ರಾಜ್ಯದಲ್ಲಿ ಕೊರೋನಾ ಕರ್ಫ್ಯೂ: ಬಿಹಾರ, ಪಶ್ಚಿಮ ಬಂಗಾಳಕ್ಕೆ ವಿಶೇಷ ರೈಲು, ಹಲವು ರೈಲು ಸಂಚಾರ ರದ್ದು 

ಕರ್ನಾಟಕದಲ್ಲಿ ಕೊರೋನಾ ಕರ್ಫ್ಯೂ 14 ದಿನಗಳ ಕಾಲ ಜಾರಿಯಲ್ಲಿರುವುದರಿಂದ ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳ ಜನತೆ ಊರಿಗೆ ಹೋಗಲು ಬಯಸಿರುವುದರಿಂದ ರೈಲುಗಳ ಟಿಕೆಟ್ ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಕರ್ಫ್ಯೂ 14 ದಿನಗಳ ಕಾಲ ಜಾರಿಯಲ್ಲಿರುವುದರಿಂದ ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳ ಜನತೆ ಊರಿಗೆ ಹೋಗಲು ಬಯಸಿರುವುದರಿಂದ ರೈಲುಗಳ ಟಿಕೆಟ್ ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಕೊರೋನಾ ಕರ್ಫ್ಯೂ ಹೇರಿರುವುದರಿಂದ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟವಾಗುತ್ತದೆ ಎಂದು ಬೆಂಗಳೂರು ತೊರೆದು ಊರಿಗೆ ಹೋಗಲು ಕಾರ್ಮಿಕರು ಮುಂದಾಗಿದ್ದಾರೆ. ಬೆಂಗಳೂರಿನ ಯಶವಂತಪುರ ಮತ್ತು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಬೇಡಿಕೆಯ ಪಟ್ಟಿ ಹೆಚ್ಚಾಗಿದ್ದನ್ನು ಕಂಡು ನೈರುತ್ಯ ರೈಲ್ವೆ ಇಂದು ಬೆಳಗ್ಗೆ 8 ಗಂಟೆಗೆ ಬಿಹಾರದ ದಾನಪುರ್ ಗೆ ಮತ್ತು ಇಂದು ರಾತ್ರಿ ಪಾಟ್ನಾಗೆ ವಿಶೇಷ ರೈಲು ಪ್ರಯಾಣವನ್ನು ಪ್ರಕಟಿಸಿದೆ.

ಬೆಂಗಳೂರು-ದಾನಪುರ್ ವಿಶೇಷ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಲು ಬುಕ್ಕಿಂಗ್ ತೆರೆದ ಎರಡೇ ಗಂಟೆಗಳಲ್ಲಿ ಟಿಕೆಟ್ ಭರ್ತಿಯಾಗಿದೆ. ಇದಕ್ಕೂ ಮುನ್ನ ನೈರುತ್ಯ ರೈಲು ಬೆಂಗಳೂರಿನಿಂದ ಹೌರಾಗೆ ನಾಡಿದ್ದು 30ರಂದು ಮತ್ತು ಬೆಂಗಳೂರಿನಿಂದ ಟಾಟಾ ನಗರಕ್ಕೆ ಮೇ 4ರಂದು ವಿಶೇಷ ರೈಲು ಪ್ರಯಾಣವನ್ನು ಪ್ರಕಟಿಸಿತ್ತು.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ ಕೆ ವರ್ಮ, ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ ರೈಲ್ವೆ ಪ್ರಯಾಣಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ಗೊತ್ತಾಯಿತು. ಹೀಗಾಗಿ ಅತ್ತ ಕಡೆ ವಿಶೇಷ ರೈಲು ಸಂಚಾರ ಆರಂಭಿಸುತ್ತಿದ್ದೇವೆ. ಏಪ್ರಿಲ್ 24ರ ನಂತರ ನೈರುತ್ಯ ರೈಲ್ವೆ ಸಂಪೂರ್ಣ ಭರ್ತಿಯಾದ ವಿಶೇಷ ರೈಲು ಯಶವಂತಪುರದಿಂದ ಹೌರಾಗೆ, ಗೋರಖ್ ಪುರಕ್ಕೆ, ಗುವನಹಿ ಮತ್ತು ದಾನಪುರಕ್ಕೆ ಹಾಗೂ ಮತ್ತೊಂದು ಮೈಸೂರಿನಿಂದ ಹೌರಾಕ್ಕೆ ಸಂಚರಿಸಲಿವೆ. ರೈಲುಗಳಲ್ಲಿ ಒಟ್ಟಾರೆ 7 ಸಾವಿರ ಸೀಟುಗಳಿರುತ್ತವೆ ಎಂದರು.

