ಕೆಐಎನಲ್ಲಿ 'ಬ್ಯಾಗೇಜ್ ಬೆಲ್ಟ್' ಗೊಂದಲ: ಪ್ರಯಾಣಿಕರ ಪರದಾಟ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಬ್ಯಾಗೇಜ್ ಬೆಲ್ಟ್' ಗೊಂದಲ ಸಮಸ್ಯೆಯಿಂದಾಗಿ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ.
ಕೆಐಎನಲ್ಲಿ ಬ್ಯಾಗೇಜ್ ಬೆಲ್ಟ್ ಗೊಂದಲ
ಕೆಐಎನಲ್ಲಿ ಬ್ಯಾಗೇಜ್ ಬೆಲ್ಟ್ ಗೊಂದಲ
Updated on: 

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಬ್ಯಾಗೇಜ್ ಬೆಲ್ಟ್' ಗೊಂದಲ ಸಮಸ್ಯೆಯಿಂದಾಗಿ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ.

ಪ್ರಯಾಣಿಕರ ಬ್ಯಾಗ್ ಗಳಿಗೆ ಹಾಕುವ ಗುರುತಿನ ಬೆಲ್ಟ್ ವ್ಯವಸ್ಥೆಯಲ್ಲಿನ ಗೊಂದಲದಿಂದಾಗಿ ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಒಂದು ಹಂತದಲ್ಲಿ ಅಧಿಕಾರಿಗಳೊಂದಿಗೆ ಪ್ರಯಾಣಿಕರು ವಾಗ್ವಾದ ಕೂಡ ನಡೆಸಿದರು. 

ವಿಮಾನ ನಿಲ್ದಾಣದಲ್ಲಿ ಸ್ವಯಂ ಚಾಲಿತ ಸೆಲ್ಫ್ ಬ್ಯಾಗ್ ಡ್ರಾಪ್ ಯಂತ್ರಗಳನ್ನು ಅಳವಡಿಸಲಾಗಿದೆಯಾದರೂ, ಬ್ಯಾಗೇಜ್ ಬೆಲ್ಟ್ ವ್ಯವಸ್ಥೆಯ ಗೊಂದಲದಿಂದಾಗಿ ಸಮಸ್ಯೆ ಉಂಟಾಗಿತ್ತು. ಬಳಿಕ ಅಧಿಕಾರಿಗಳು ಮಧ್ಯಾಹ್ನ 12.20ರ ಹೊತ್ತಿಗೆ ಉಂಟಾಗಿದ್ದ ಗೊಂದಲವನ್ನು ನಿವಾರಣೆ ಮಾಡಿದರು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com