ಬೆಂಗಳೂರಿನ 12 ಚಿತಾಗಾರಗಳ ಪೈಕಿ 7 ಕೋವಿಡ್-19 ಸೋಂಕಿತರಿಗೆ ಮೀಸಲು!

ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ 7 ಚಿತಾಗಾರಗಳನ್ನು ಕೋವಿಡ್-19 ಮೃತರಿಗೆ ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಚಿತಾಗಾರಗಳು
ಬೆಂಗಳೂರು ಚಿತಾಗಾರಗಳು
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ 7 ಚಿತಾಗಾರಗಳನ್ನು ಕೋವಿಡ್-19 ಮೃತರಿಗೆ ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಬಿಬಿಎಂಪಿ ಬೆಂಗಳೂರಿನ 12 ಚಿತಾಗಾರಗಳ ಪೈಕಿ 7 ಚಿತಾಗಾರಗಳನ್ನು ಕೋವಿಡ್-19 ಸೋಂಕಿತ ಮೃತದೇಹಗಳಿಗೆ ಮೀಸಲಿಡಲಾಗಿದೆ. ಈ ಏಳು ಚಿತಾಗಾರಗಳೆಂದರೆ ಮೆಡಿ, ಅಗ್ರಹಾರ, ಕುಡ್ಲು, ಪಣಥೂರ್, ಸುಮ್ಮನಹಳ್ಳಿ, ಪೀಣ್ಯಾ, ಮತ್ತು ಬನಶಂಕರಿ ಶವಾಗಾರಗಳಾಗಿವೆ.  ಟಿಆರ್ ಮಿಲ್ಸ್ ಮತ್ತು ತಾವರೆಕೆರೆಯಲ್ಲಿರುವ ಚಿತಾಗಾರ ಸೇರಿದಂತೆ ಉಳಿದ ಐದು ಚಿತಾಗಾರಗಳು ಸಾಮಾನ್ಯರಿಗೆ ಮೀಸಲಾಗಿರುತ್ತದೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ, ಘನತ್ಯಾಜ್ಯ ನಿರ್ವಹಣೆ ವಿಭಾಗ, ಡಿ ರಂದೀಪ್ ಅವರು, ಈ ಏಳು ಕೋವಿಡ್-19 ಗೊತ್ತುಪಡಿಸಿದ ಚಿತಾಗಾರಗಳಿಗೆ ಎಲ್ಲಾ ಆನ್‌ಲೈನ್ ಬುಕಿಂಗ್ ಅನ್ನು ನಿಷ್ಕ್ರಿಯಗೊಳಿಸುವಂತೆ ಐಟಿ ಸೆಲ್‌ಗೆ ನಿರ್ದೇಶನ ನೀಡಲಾಗಿದೆ. ಇದರಿಂದಾಗಿ ಉಂಟಾಗಬಹುದಾದ  ಗೊಂದಲವನ್ನು ತಪ್ಪಿಸಬಹುದು ಮತ್ತು ಮೃತರ ಕುಟುಂಬಸ್ಥರು ಶವ ಸಂಸ್ಕಾರಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾಗಿಲ್ಲ. ಅಂತೆಯೇ ಕೋವಿಡ್-19 ಮೃತರ ದೇಹಗಳನ್ನು ಆರ್‌ಎಫ್‌ಐಡಿ ಹಿಯರ್ಸ್ ವ್ಯಾನ್‌ಗಳಲ್ಲಿ ಸ್ವೀಕರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಈ ಏಳು ಚಿತಾಗಾರಗಳಲ್ಲಿ ಮಾರ್ಷಲ್‌ಗಳನ್ನು ಕೂಡ  ನಿಯೋಜಿಸಲಾಗುವುದು ಎಂದು ಅವರು ಹೇಳಿದರು.

