ಹನಿಟ್ರ್ಯಾಪ್ ಪ್ರಕರಣ: ಮೂವರ ಬಂಧನ

ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಒಂದು ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಒಂದು ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದೆ.

ಮೂವರು ಮೈಕೋ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರನ್ನು ನೇಹಾ ಫಾತೀಮಾ (25), ಈಕೆಯ ಸ್ನೇಹಿತ ತಸ್ಲೀಮಾ ಬಾಷಾ (36), ಮೊಹಮ್ಮದ್ ಅರ್ಬಾಜ್ (25) ಎಂದು ಗುರ್ತಿಸಲಾಗಿದೆ. ಇವರ ಜೊತೆಗಿದ್ದ ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಇವರಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. 

ಆರೋಪಿಗಳು ಗಾರೆಪಾಳ್ಯ ನಿವಾಸಿಯನ್ನು ಗ್ಯಾಂಗ್ ಹನಿಟ್ರ್ಯಾಪ್ ಮಾಡಿತ್ತು. ಟೆಕ್ಕಿಯೋರ್ವನ ಬಳಿ ಕಾರು, ಮೊಬೈಲ್, ಹಣ ಸುಲಿಗೆ ಮಾಡಿತ್ತು. ಟೆಕ್ಕಿ, ಸೂಪರ್ ಮಾರ್ಕೆಟ್​ಗೆ ತರಕಾರಿ ತರಲು ಹೋಗಿದ್ದಾಗ ಗ್ಯಾಂಗ್​ನ ಮಹಿಳೆ ಟೆಕ್ಕಿಗೆ ಪರಿಚಯವಾಗಿದ್ದಳು. ಬಳಿಕ, ಕುಟುಂಬಸ್ಥರನ್ನ ಪರಿಚಯಿಸಲು ಮಹಿಳೆ ಕರೆದೊಯ್ದಿದ್ದಳು.

ಟೆಕ್ಕಿಯನ್ನು ಮನೆಗೆ ಕರೆದೊಯ್ದಿದ್ದ ಆರೋಪಿ ಮಹಿಳೆ, ಬಳಿಕ ಟೆಕ್ಕಿ ಮನೆಯ ರೂಮ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಯೋಜನೆಯಂತೆ ಮನೆಗೆ ನುಗ್ಗಿದ ನಾಲ್ವರು ಆರೋಪಿಗಳು ರೂಮ್​​ನಲ್ಲಿದ್ದ ಟೆಕ್ಕಿ ಫೋಟೋ ತೆಗೆದು ಬ್ಲ್ಯಾಕ್​ಮೇಲ್ ಮಾಡಲು ತೊಡಗಿದ್ದರು. 10 ಲಕ್ಷ ರೂಪಾಯಿ ನೀಡುವಂತೆ ಯುವಕರು ಧಮ್ಕಿ ಹಾಕಿದ್ದರು. ಹಣ ನೀಡಲು ಒಪ್ಪದಿದ್ದ ವೇಳೆ ಗ್ಯಾಂಗ್​ ಸುಲಿಗೆ ಮಾಡಿತ್ತು. 

ಟೆಕ್ಕಿ ಬಳಿ ಇದ್ದ ಐಷಾರಾಮಿ ಕಾರು, 37 ಸಾವಿರ ನಗದು ಹಾಗೂ ಮೊಬೈಲ್​​ ಕಿತ್ತುಕೊಂಡು ಆರೋಪಿಗಳ ಗ್ಯಾಂಗ್ ಪರಾರಿಯಾಗಿತ್ತು. ಈ ಬಗ್ಗೆ ಟೆಕ್ಕಿ ಮೈಕೋ ಲೇಔಟ್ ಠಾಣೆಗೆ ದೂರು ನೀಡಿದ್ದರು. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿತ್ತು. ಇದೀಗ ಹನಿಟ್ರ್ಯಾಪ್ ಗ್ಯಾಂಗ್ ಖಾಕಿ ಬಲೆಗೆ ಬಿದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com