯದ್ ಶಕೀಬ್ (27) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ 47 ಲೀಟರ್ 5 ಜಂಬೋ ಸಿಲಿಂಡರ್ ಹಾಗೂ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಜಂಬೋ ಸಿಲಿಂಡರ್ ಗಳನ್ನು ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡಲು ದೊಡ್ಡಬಳ್ಳಾಪುರಕ್ಕೆ ಬೊಮ್ಮನಹಳ್ಳಿಯಿಂದ ಸಾಗಿಸುವಾಗ ಯಲಹಂಕ ಸಮೀಪ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
Advertisement