ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮೂವರು ಮಕ್ಕಳು ಸೇರಿ ನಾಲ್ವರು ಮಂಗಳೂರಿನಲ್ಲಿ ಪತ್ತೆ; ಪ್ರಕರಣ ಸುಖಾಂತ್ಯ

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ನಾಪತ್ತೆಯಾಗಿದ್ದ 21 ವರ್ಷದ ಮಹಿಳೆ ಸೇರಿದಂತೆ ಮೂರು ಅಪ್ರಾಪ್ತ ಮಕ್ಕಳು ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳನ್ನು ಪಾಂಡೇಶ್ವರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ನಾಪತ್ತೆಯಾಗಿದ್ದ 21 ವರ್ಷದ ಮಹಿಳೆ ಸೇರಿದಂತೆ ಮೂರು ಅಪ್ರಾಪ್ತ ಮಕ್ಕಳು ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳನ್ನು ಪಾಂಡೇಶ್ವರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

ಎರಡು ಪ್ರತ್ಯೇಕ ಘಟನೆಗಳಲ್ಲಿ ಆರು ಮಂದಿ ಅಪ್ರಾಪ್ತ ವಯಸ್ಸಿನ ಮಕ್ಕಳು ಹಾಗೂ 21 ವರ್ಷದ ಮಹಿಳೆ ನಿನ್ನೆ ಬೆಂಗಳೂರಿನ 8ನೇ ಮೈಲಿ ಹತ್ತಿರ ಬಾಗಲಗುಂಟೆಯಲ್ಲಿ ಮತ್ತು ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದರು.

ನಾಪತ್ತೆಯಾಗಿದ್ದ ಏಳು ಮಂದಿಯಲ್ಲಿ 21 ವರ್ಷದ ಮಹಿಳೆ ಮತ್ತು ಮೂವರು ಮಕ್ಕಳು ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಹತ್ತಿರ ಪತ್ತೆಯಾಗಿದ್ದು ಅವರನ್ನು ಪಾಂಡೇಶ್ವರ ಪೊಲೀಸರ ಬಳಿ ಒಪ್ಪಿಸಲಾಗಿದೆ.

ಇದಕ್ಕೂ ಮುನ್ನ ನಾಪತ್ತೆ ಪ್ರಕರಣ ತನಿಖೆ ನಡೆಸಿದ್ದ ಬೆಂಗಳೂರು ಪೊಲೀಸರು ಮಕ್ಕಳ ಪೋಷಕರ ಬಳಿಯಿಂದ ಮಕ್ಕಳು ಬರೆದಿಟ್ಟಿದ್ದ ನೋಟ್ ನ್ನು ವಶಪಡಿಸಿಕೊಂಡಿದ್ದಾರೆ. ತಮಗೆ ಓದಿನಲ್ಲಿ ಆಸಕ್ತಿಯಿಲ್ಲದಿದ್ದು ಮನೆಯಲ್ಲಿ ಓದು-ಓದು ಎಂದು ಬಲವಂತ ಮಾಡುವುದರಿಂದ ಬೇಸತ್ತು ಮನೆಬಿಟ್ಟು ಹೋಗುತ್ತಿದ್ದೇವೆ. ಹೆಸರು ಮತ್ತು ಖ್ಯಾತಿ ಗಳಿಸಿ ಹಣ ಸಂಪಾದನೆ ಮಾಡಿದ ನಂತರ ಮನೆಗೆ ಬರುತ್ತೇವೆ ಎಂದು ಬರೆದಿಟ್ಟಿದ್ದರು. ತಮ್ಮನ್ನು ಹುಡುಕಬೇಡಿ ಎಂದು ಮಕ್ಕಳು ನೋಟ್ ನಲ್ಲಿ ಬರೆದಿಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com