ಮುಷ್ಕರ ಮುಂದುವರಿಕೆಗೆ ಪ್ರಚೋದನೆ: 88 ಸಿಬ್ಬಂದಿಗೆ ಕೆಎಸ್ ಆರ್ ಟಿಸಿಯಿಂದ ವರ್ಗಾವಣೆ ಆದೇಶ

ಇತರ ನೌಕರರನ್ನು ಮುಷ್ಕರ ಮುಂದುವರೆಸುವಂತೆ ಪ್ರಚೋದಿಸಿದ ಆರೋಪದ ಮೇರೆಗೆ 73 ಚಾಲಕರು ಮತ್ತು ನಿರ್ವಾಹಕರು, ನಾಲ್ವರು ಸಂಚಾರಿ ಮೇಲ್ವಿಚಾರಣಾ ಸಿಬ್ಬಂದಿ ಮತ್ತು 11 ಮೆಕ್ಯಾನಿಕಲ್ ಸಿಬ್ಬಂದಿಯನ್ನು ಕೆಎಸ್ ಆರ್ ಟಿಸಿ ಶನಿವಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಕೆಎಸ್ ಆರ್ ಟಿಸಿ
ಕೆಎಸ್ ಆರ್ ಟಿಸಿ

ಬೆಂಗಳೂರು:ಇತರ ನೌಕರರನ್ನು ಮುಷ್ಕರ ಮುಂದುವರೆಸುವಂತೆ ಪ್ರಚೋದಿಸಿದ ಆರೋಪದ ಮೇರೆಗೆ 73 ಚಾಲಕರು ಮತ್ತು ನಿರ್ವಾಹಕರು, ನಾಲ್ವರು ಸಂಚಾರಿ ಮೇಲ್ವಿಚಾರಣಾ ಸಿಬ್ಬಂದಿ ಮತ್ತು 11 ಮೆಕ್ಯಾನಿಕಲ್ ಸಿಬ್ಬಂದಿಯನ್ನು ಕೆಎಸ್ ಆರ್ ಟಿಸಿ ಶನಿವಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಈ ಸಿಬ್ಬಂದಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಂತೆ ಇತರ ನೌಕರರಿಗೆ ಬೆದರಿಕೆಯೊಡ್ಡುತ್ತಿದ್ದರು. ನಿಗಮದ  ಬಸ್ಸುಗಳ ಕಾರ್ಯಾಚರಣೆಯನ್ನು ತಡೆದು  ಸಾರ್ವಜನಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತಿದ್ದರು ಎಂದು ಕೆಎಸ್ ಆರ್ ಟಿಸಿ ಪ್ರೆಸ್ ನೋಟ್ ನಲ್ಲಿ ಹೇಳಲಾಗಿದೆ. 

ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಕೆಎಸ್ ಆರ್ ಟಿಸಿ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನವೂ ಮುಗಿದಿದೆ. 

ಈ ಹಿಂದೆ ಮುಷ್ಕರ ನಡೆಸುವ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ನೌಕರರ ವಿರುದ್ಧ ಎಸ್ಮಾ ಕಾಯ್ದೆ ಬಳಸಿ ಕ್ರಮ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿತ್ತು. ಮುಷ್ಕರ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಾರಿಗೆ ನೌಕರರನ್ನು ಶುಕ್ರವಾರ ಮನವಿ ಮಾಡಿಕೊಂಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com