ಅಲ್ಲದೆ ಶವಸಂಸ್ಕಾರದ ವೇಳೆ ಜನಸಮೂಹ ಸೇರದೇ ಇರುವುದನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಪೊಲೀಸರನ್ನು ನಿಯೋಜಿಸಲು ವಲಯ ಆಯುಕ್ತರಿಗೆ ನಿರ್ದೇಶಿಸಲಾಗಿದೆ. ಇಲ್ಲಿ ಕೋವಿಡ್-ಸೂಕ್ತವಾದ ನಡವಳಿಕೆಯನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ  ಎಂದು ಹೇಳಿದರು.

ಭಾನುವಾರ ಬೆಂಗಳೂರಿನ ಚತಾಗಾರಗಳಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದೆ. ಚಿತಾಗಾರಗಳ ಮೇಲಿನ ಹೊರೆ ಕಡಿಮೆ ಮಾಡಲು ಬಿಬಿಎಂಪಿ ಈ ಸೌಲಭ್ಯವನ್ನು ರಚಿಸಿದೆ. ಈ ಶವಾಗಾರಗಳಲ್ಲಿ ಎಲ್ಲವೂ ಉಚಿತ ಎಂದು ಬಿಬಿಎಂಪಿ ಘೋಷಿಸಿತ್ತು. ಅಲ್ಲದೆ ಶೂನ್ಯ ಕಾಯುವ ಸಮಯದ ಭರವಸೆ ನೀಡಿತ್ತು. ಈ ಬಗ್ಗೆ  ಸ್ವತಃ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್ ಅವರು ಸ್ಮಶಾನಗಳಲ್ಲಿ ಶವಸಂಸ್ಕಾರಕ್ಕೆ ಅನುಮತಿಸುವ ಕುರಿತು ಆದೇಶ ಹೊರಡಿಸಿದ್ದರು. ಆದೇಶದ ಪ್ರಕಾರ, ಕೋವಿಡ್-19 ನಡವಳಿಕೆಯನ್ನು ಅನುಸರಿಸಬೇತು. ಶವಸಂಸ್ಕಾರದ ವೇಳೆ ಗರಿಷ್ಠ ಐದು ಜನರೊಂದಿಗೆ  ಅಂತ್ಯಕ್ರಿಯೆಗೆಅನುಮತಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ತಾವರೆಕೆರೆ ಮತ್ತು ಕೆಂಗೇರಿ ಮುಖ್ಯ ರಸ್ತೆಯ ಚೆನ್ನೇನಹಳ್ಳಿ ಗ್ರಾಮ ಪಂಚಾಯತ್‌ನ ಕುರುಬರಹಳ್ಳಿ ಮೈದಾನದಲ್ಲಿ ಜಿಲ್ಲಾಡಳಿತ ಭಾನುವಾರ ಅಂತ್ಯಕ್ರಿಯೆ ಆರಂಭಿಸಿತು. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು ಮೊದಲ ದಿನ 15 ಶವಗಳನ್ನು ಇಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ನಾಲ್ಕು ದಿನಗಳಲ್ಲಿ ಎಲ್ಲಾ  ಮೂಲಸೌಕರ್ಯಗಳನ್ನು ರಚಿಸಲಾಗುತ್ತದೆ. ಶವಸಂಸ್ಕಾರಕ್ಕಾಗಿ ಸಾಂಪ್ರದಾಯಿಕ ಉರುವಲು ವಿಧಾನವನ್ನು ಬಳಸಿಕೊಂಡು ಏಕಕಾಲದಲ್ಲಿ 25 ಶವಗಳನ್ನು ದಹನ ಮಾಡಲು ಫೈರ್ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗಿದೆ, ಬೋರ್‌ವೆಲ್ ಕೊರೆದು, ನೀರಿನ ಸೌಲಭ್ಯವನ್ನು ರಚಿಸಲಾಗಿದೆ, ಉರುವಲು, ನುರಿತ  ಕಾರ್ಮಿಕರು ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ರಚಿಸಲಾಗಿದೆ ಎಂದು ಹೇಳಿದರು
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com