ಚಿಕ್ಕಮಗಳೂರಿನಲ್ಲಿ ಬಿಯರ್ ತುಂಬಿದ್ದ ಲಾರಿ ಪಲ್ಟಿ: ನಾ ಮುಂದು, ತಾ ಮುಂದು ಅಂತ ಹೊತ್ತೊಯ್ದ ಜನ, ವಿಡಿಯೋ ವೈರಲ್!

ರಾಜ್ಯದಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಅಂತಾ ಜನರು ಬಾರ್ ಗಳ ಮುಂದೆ ಸಾಲುಗಟ್ಟಿ ನಿಂತು ಖರೀದಿಸಿದ್ದು ನೋಡಿದ್ದೇವೆ. ಆದರೆ ಚಿಕ್ಕಮಗಳೂರಿನಲ್ಲಿ ಬಿಯರ್ ತುಂಬಿದ್ದ ಲಾರಿ ಪಲ್ಟಿಯಾಗಿದ್ದು ಈ ವೇಳೆ ಸ್ಥಳೀಯರು ಹಾಗೂ ರಸ್ತೆಯಲ್ಲಿ ಸಾಗುತ್ತಿದ್ದವರು ಬಿಯರ್ ಬಾಟಲಿಗಳನ್ನು ಹೊತ್ತೊಯ್ದಿದ್ದಾರೆ.
ಬಿಯರ್ ಬಾಟಲಿಗೆ ಮುಗಿಬಿದ್ದ ಜನರು
ಬಿಯರ್ ಬಾಟಲಿಗೆ ಮುಗಿಬಿದ್ದ ಜನರು

ತರೀಕರೆ (ಚಿಕ್ಕಮಗಳೂರು): ರಾಜ್ಯದಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಅಂತಾ ಜನರು ಬಾರ್ ಗಳ ಮುಂದೆ ಸಾಲುಗಟ್ಟಿ ನಿಂತು ಖರೀದಿಸಿದ್ದು ನೋಡಿದ್ದೇವೆ. ಆದರೆ ಚಿಕ್ಕಮಗಳೂರಿನಲ್ಲಿ ಬಿಯರ್ ತುಂಬಿದ್ದ ಲಾರಿ ಪಲ್ಟಿಯಾಗಿದ್ದು ಈ ವೇಳೆ ಸ್ಥಳೀಯರು ಹಾಗೂ ರಸ್ತೆಯಲ್ಲಿ ಸಾಗುತ್ತಿದ್ದವರು ಬಿಯರ್ ಬಾಟಲಿಗಳನ್ನು ಹೊತ್ತೊಯ್ದಿದ್ದಾರೆ. 

ಕಿಂಗ್ ಫಿಷರ್ ಬಿಯರ್ ತುಂಬಿದ್ದ ಲಾರಿ ನಂಜನಗೂಡಿನ ಡಿಸ್ಟಲರಿಯಿಂದ ಬೆಳಗಾವಿಗೆ ತೆರಳುತ್ತಿತ್ತು. ಆದರೆ ಎಂಸಿ ಹಳ್ಳಿ ಚಾನಲ್ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಚಾಲಕ ಲಾರಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ. 

ಇನ್ನು ಬಿಯರ್ ಲಾರಿ ಪಲ್ಟಿಯಾಗಿರುವ ವಿಷಯ ತಿಳಿದ ಸ್ಥಳೀಯರು ಹಾಗೂ ದಾರಿಹೋಕರು ಬಾಟಲಿಗಳನ್ನು ಹೊತ್ತೊಯ್ಯಲು ಮುಗಿಬಿದ್ದಿದ್ದಾರೆ. ಲಾರಿಯಲ್ಲಿ ಬರೋಬ್ಬರಿ 1150 ಬಾಕ್ಸ್ ಬಿಯರ್ ಬಾಟಲ್ ಇತ್ತು. ಇದರಲ್ಲಿ 537 ಬಾಕ್ಸ್ ಗಳು ಮಾತ್ರ ದೊರೆತಿದ್ದು ಇನ್ನುಳಿದವನ್ನು ಜನರು ದೋಚಿದ್ದಾರೆ. 

ಬಿಯರ್ ಬಾಟಲ್ ಲಾರಿ ಪಲ್ಟಿಯಾಗಿರುವ ವಿಷಯ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದರು. ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಸಾಕಷ್ಟು ಪ್ರಮಾಣದ ಬಿಯರ್ ಬಾಕ್ಸ್ ಗಳನ್ನು ಜನರು ಹೊತ್ತೊಯ್ದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com