ರಾಜ್ಯದ ಅರ್ಧದಷ್ಟು ಜಿಲ್ಲೆಗಳಲ್ಲಿ ಶೂನ್ಯ ಕೋವಿಡ್ ಪ್ರಕರಣ ದಾಖಲು!

ಸಾರ್ಸ್ ಕೋವಿಡ್-2ನ ಡೆಲ್ಟಾ ರೂಪಾಂತರದ ಉಪವರ್ಗವನ್ನು ಪತ್ತೆಹಚ್ಚಿದ ಬಳಿಕ ಕೋವಿಡ್ ಮತ್ತೊಂದು ಅಲೆ ಆರಂಭವಾಗುವ ಆತಂಕಗಳು ಶುರುವಾಗಿದ್ದು, ಈ ಆತಂಕದ ನಡುವಲ್ಲೇ ತುಸು ನಿರಾಳ ನೀಡುವ ಬೆಳವಣಿಗೆಯೊಂದು ರಾಜ್ಯದಲ್ಲಿ ಕಂಡು ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾರ್ಸ್ ಕೋವಿಡ್-2ನ ಡೆಲ್ಟಾ ರೂಪಾಂತರದ ಉಪವರ್ಗವನ್ನು ಪತ್ತೆಹಚ್ಚಿದ ಬಳಿಕ ಕೋವಿಡ್ ಮತ್ತೊಂದು ಅಲೆ ಆರಂಭವಾಗುವ ಆತಂಕಗಳು ಶುರುವಾಗಿದ್ದು, ಈ ಆತಂಕದ ನಡುವಲ್ಲೇ ತುಸು ನಿರಾಳ ನೀಡುವ ಬೆಳವಣಿಗೆಯೊಂದು ರಾಜ್ಯದಲ್ಲಿ ಕಂಡು ಬಂದಿದೆ.

ರಾಜ್ಯದ ಅರ್ಧದಷ್ಟು ಜಿಲ್ಲೆಗಳಲ್ಲಿ ಶೂನ್ಯ ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ. ಕರ್ನಾಟಕದ 30 ಜಿಲ್ಲೆಗಳ ಪೈಕಿ 15 ಜಿಲ್ಲೆಗಳಲ್ಲಿ ಯಾವುದೇ ಕೋವಿಡ್ ಪ್ರಕರಣಗಳೂ ವರದಿಯಾಲಿಲ್ಲ ಎಂದು ಹೇಳಲಾಗುತ್ತಿದ್ದು, ಇದರಲ್ಲಿ 31 ನೇ ಜಿಲ್ಲೆ ವಿಜಯನಗರ ಕೂಡ ಸೇರ್ಪಡೆಗೊಂಡಿದೆ ಎನ್ನಲಾಗಿದೆ.

ಬೆಂಗಳೂರು ನಗರವೊಂದರಲ್ಲೇ ನಿನ್ನೆ 139 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇನ್ನುಳಿದ 100 ಪ್ರಕರಣಗಳು ಉಳಿದ 14 ಜಿಲ್ಲೆಗಳಲ್ಲಿ ಪತ್ತೆಯಾಗಿವೆ. ರಾಜ್ಯದಲ್ಲಿ ಪ್ರಸ್ತುತ ಇರುವ 8,370 ಸಕ್ರಿಯ ಪ್ರಕರಣಗಳ ಪೈಕಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ 6,424 ಪ್ರಕರಣಗಳಿದ್ದು, ಇದು ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದನ್ನು ಸೂಚಿಸುತ್ತಿದೆ.

ಕಳೆದ ತಿಂಗಳಿನಿಂದ ಗಮನಿಸಿದರೆ, ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳಲ್ಲಿ 12 ಪಟ್ಟು ಹೆಚ್ಚಳವಾಗಿರುವುದು ಕಂಡು ಬಂದಿದೆ, ರಾಜ್ಯದ ಉಳಿದ ಭಾಗಗಳಲ್ಲಿ ಕೇವಲ ಐದು ಪಟ್ಟು ಹೆಚ್ಚಾಗಿದೆ, ಈ ಬೆಳವಣಿಗೆಯೂ ಬೆಂಗಳೂರು ಕೋವಿಡ್ ಹಾಟ್‌ಸ್ಪಾಟ್ ಆಗಿದೆ ಎಂಂಬುದನ್ನು ಸೂಚಿಸುತ್ತಿದೆ. ಜನಸಂಖ್ಯೆ ಹೆಚ್ಚಾಗಿರುವುದು ಹಾಗೂ ಬಹುತೇಕ ಚಟುವಟಿಕೆಗಳು ಆರಂಭವಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಅದೇ ಅವಧಿಯಲ್ಲಿ, ರಾಜ್ಯಾದ್ಯಂತ ಕೋವಿಡ್ ಚೇತರಿಕೆ ದರವು ಶೇ.98.31 ದಿಂದ ಶೇ.98.44 ಕ್ಕೆ ಏರಿಕೆಯಾಗಿರುುದು ಕಂಡು ಬಂದಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಚೇತರಿಕೆ ದರ ಶೇ.98.18ಕ್ಕೆ ಕುಸಿದಿದೆ.

ಒಮ್ಮೆ ಮಾತ್ರ ಕುಸಿತ ಕಂಡಿತು, ಆದರೆ ಬೆಂಗಳೂರು ಐದು ಬಾರಿ ಕುಸಿತವನ್ನು ಕಂಡಿತು, ಅದರ ಚೇತರಿಕೆಯ ದರವು ಶೇಕಡಾ 98.18 ರಷ್ಟಿದೆ. ಸೋಮವಾರ ರಾಜ್ಯವು ಕೇವಲ ಎರಡು ಸಾವುಗಳನ್ನು ದಾಖಲಿಸಿದೆ, ಇದು ಈ ವರ್ಷದ ಮಾರ್ಚ್‌ನಲ್ಲಿ ಪ್ರಾರಂಭವಾದ ಎರಡನೇ ತರಂಗದಲ್ಲಿ ಒಂದೇ ದಿನದಲ್ಲಿ ಇದುವರೆಗಿನ ಅತ್ಯಂತ ಕಡಿಮೆಯಾಗಿದೆ.

ಈ ನಡುವೆ ರಾಜ್ಯದಲ್ಲಿನ ಮರಣ ದರ ಶೇ.1.27ರಷ್ಟಿದ್ದು, ಬೆಂಗಳೂರಿನಲ್ಲಿ ಶೇ.1.30ರಷ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ನಡುವೆ ಆರೋಗ್ಯಾಧಿಕಾರಿಗಳಉ ಜನರು ಮಾಸ್ಕ್ ಧರಿಸಿ, ಸ್ವಚ್ಛತೆ ಕಾಪಾಡುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com