ಅನಾರೋಗ್ಯದಿಂದ ಮಕ್ಕಳ ಸಾವು ಹೆಚ್ಚಳ: ಅಫಜಲ್ಪುರ ಗ್ರಾಮಸ್ಥರಲ್ಲಿ ಆತಂಕ

ಅಫಜಲ್ಪುರ ತಾಲೂಕಿನ ಆನೂರ ಗ್ರಾಮದಲ್ಲಿ ಅನಾರೋಗ್ಯದಿಂದ ಮಕ್ಕಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರಗಿ: ಅಫಜಲ್ಪುರ ತಾಲೂಕಿನ ಆನೂರ ಗ್ರಾಮದಲ್ಲಿ ಅನಾರೋಗ್ಯದಿಂದ ಮಕ್ಕಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. 

15 ದಿನಗಳ ಅಂತರದಲ್ಲಿ ಆ ಗ್ರಾಮದಲ್ಲಿ ಮೂವರು ಬಾಲಕಿಯರು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಭಯ, ಆತಂಕ ಹುಟ್ಟಿಸಿದೆ. 

ಮೂವರು ಹೆಣ್ಣು ಮಕ್ಕಳ ಪೈಕಿ ಓರ್ವ ಬಾಲಕಿ 11 ವರ್ಷದವಳಾಗಿದ್ದು, ಬಾಲಕಿ ಅಪರೂಪದ ಕಾಯಿಲೆಯಿಂದ ಸಾವನ್ನಪ್ಪಿದ್ದಾಳೆಂದು ತಿಳಿದುಬಂದಿದೆ. ಗಿಲ್ಲೈನ್-ಬ್ಯಾರೆ ಸಿಂಡ್ರೋಮ್ (ಜಿಬಿಎಸ್) ನಿಂದ ಬಾಲಕಿ ಬಳಲುತ್ತಿದ್ದಳು ಎಂದು ಹೇಳಲಾಗುತ್ತಿದ್ದು, ಈ ರೋಗದ ಲಕ್ಷಣವೆಂದರೆ, ರೋಗನಿರೋಧಕ ವ್ಯವಸ್ಥೆಯು ನರಗಳ ಮೇಲೆ ದಾಳಿ ಮಾಡುವುದಾಗಿದೆ.

ತೀವ್ರವಾದ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿನಿಂದ ಈ ಸ್ಥಿತಿ ಬಂದೊದಗಲಿದೆ. ಈ ರೋಗದ ಲಕ್ಷಣಗಳೆಂದರೆ ನಿಶಕ್ತಿ ಮತ್ತು ಪಾದಗಳು ಮತ್ತು ಕಾಲುಗಳಲ್ಲಿ ಜುಮ್ಮೆನಿಸುತ್ತಿರುತ್ತದೆ. ಬಳಿಕ ದೇಹದ ಮೇಲ್ಭಾಗಕ್ಕೆ ಇದು ಹರಡುತ್ತವೆ. ಮೂಲಗಳು ಪ್ರಕಾರ ಬಾಲಕಿ ಆಗಸ್ಟ್ 6 ರಂದು ಸಾನ್ನಪ್ಪಿದ್ದಳು ಎಂದು ತಿಳಿದುಬಂದಿದೆ. 

ಮತ್ತೊರ್ವ ಬಾಲಕಿ ಚೈತ್ರ ಬಸವರಾಜ ಫುಲಾರಿ 12 ವರ್ಷದವಳಾಗಿದ್ದು, ಆಗಸ್ಟ್ 29 ರಂದು ಚಿಕಿತ್ಸೆಗಾಗಿ ಗ್ರಾಮದ ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಅದೇ ದಿನ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ. ಆದರೆ, ಬಾಲಕಿಯ ಸಾವಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಈ ನಡುವೆ ಆತಂಕ ಹಾಗೂ ದುಃಖತಪ್ತರಾದ ಬಾಲಕಿಯ ಪೋಷಕರು ಗ್ರಾಮವನ್ನು ತೊರೆದಿದ್ದಾರೆಂದು ತಿಳಿದುಬಂದಿದೆ. 

ಸಂಗಮ್ಮ ಭೀಮರಾಯ ಎಂಬ 7 ವರ್ಷದ ಬಾಲಕಿ ಕೂಡ ಸೆಪ್ಟೆಂಬರ್ 27 ರಂದು ಮೃತಪಟ್ಟಿದ್ದಳು. ಈಕೆ ಸೆಪ್ಸಿಸ್ (ರಕ್ತ ವಿಷವಾಗುವುದು) ನಿಂದ ಬಳಲುತ್ತಿದ್ದು, ಇದರಿಂದಲೇ ಸಾವನ್ನಪ್ಪಿದ್ದಾಳೆಂದು ತಿಳಿದುಬಂದಿದೆ. 

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಗನಜಲ್ಖೇಡ್ ಅವರು, ಗ್ರಾಮದ 23 ಮಕ್ಕಳ ರಕ್ತದ ಮಾದರಿಯನ್ನು ಕಳೆದ 15 ದಿನಗಳಿಂದ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 10 ಮಕ್ಕಳಲ್ಲಿ ಚಿಕುನ್ ಗೂನ್ಯಗೆ ಒಳಗಾಗಿರುವುದು ದೃಢಪಟ್ಟಿದೆ. ಗ್ರಾಮದಲ್ಲಿ ಫೀವರ್ ಕ್ಲಿನಿಕ್ ಕೂಡ ತೆರೆಯಲಾಗಿದ್ದು, ವೈದ್ಯರ ತಂಡ ಕ್ಯಾಂಪ್ ನಲ್ಲಿದೆ ಎಂದು ಹೇಳಿದ್ದಾರೆ. 

ಗ್ರಾಮದಲ್ಲಿ ಸೂಕ್ತ ರೀತಿಯಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ ಕಮಲಾಪುರ ತಾಲ್ಲೂಕಿನ ದಸ್ತಾಪುರ ಗ್ರಾಮದಲ್ಲಿ ಇಬ್ಬರು ಮಹಿಳೆಯರು ಗ್ಯಾಸ್ಟ್ರೋ-ಎಂಟರೈಟಿಸ್‌ನಿಂದ ಸಾವನ್ನಪ್ಪಿದ್ದರು. ಇದೀಗ ಗ್ರಾಮದ 50 ಜನರಿಗೆ ಈ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com