ಬೆಂಗಳೂರು: ಅಬುದಾಬಿ ಮೂಲದ ಲುಲು ಹೈಪರ್ ಮಾರ್ಕೆಟ್ ರಾಜಾಜಿನಗರದಲ್ಲಿ ಸೋಮವಾರ ಉದ್ಘಾಟನೆ
ಬೆಂಗಳೂರು: 22 ದೇಶಗಳಲ್ಲಿ ಸ್ಥಾಪನೆಗೊಂಡಿರುವ ಲುಲು ಹೈಪರ್ ಮಾರ್ಕೆಟ್ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳುತ್ತಿದೆ. ರಾಜಾಜಿನಗರದ ಗ್ಲೋಬಲ್ ಮಾಲ್ಸ್ ನಲ್ಲಿ ನಿರ್ಮಾಣಗೊಂಡಿರುವ ಲುಲು ಹೈಪರ್ ಮಾರ್ಕೆಟ್ ಬೆಂಗಳೂರಿನಲ್ಲೇ ಅತಿ ದೊಡ್ಡ ಹೈಪರ್ ಮಾರ್ಕೆಟ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.
14 ಎಕರೆ ಪ್ರದೇಶದಲ್ಲಿ ಲುಲು ಮಾಲ್ ಹರಡಿಕೊಂಡಿದ್ದು, 5 ಮಹಡಿಗಳು, 132 ಅಂಗಡಿಗಳನ್ನು ಹೊಂದಿದೆ. ಫುಡ್ ಕೋರ್ಟ್ ಕೂಡಾ ಇದೆ. ಶಾಪಿಂಗ್ ತಾಣ ಮಾತ್ರವಲ್ಲದೆ ರೋಲರ್ ಗ್ಲೈಡರ್, ಟ್ಯಾಗ್ ಅರೆನಾ, ಅಡ್ವೆಂಚರ್ ಆಟಗಳು, ಟ್ರ್ಯಾಂಪೊಲಿನ್, 9ಡಿ ಥಿಯೇಟರ್, ಬಂಪರ್ ಕಾರ್ ಮತ್ತಿತರ ಆಕರ್ಷಣೆಗಳನ್ನು ಒಳಗೊಂಡಿದೆ.
ಅಬುದಾಬಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಲುಲು ಸಮೂಹ 22 ದೇಶಗಳಲ್ಲಿ ಹೈಪರ್ ಮಾರ್ಕೆಟ್ ಮತ್ತು ಸೂಪರ್ ಮಾರ್ಕೆಟ್ ಗಳನ್ನು ನಡೆಸುತ್ತಿದೆ. ಪ್ರತಿಷ್ಟಿತ ಫೋರ್ಡ್ಸ್ ಟಾಪ್100 ಪಟ್ಟಿಯಲ್ಲಿ ಲುಲು ಮೂರನೇ ಸ್ಥಾನದಲ್ಲಿದೆ.
Related Article
10,000 ಕೋಟಿ ರೂ. ದಾಟಿದ ತಿಂಗಳ ಎಸ್ ಐ ಪಿ ಹೂಡಿಕೆ: ಮ್ಯೂಚುವಲ್ ಫಂಡ್ ಹೂಡಿಕೆಯತ್ತ ನಾಗರಿಕರ ಒಲವು
ಗ್ರಾಹಕರಿಗೆ ಮತ್ತಷ್ಟು ಶಾಕ್: ಅಡುಗೆ ಅನಿಲ ಸಿಲಿಂಡರ್ ದರ 15 ರೂ. ಏರಿಕೆ; ಇಂದಿನಿಂದ ಹೊಸ ಬೆಲೆ ಜಾರಿ
ನನ್ನ ಪತಿಯ ಹೆಸರನ್ನು ತಪ್ಪಾಗಿ ಸೇರಿಸಲಾಗಿದೆ: ಪಂಡೋರಾ ಪೇಪರ್ಸ್ ಬಗ್ಗೆ ಕಿರಣ್ ಮಜುಂಮ್ದಾರ್ ಶಾ
ಸಾಲ ವಂಚನೆ ಪ್ರಕರಣ: ಯೆಸ್ ಬ್ಯಾಂಕ್ ಎಂ.ಡಿ, ಸಿ ಇ ಒ ರಾಣಾ ಕಪೂರ್ ವಿರುದ್ಧ ಚಾರ್ಜ್ ಶೀಟ್ ಜಾರಿ
ಇನ್ಫೋಸಿಸ್, ವಿಪ್ರೊ ಸಂಸ್ಥೆಯ ಇಬ್ಬರು ಉದ್ಯೋಗಿಗಳಿಗೆ ಸ್ಟಾಕ್ ಮಾರ್ಕೆಟ್ ನಿರ್ಬಂಧ ಹೇರಿದ ಸೆಬಿ
ದೇಶದಲ್ಲಿ ಅನೇಕ ಜಿಲ್ಲೆಗಳಲ್ಲಿ ಬ್ಯಾಂಕಿಂಗ್ ಅಸ್ತಿತ್ವವಿಲ್ಲ: ನಿರ್ಮಲಾ ಸೀತಾರಾಮನ್
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