ರಾಜ್ಯ

ಹುಬ್ಬಳ್ಳಿ: 103-ವರ್ಷದ 'ಅಬ್ಬೆ' ನಿಧನ, ಅವರ ಆಸೆಯಂತೆ ಕಣ್ಣುಗಳನ್ನು ದಾನ ಮಾಡಿದ ಕುಟುಂಬ

ಹುಬ್ಬಳ್ಳಿ: 103-ವರ್ಷದ 'ಅಬ್ಬೆ' ನಿಧನ, ಅವರ ಆಸೆಯಂತೆ ಕಣ್ಣುಗಳನ್ನು ದಾನ ಮಾಡಿದ ಕುಟುಂಬ
ದೇವಮ್ಮ ಹೆಗ್ಡೆ
Published On :

ಹುಬ್ಬಳ್ಳಿ: ಜೋಯಿಡಾ ತಾಲ್ಲೂಕಿನ ಚಾಪಖಂಡ ಹಳ್ಳಿಯ ನಿವಾಸಿ, ಕಿರಿಯರಿಂದ 'ಅಬ್ಬೆ' ಎಂದು ಕರೆಯಿಸಿಕೊಳ್ಳುತ್ತಿದ್ದ 103 ವರ್ಷದ ದೇವಮ್ಮ ಹೆಗ್ಡೆ ಅವರು ಗುರುವಾರ ರಾತ್ರಿ ನಿಧನರಾಗಿದ್ದು, ಅವರ ಆಸೆಯಂತೆ ಕುಟುಂಬ ಕಣ್ಣುಗಳನ್ನು ದಾನ ಮಾಡಿದೆ. ಈ ಮೂಲಕ ಈ ಪ್ರದೇಶದ ಅತ್ಯಂತ ಹಳೆಯ ನೇತ್ರ ದಾನಿ ಎಂಬ ಗೌರವಕ್ಕೆ ಅಬ್ಬೆ ಪಾತ್ರರಾಗಿದ್ದಾರೆ.

ಕಿರಿಯ ತಲೆಮಾರುಗಳಿಂದ ಪ್ರೀತಿಯಿಂದ 'ಅಬ್ಬೆ' ಎಂದು ಕರೆಯಿಸಿಕೊಳ್ಳುತ್ತಿದ್ದ ದೇವೆಮ್ಮ ಅವರು 100ನೇ ವರ್ಷಕ್ಕೆ ಕಾಲಿಟ್ಟಾಗ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಅಬ್ಬೆ ತನ್ನ 90ನೇ ವಯಸ್ಸಿನವರೆಗೂ ಆರೋಗ್ಯವಾಗಿದ್ದರು ಮತ್ತು ರೈತ ಮಹಿಳೆಯಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು ಎಂದು ಅವರ ಕುಟುಂಬ ಸದಸ್ಯರನ್ನು ನೆನಪಿಸಿಕೊಂಡಿದ್ದಾರೆ.

ಅಬ್ಬೆಗೆ ಪಶ್ಚಿಮ ಘಟ್ಟದಲ್ಲಿ ಬೆಳೆಯುವ ಗಿಡಮೂಲಿಕೆಗಳ ಬಗ್ಗೆ ಉತ್ತಮ ಜ್ಞಾನವಿತ್ತು. ಅಬ್ಬೆಯ ಆಸೆಯಂತೆ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ ಎಂದು ದೇವಮ್ಮ ಅವರ ಮೊಮ್ಮಗ ನರಸಿಂಹ ಚಾಪಖಂಡ ಅವರು ಹೇಳಿದ್ದಾರೆ.

"ಅವರು ಇತರ ಹಲವರನ್ನು ಕಣ್ಣುಗಳನ್ನು ದಾನ ಮಾಡಲು ಪ್ರೋತ್ಸಾಹಿಸಿದ್ದರು. ಅವರಿಗೆ 100 ವರ್ಷ ತುಂಬಿದಾಗ ನಾವು ಒಂದು ಸಮಾರಂಭವನ್ನು ಆಯೋಜಿಸಿದ್ದೆವು ಮತ್ತು ಈ ವೇಳೆ ಸುಮಾರು 15 ಕುಟುಂಬ ಸದಸ್ಯರು ನೇತ್ರದಾನಕ್ಕೆ ಪ್ರತಿಜ್ಞೆ ಮಾಡಿದ್ದೇವೆ" ಎಂದು ನರಸಿಂಹ ಅವರು ತಿಳಿಸಿದ್ದಾರೆ.

85 ವರ್ಷ ವಯಸ್ಸಿನವರೆಗೂ ಅವರು ಉರುವಲು ಸಂಗ್ರಹಿಸಲು ಕಾಡಿಗೆ ಹೋಗುತ್ತಿದ್ದರು. ಸಾಯುವವರೆಗೂ ಅವರ ದೃಷ್ಟಿ ಚೆನ್ನಾಗಿತ್ತು ಮತ್ತು ಅವರ ಕಿವಿ ಸ್ಪಷ್ಟವಾಗಿ ಕೇಳುತ್ತಿದ್ದವು. ಅವರು ಆರೋಗ್ಯಕರ ಜೀವನಶೈಲಿಯನ್ನು ನಡೆಸುತ್ತಿದ್ದರು. ಆಕೆಯ ದೀರ್ಘಾಯುಷ್ಯಕ್ಕೆ ಆಹಾರವೇ ಮುಖ್ಯ ಕಾರಣ ಎಂದು ಕುಟುಂಬದ ಮತ್ತೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.