ಗ್ಯಾಂಗ್ ರೇಪ್ ಪ್ರಕರಣ: ಸಂತ್ರಸ್ಥೆ ಪತ್ತೆ ಮಾಡಿ ಬೆಂಗಳೂರಿಗೆ ಕರೆತಂದ ಪೊಲೀಸರು, ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲು

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಬಾಂಗ್ಲಾದೇಶಿ ಯುವತಿಯನ್ನು ಪೊಲೀಸರು ಪತ್ತೆ ಮಾಡಿದ್ದು, ಬೆಂಗಳೂರಿಗೆ ಕರೆತಂದು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಗ್ಯಾಂಗ್ ರೇಪ್ ಪ್ರಕರಣ
ಗ್ಯಾಂಗ್ ರೇಪ್ ಪ್ರಕರಣ

ಬೆಂಗಳೂರು: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಬಾಂಗ್ಲಾದೇಶಿ ಯುವತಿಯನ್ನು ಪೊಲೀಸರು ಪತ್ತೆ ಮಾಡಿದ್ದು, ಬೆಂಗಳೂರಿಗೆ ಕರೆತಂದು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಶರಣಪ್ಪ ಅವರು ಮಾಹಿತಿ ನೀಡಿದ್ದು, ಘಟನೆ ಬಳಿಕ ಕೇರಳಕ್ಕೆ ತೆರಳಿದ್ದ ಸಂತ್ರಸ್ಥ ಯುವತಿಯನ್ನು ಪತ್ತೆ ಮಾಡಿ ಬೆಂಗಳೂರಿಗೆ ಕರೆತರಲಾಗಿದೆ. ಅಂತೆಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹೇಳಿಕೆ ಕೂಡ ದಾಖಲಿಸಲಾಗಿದೆ ಎಂದು ಹೇಳಿದರು.

ಮೂಲಗಳ ಪ್ರಕಾರ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಸಂತ್ರಸ್ತ ಯುವತಿಯನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದೀಗ ಅಜ್ಞಾತ ಸ್ಥಳದಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ವಸಂತನಗರದಲ್ಲಿರುವ ವಿಶೇಷ ಕೋರ್ಟ್ ಮುಂದೆ ಹಾಜರು ಪಡಿಸಿ, ಸಿಆರ್ಪಿಸಿ 161 ಅಡಿ ಹೇಳಿಕೆ  ದಾಖಲಿಸಲಾಗಿದೆ. 161 ಹೇಳಿಕೆಯಲ್ಲಿ ಯುವತಿ ಕೆಲವೊಂದು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾಳೆ.

ಕುಟುಂಬಸ್ಥರಿಲ್ಲ, ಪೋಷಕರಿಲ್ಲ, ಹಣಕಾಸಿನ ವಿಚಾರವಾಗಿ ದೌರ್ಜನ್ಯ
ಇನ್ನು ಯುವತಿ ನೀಡಿರುವ ಹೇಳಿಕೆಯಲ್ಲಿ, ಕೃತ್ಯ ನಡೆದ ಮರುದಿನವೇ ನಾನು ಕೇರಳಕ್ಕೆ ಹೋಗಿದ್ದೆ. ಬಾಯ್ ಫ್ರೆಂಡ್ ಗೆ ಕರೆ ಮಾಡಿ ಘಟನೆ ಬಗ್ಗೆ ಹೇಳಿದಾಗ ಬೆಂಗಳೂರಿನಲ್ಲಿ ಯಾರ ಜೊತೆಗೂ ಇರಬೇಡ ಕೇರಳಕ್ಕೆ ಬಾ ಎಂದು ಹೇಳಿದ ಹಿನ್ನೆಲೆಯಲ್ಲಿ ನಾನು ಕೇರಳಕ್ಕೆ ತೆರಳಿದ್ದೆ. ಆರೋಪಿಗಳ ಭಯದಿಂದ  ಬೆಂಗಳೂರು ಬಿಟ್ಟು ಕೇರಳದಲ್ಲಿ ಬಾಯ್ ಫ್ರೆಂಡ್ ಜೊತೆಗೆ ನಾನು ವಾಸವಾಗಿದ್ದೆ. ತನಗೆ ಕುಟುಂಬಸ್ಥರಿಲ್ಲ, ಪೋಷಕರಿಲ್ಲ. ಈ ಹಿಂದೆ ದುಬೈನಲ್ಲಿ ಕೆಲಸ ಮಾಡುತ್ತಿದ್ದೆ. ಡ್ಯಾನ್ಸರ್ ಸಹ ಆಗಿದ್ದೆ. ಆ ಬಳಿಕ ಆರೋಪಿಗಳ ಸಂಪರ್ಕ ಬೆಳೆದು ಢಾಕಾದಿಂದ ಅಕ್ರಮವಾಗಿ ಬೆಂಗಳೂರಿಗೆ ಬಂದಿರುವ ಬಗ್ಗೆ ಯುವತಿ ಮಾಹಿತಿ  ನೀಡಿದ್ದಾಳೆ ಎಂದು ತಿಳಿದುಬಂದಿದೆ.

