ಬೋಟ್ಸ್ವಾನಾ ಭೀತಿ: ವಿದೇಶಿ ಪ್ರಯಾಣಿಕರಿಗೆ ರಾಜ್ಯದಲ್ಲಿ ಕಠಿಣ ತಪಾಸಣೆ

ಬೋಟ್ಸ್ವಾನಾ ಕೊರೋನಾ ರೂಪಾಂತರಿ ವೈರಸ್ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ವಿದೇಶಿ ಪ್ರಯಾಣಿಕರ ಮೇಲಿನ ಕಣ್ಗಾವಲನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಭುವನೇಶ್ವರ ವಿಮಾನ ನಿಲ್ದಾಣದಿಂದ ನಿರ್ಗಮಿಸುವಾಗ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಕೈಮೇಲೆ ಹಾಕಿರುವ ಮುದ್ರೆಯನ್ನು ತೋರಿಸುತ್ತಿರುವುದು.
ಭುವನೇಶ್ವರ ವಿಮಾನ ನಿಲ್ದಾಣದಿಂದ ನಿರ್ಗಮಿಸುವಾಗ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಕೈಮೇಲೆ ಹಾಕಿರುವ ಮುದ್ರೆಯನ್ನು ತೋರಿಸುತ್ತಿರುವುದು.

ಬೆಂಗಳೂರು: ಬೋಟ್ಸ್ವಾನಾ ಕೊರೋನಾ ರೂಪಾಂತರಿ ವೈರಸ್ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ವಿದೇಶಿ ಪ್ರಯಾಣಿಕರ ಮೇಲಿನ ಕಣ್ಗಾವಲನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದಿನಂತೆಯೇ ಸ್ಕ್ರೀನಿಂಗ್, ಟೆಸ್ಟಿಂಗ್ ಹಾಗೂ ಅವರ ಸಂಪರ್ಕಿತರನ್ನು ಪತ್ತೆ ಹಚ್ಚುವ ತಂತ್ರಗಳನ್ನು ಅನುಸರಿಸಲಾಗುತ್ತಿದ್ದು, ಇದೇ ವೇಳೆ ಆರ್'ಟಿ-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರ ಮಾದರಿಗಳನ್ನು ಶೀಘ್ರಗತಿಯಲ್ಲಿ ಜೀನೋಮಿಕ್ ಸೀಕ್ವೆನ್ಸಿಂಗ್ ಲ್ಯಾಬೊರೇಟರೀಸ್'ಗೆ ಕಳುಹಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಈ ನಡುವೆ ರೂಪಾಂತರಿ ವೈರಸ್ ಪತ್ತೆಯಾಗಿರುವ ಬೋಟ್ಸ್ ವಾನಾ, ದಕ್ಷಿಣ ಆಫ್ರಿಕಾ ಮತ್ತು ಹಾಂಕಾಂಗ್ ದೇಶಗಳಿಂಗ ಆಗಮಿಸುವವರನ್ನು ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ದೇಶಗಳ ಮೂಲಕ ಬಂದವರಿಗೂ ತಪಾಸಣೆ ನಿಯಮ ಅನ್ವಯಿಸಲಿದೆ ಎಂದು ತಿಳಿದುಬಂದಿದೆ.

ಬೋಟ್ಸ್ ವಾನಾದಲ್ಲಿ 3, ದಕ್ಷಿಣ ಆಫ್ರಿಕಾದಲ್ಲಿ 6, ಹಾಂಕಾಂಗ್ನಲ್ಲಿ ಒಬ್ಬರಲ್ಲಿ ಹೊಸ ತಳಿ ಪತ್ತೆಯಾಗಿವೆ. ಹಾಗಾಗಿ ಈ ದೇಶದಿಂದ ಬಂದ ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದರೆ ಅವರ ಆರ್'ಟಿಪಿಸಿಆರ್ ಮಾದರಿಯನ್ನು ಆದ್ಯತೆ ಮೇಲೆ ಜಿನೋಮಿಕ್ ಸೀಕ್ವೆನ್ಸಿಂಗ್ ಒಳಪಡಿಸಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ,

ಜಿಲ್ಲಾಡಳಿತಗಳು ಕೋವಿಡ್ ಹರಡುವುದನ್ನು ತಡೆಯಲು ಪರೀಕ್ಷೆ-ಸಂಪರ್ಕ ಪತ್ತೆ-ಚಿಕಿತ್ಸೆ ಲಸಿಕಾಕರಣ ಪದ್ಧತಿಯನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿಕೆ.ಅನಿಲ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com