ಹಲವು ರೈಲು ಸಂಚಾರ ರದ್ದು: ಇಂದಿನಿಂದ ವಿವಿಧ ದಿನಾಂಕಗಳಲ್ಲಿ ಈ ಕೆಳಗಿನ ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಕೆಎಸ್‌ಆರ್ ಬೆಂಗಳೂರು ಮತ್ತು ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ಶತಾಬ್ದಿ ಇಂದಿನಿಂದ ಎರಡೂ ಮಾರ್ಗಗಳನ್ನು ರದ್ದುಗೊಳಿಸಿದೆ. ಕೊಚುವೇಲಿ-ಬನಸ್ವಾಡಿ-ಬೈವೀಕ್ಲಿ ಹಮ್ಸಾಫರ್ ವಿಶೇಷ ರೈಲು ಕೊಚುವೇಲಿನಿಂದ ನಾಳೆ ಮತ್ತು ಬಾಣಸವಾಡಿಯಿಂದ ನಾಡಿದ್ದು ರದ್ದುಗೊಂಡಿದೆ.

ಕೊಯಮತ್ತೂರು-ಕೆಎಸ್ಆರ್ ಬೆಂಗಳೂರು- ಕೊಯಮತ್ತೂರು ನಾಳೆ ಎರಡೂ ಕಡೆಯಿಂದ ಸಂಚಾರ ರದ್ದುಗೊಂಡಿದೆ. ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು-ಚೆನ್ನೈ ಸೆಂಟ್ರಲ್ ನಾಳೆ ಎರಡೂ ಕಡೆಯಿಂದ ರದ್ದುಗೊಂಡಿದೆ. ಎರ್ನಾಕುಲಂ-ಬಾಣಸವಾಡಿ-ಎರ್ನಾಕುಲಂ ವಾರಕ್ಕೆ ಎರಡು ಬಾರಿಯ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು ಮೇ 3 ರಿಂದ ಎರ್ನಾಕುಲಂ ಮತ್ತು ಮೇ 5 ರಿಂದ ಬಾಣಸವಾಡಿಯಿಂದ ಸಂಚಾರ ರದ್ದುಗೊಂಡಿದೆ. ಇಂದಿನಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್-ಗಡಾಗ್ ಎಕ್ಸ್‌ಪ್ರೆಸ್-ಸಿಎಸ್‌ಟಿಎಂ ರದ್ದುಗೊಂಡಿದೆ. ಮೂರು ಜೋಡಿ ಮೆಮು ರೈಲುಗಳನ್ನು ನಾಳೆ ಸಂಚಾರ ರದ್ದುಪಡಿಸಲಾಗಿದೆ. ಅವುಗಳು ಬೈಯಪ್ಪನಹಳ್ಳಿ-ಹೊಸೂರು-ಬೈಯಪ್ಪನಹಳ್ಳಿ, ಕೆಎಸ್‌ಆರ್-ಹೊಸೂರು-ಕೆಎಸ್‌ಆರ್ ಮತ್ತು ಕೆಎಸ್‌ಆರ್-ಮಾರಿಕಪ್ಪಂ-ಕೆಎಸ್‌ಆರ್ ನಡುವಿನ ರೈಲುಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com