ರಾಜ್ಯದಲ್ಲಿ 4 ಕೋವಿಡ್ ಕ್ಲಸ್ಟರ್ ಪತ್ತೆ: ಆತಂಕ ಹೆಚ್ಚಳ

ರಾಜ್ಯದಲ್ಲಿ ಕೊರೋನಾ ಅಬ್ಬರ ಏರಿಕೆಯಾಗುತ್ತಿದ್ದು, ಕೆಲ ದಿನಗಳಿಂದ ಕನಿಷ್ಟ ನಾಲ್ಕು ಕೋವಿಡ್ ಕ್ಲಸ್ಟರ್ ಗಳು ಪತ್ತೆಯಾಗಿವೆ. ಈ ಬೆಳವಣಿಗೆಯು ಜನತೆಯ ಆತಂಕವನ್ನು ಹೆಚ್ಚು ಮಾಡಿದೆ.
ರೋಗಿಗಳ ಸಂಬಂಧಿಕರು ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಗೇಟ್‌ಗಳ ಹೊರಗೆ ಕಾದು ನಿಂತಿರುವುದು.
ರೋಗಿಗಳ ಸಂಬಂಧಿಕರು ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಗೇಟ್‌ಗಳ ಹೊರಗೆ ಕಾದು ನಿಂತಿರುವುದು.

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರ ಏರಿಕೆಯಾಗುತ್ತಿದ್ದು, ಕೆಲ ದಿನಗಳಿಂದ ಕನಿಷ್ಟ ನಾಲ್ಕು ಕೋವಿಡ್ ಕ್ಲಸ್ಟರ್ ಗಳು ಪತ್ತೆಯಾಗಿವೆ. ಈ ಬೆಳವಣಿಗೆಯು ಜನತೆಯ ಆತಂಕವನ್ನು ಹೆಚ್ಚು ಮಾಡಿದೆ.

ಬೆಂಗಳೂರಿನಲ್ಲಿ ಎರಡು, ಧಾರವಾಡ ಹಾಗೂ ಮೈಸೂಲಿನಲ್ಲಿ ತಲಾ ಒಂದೊಂದು ಕ್ಲಸ್ಟರ್ ಗಳು ಪತ್ತೆಯಾಗಿದ್ದು, ದೇಶದಲ್ಲಿ ರೂಪಾಂತರಿ ವೈರಸ್ ಕಾಣಿಸಿಕೊಂಡಿರುವ ಬೆನ್ನಲ್ಲೇ ಕಂಡು ಬಂದಿರುವ ಈ ಬೆಳವಣಿಗೆಯು ಆತಂಕವನ್ನು ಹುಟ್ಟುಹಾಕಿದೆ.

ಧಾರವಾಡ ಮತ್ತು ಬೆಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಎರಡು ಕೋವಿಡ್ ಕ್ಲಸ್ಟರ್‌ಗಳು ಪತ್ತೆಯಾದ ಬೆನ್ನಲ್ಲೇ ಬೆಂಗಳೂರಿನಆನೇಕಲ್‌ನ ಮರಸೂರಿನ ಸ್ಪೂರ್ತಿ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ 12 ವಿದ್ಯಾರ್ಥಿಗಳಲ್ಲಿ ಶುಕ್ರವಾರ ಸೋಂಕು ದೃಢಪಟ್ಟಿದೆ.

ಗುರುವಾರ ದಿ ಇಂಟರ್‌ನ್ಯಾಶನಲ್ ಸ್ಕೂಲ್ ಬೆಂಗಳೂರು (ಟಿಐಎಸ್‌ಬಿ) ನಲ್ಲಿ 33 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿತ್ತು. ಧಾರವಾಡದ ಎಸ್'ಡಿಎಂ ವೈದ್ಯಕೀಯ ಕಾಲೇಜಿನಲ್ಲಿ 204 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಮೈಸೂರಿನ ಸೆಂಟ್ ಜೋಸೆಫ್ ಕಾಲೇಜು ಹಾಗೂ ಕಾವೇರಿ ನರ್ಸಿಂಗ್ ಕಾಲೇಜಿನಲ್ಲಿ 48 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಬಹುತೇಕ ಪ್ರಕರಣಗಳ ಸೋಂಕಿತರು ಲಕ್ಷಣರಹಿತರಾಗಿದ್ದಾರೆಂದು ತಿಳಿದುಬಂದಿದೆ.