ನನಗೆ ಹಣಕಾಸಿನ ವಿಚಾರವಾಗಿಯೇ ದೌರ್ಜನ್ಯ ಮಾಡಲಾಗಿದೆ. ಈ ಘಟನೆಯಲ್ಲಿ ಮತ್ತೋರ್ವ ಯುವತಿ ಸಹ ಇರುವುದಾಗಿ ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದು, ಆಕೆಗಾಗಿ ಇದೀಗ ಪೊಲೀಸರ ತಂಡ ಹುಡುಕಾಟ ಆರಂಭಿಸಿದೆ. ಜೊತೆಗೆ ಸಂಪರ್ಕದಲ್ಲಿದ್ದ ಸ್ನೇಹಿತರ ತೀವ್ರ ವಿಚಾರಣೆ ಸಹ ನಡೆಸಲಾಗುತ್ತಿದೆ. ಸಂತ್ರಸ್ತ  ಯುವತಿಯ ಕೆಲವು ಹೇಳಿಕೆ ಅಸ್ಪಷ್ಟದಿಂದ ಕೂಡಿದ್ದು, ಯುವತಿ ಬಳಿ ಯಾವುದೇ ದಾಖಲೆ ಪತ್ತೆಯಾಗಿಲ್ಲ. ಪ್ರಕರಣದಲ್ಲಿ ಇದುವರೆಗಿನ ತನಿಖೆಯಲ್ಲಿ ಪ್ರಾಥಮಿಕ ಮಾಹಿತಿ ಪಡೆದಿರೋ ಪೊಲೀಸರ ತಂಡ ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರೆಸಿದೆ.

ವೈದ್ಯಕೀಯ ಪರೀಕ್ಷೆ
ಕೇರಳದಲ್ಲಿದ್ದ ಸಂತ್ರಸ್ತ ಯುವತಿಯನ್ನು ಬೆಂಗಳೂರಿನ ಪೊಲೀಸರು ಪತ್ತೆ ಮಾಡಿ ಬೆಂಗಳೂರಿಗೆ ಕರೆತಂದು ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಸಂತ್ರಸ್ತ ಯುವತಿಗೆ ಐವರು ಯುವಕರು ಹಾಗೂ ಒಬ್ಬ ಮಹಿಳೆ ವಿಕೃತ ರೀತಿಯಲ್ಲಿ ಕಿರುಕುಳ ನೀಡಿದ್ದರು. ಈ ಕುರಿತ ವಿಡಿಯೋ  ವೈರಲ್ ಆದ ಕೂಡಲೇ ರಾಷ್ಟ್ರ ಮಟ್ಟದಲ್ಲಿ ಪ್ರಕರಣ ಸದ್ದು ಮಾಡಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರು. ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರ ಮೇಲೆ ಗುಂಡು ಹಾರಿಸಿ ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದರು. ಇದೀಗ ಸಂತ್ರಸ್ತ ಯುವತಿ ವೈದ್ಯಕೀಯ ಪರೀಕ್ಷೆ ನಡೆಸಿ  ನ್ಯಾಯಾಧೀಶರ ಸಮ್ಮುಖದಲ್ಲಿ ಹೇಳಿಕೆ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com