ಕೋವಿಡ್-19: ರಾಜ್ಯದ 29 ಜಿಲ್ಲೆಗಳಲ್ಲಿ ಸತತ 2ನೇ ದಿನವೂ ಶೂನ್ಯ ಸಾವು ದಾಖಲು!

ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ 29 ಜಿಲ್ಲೆಗಳಲ್ಲಿ ಸತತ ಎರಡನೇ ದಿನ ಶೂನ್ಯ ಕೋವಿಡ್ -19 ಸಾವುಗಳನ್ನು ವರದಿ ಮಾಡಿದೆ,
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ 29 ಜಿಲ್ಲೆಗಳಲ್ಲಿ ಸತತ ಎರಡನೇ ದಿನ ಶೂನ್ಯ ಕೋವಿಡ್ -19 ಸಾವುಗಳನ್ನು ವರದಿ ಮಾಡಿದೆ,

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶನಿವಾರ ಮೂರು ಹಾಗೂ ಭಾನುವಾರ ಎರಡು ಸಾವುಗಳು ವರದಿಯಾಗಿದ್ದರೆ, 29 ಜಿಲ್ಲೆಗಳಲ್ಲಿ ಎರಡೂ ದಿನ ಕೂಡ ಶೂನ್ಯ ಸಾವುಗಳು ವರದಿಯಾಗಿವೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ನವೆಂಬರ್ 1 ರಿಂದಲೂ ದಿನನಿತ್ಯದ ಸಾವುಗಳು ಸತತವಾಗಿ ಒಂದಂಕಿಯಲ್ಲಿ ಇರುವುದು ಕಂಡು ಬಂದಿದೆ. ಇದೇ ವೇಳೆ ಅಕ್ಟೋಬರ್ 4 ರಿಂದಲೂ ಮರಣ ಪ್ರಮಾಣವು ಸತತ ಶೇ.1.24ರಷ್ಟಿದ್ದು, ಈ ಪ್ರಮಾಣವನ್ನು ಶೇ.1ಕ್ಕೆ ಇಳಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ.

ಹಬ್ಬಗಳ ಸೀಸನ್ ನಡುವೆಯೂ ರಾಜ್ಯದ 29 ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿರುವುದು ಕೊರೋನಾ ಅಬ್ಬರ ಇಳಿಕೆಯಾಗಿರುವುದನ್ನು ಸೂಚಿಸುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ನವೆಂಬರ್ 6 ರಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶೇ.98.19ರಷ್ಟಿದ್ದ ಚೇತರಿಕೆ ದರ ನಿನ್ನೆ ಶೇ.98.17ಕ್ಕೆ ಕುಸಿದಿರುವುದು ಕಂಡು ಬಂದಿದೆ.

ರಾಜ್ಯಾದ್ಯಂತ, ನವೆಂಬರ್ 5 ರಿಂದ ಚೇತರಿಕೆಯ ದರವು ಶೇ.98.45 ಪ್ರತಿಶತದಲ್ಲಿಯೇ ಉಳಿದಿದ್ದು, 7,997 ಸಕ್ರಿಯ ಪ್ರಕರಣಗಳಿರುವುದು ಕಂಡು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com