ಆರೋಗ್ಯ ಅಧಿಕಾರಿಯೊಬ್ಬರು ಮಾತನಾಡಿ, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳನ್ನು ಗುರುವಾರ ಪರೀಕ್ಷಿಸಲಾಗಿದ್ದು, ಶುಕ್ರವಾರ ವರದಿ ಬಂದಿದ್ದು, ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಯಾರೊಬ್ಬರೂ ಟ್ರಾವೆಲ್ ಹಿಸ್ಟರ್ ಹೊಂದಿರಲಿಲ್ಲ. ಒಬ್ಬರನ್ನು ಹೊರತುಪಡಿಸಿ ಎಲ್ಲರಿಗೂ ಲಸಿಕೆ ಹಾಕಲಾಗಿದೆ. ಲಸಿಕೆ ಹಾಕಿಸಿಕೊಳ್ಳದ ವಿದ್ಯಾರ್ಥಿಗೆ ಈ ಹಿಂದೆಯೂ ಸೋಂಕು ಕಾಣಿಸಿಕೊಂಡಿತ್ತು. ಸೋಂಕು ಕಾಣಿಸಿಕೊಂಡ ಬಳಿಕವೂ ಆತ ಲಸಿಕೆ ಪಡೆದುಕೊಂಡಿರಲಿಲ್ಲ. 9 ಮಂದಿ ಲಕ್ಷಣವನ್ನು ಹೊಂದಿದ್ದಾರೆ. ಸಣ್ಣಪುಟ್ಟ ಲಕ್ಷಣಗಳಿವೆ. ಮೂವರು ಲಕ್ಷಣ  ರಹಿತರಾಗಿದ್ದು, 9 ಮಂದಿ ಜಿಗಣಿಯ ಕೋವಿಡ್ ಕೇರ್ ಕೇಂದ್ರದಲ್ಲಿ ಐಸೋಲೇಷನ್ ನಲ್ಲಿದ್ದಾರೆಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ರೂಪಾಂತರಿ ವೈರಸ್ ನಿಂದ ಹೆಚ್ಚಿದ ಆತಂಕ
ಡೆಲ್ಟಾ ವೈರಸ್ ನಿಂದ ಕ್ಲಸ್ಟರ್ ಸೃಷ್ಟಿಯಾಗಿದ್ದರೆ, ಇದರಲ್ಲಿ ಆತಂಕಪಡುವ ಅಗತ್ಯವಿಲ್ಲ. ಆದರೆ, ದಕ್ಷಿಣ ಆಫ್ರಿಕಾದ ಬೋಟ್ಸ್ವಾನಾದಿಂದ ಎದುರಾಗಿದ್ದಾರೆ ಆತಂಕ ಪಡುವ ಅಗತ್ಯವಿದೆ. ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಪ್ರದೀಪ್ ಬಾನಂದೂರ್ ಅವರು ಹೇಳಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಮಾತನಾಡಿ, ಹಿಂದಿನ ಕ್ಲಸ್ಟರ್ ಗಳ ಜೀನೋಮಿಕ್ ಸೀಕ್ವೆನ್ಸಿಂಗ್ ನಲ್ಲಿ ರೂಪಾಂತರಿ ವೈರಸ್ ಗಳು ಪತ್ತೆಯಾಗಿರಲಿಲ್ಲ  ಎಂದು ತಿಳಿಸಿದ್ದಾರೆ.

ಒಮ್ಮೊಮ್ಮೆ ಕ್ಲಸ್ಟರ್ ಗಳು ಪತ್ತೆಯಾಗುತ್ತವೆ. ಆದರೆ, ವಾರದಿಂದ ವಾರಕ್ಕೆ ಪಾಸಿಟಿವಿಟಿ ದರ ಹೆಚ್ಚಳವಾಗಿಲ್ಲ. ಆದರೂ, ಎಚ್ಚರದಿಂದಿರಬೇಕಿದೆ ಎಂದಿದ್ದಾರೆ.

ಏತನ್ಮಧ್ಯೆ, ರಾಜ್ಯ ಆರೋಗ್ಯ ಇಲಾಖೆ ಪರೀಕ್ಷಾ ತಂತ್ರವನ್ನು ಬದಲಾಯಿಸಲು ಮುಂದಾಗಿದೆ. ಇತ್ತೀಚೆಗೆ, ಕೋವಿಡ್ ಪ್ರಕರಣಗಳು ಕಡಿಮೆಯಾಗಲು ಪ್ರಾರಂಭಿಸಿದ ನಂತರ ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಮೇರೆಗೆ, ಇಲಾಖೆಯು ನಿಯಂತ್ರಿತ ಗುರಿಯೊಂದಿಗೆ ಪರೀಕ್ಷೆಗಳನ್ನು ನಡೆಸಿತ್ತು. ಇದೀಗ ಮತ್ತೆ ಲಕ್ಷಣರಹಿತ ಜನರಿಗೆ ರ್ಯಾಂಡಮ್ ಪರೀಕ್ಷೆ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com